Top

ದಂಪತಿ ಫೋಟೋ ಶೂಟ್ ಮಾಡಿಸುವಾಗ ಉರುಳಿ ಬಿದ್ದ ಮರ, ನಂತರ ಏನಾಯ್ತು?

ದಂಪತಿ ಫೋಟೋ ಶೂಟ್ ಮಾಡಿಸುವಾಗ ಉರುಳಿ ಬಿದ್ದ ಮರ, ನಂತರ ಏನಾಯ್ತು?
X

ವಿದೇಶದಲ್ಲಿ ದಂಪತಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸುತ್ತಿರುವ ಸಂದರ್ಭದಲ್ಲಿ ದುರಂತವೊಂದು ತಪ್ಪಿದೆ. ಚೆಯೆನ್ನೆ ಮತ್ತು ಲೂಕಾಸ್ ಹೊಸದಾಗಿ ವಿವಾಹವಾಗಿದ್ದು, ಫೋಟೋಶೂಟ್ ಮಾಡಿಸುತ್ತಿದ್ದರು, ಅಲ್ಲದೇ ತಾವು ಪರಸ್ಪರ ಎಷ್ಟು ಪ್ರೀತಿಸುತ್ತೇವೆ ಎಂಬುದರ ಬಗ್ಗೆ ದಂಪತಿ ಮಾತನಾಡುತ್ತಿದ್ದರು. ಇದನ್ನು ವಿಡಿಯೋ ಮಾಡುತ್ತಿದ್ದ ಸಂದರ್ಭದಲ್ಲಿ ಮರವೊಂದು ಉರುಳಿ ಬಿದ್ದಿದ್ದೆ.ಇದಕ್ಕೂ ಮೊದಲು ಶಬ್ಧ ಕೇಳಿಸಿಕೊಂಡಿದ್ದ ದಂಪತಿ ಅದೃಷ್ಟವಶಾತ್ ಥಟ್ ಅಂತಾ ಎದ್ದು ಬಿಟ್ಟಿದ್ದಾರೆ. ಈ ವೇಳೆ ಭಾರೀ ಅನಾಹುತ ತಪ್ಪಿದೆ.

ಇನ್ನು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ ಫೋಟೋಗ್ರಾಫರ್, ಮರದ ಬುಡಕ್ಕಿಂತ, ಈ ದಂಪತಿಯ ಪ್ರೀತಿಗೆ ಹೆಚ್ಚಿ ಶಕ್ತಿ ಇದೆ ಎಂದು ಟ್ಯಾಗ್ ಮಾಡಿದ್ದಾರೆ. ಅಲ್ಲದೇ ನವವಿವಾಹಿತರು ಸಾವಿಗೆ ಸಮೀಪವಾಗಿ ಬಂದರು ಅಂತಲೂ ಟೈಟಲ್ ಹಾಕಿದ್ದಾರೆ.

ದಂಪತಿ ಕಳೆದ ಜೂನ್ 30ರಂದು ವಿವಾಹವಾಗಿದ್ದು, ಈ ವಿಡಿಯೋವನ್ನು ಜುಲೈ ಮೂರರಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.ಇದೀಗ ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದೆ.

Next Story

RELATED STORIES