Top

ಕುಂದಾಪುರದಲ್ಲಿ ಕಿಡಿಗೇಡಿಗಳಿಂದ ಕೆರೆಗೆ ವಿಷಪ್ರಾಶನ : ಸಿಗಡಿಗಳ ಮಾರಣಹೋಮ

ಕುಂದಾಪುರದಲ್ಲಿ ಕಿಡಿಗೇಡಿಗಳಿಂದ ಕೆರೆಗೆ ವಿಷಪ್ರಾಶನ : ಸಿಗಡಿಗಳ ಮಾರಣಹೋಮ
X

ಉಡುಪಿ : ಜಿಲ್ಲೆ ಕುಂದಾಪುರ ದಲ್ಲಿ ಕಿಡಿಕೇಡಿಗಳಿಂದ ಸಿಗಡಿ ಕೆರೆಗೆ ವಿಷಪ್ರಾಶನ ಮಾಡಿದ ಘಟನೆ ನಡೆದಿದೆ . ಹಗಲಿರುಳು ಶ್ರಮ ವಹಿಸಿ ನಿಗಾ ಇಟ್ಟು ಬೆಳೆಸಿದ್ದ ಸಿಗಡಿ ಕೃಷಿ ಕೆರೆಗೆ ದುಷ್ಕರ್ಮಿಗಳು ರಸಾಯನಿಕ ಸಿಂಪಡಿಸಿ ಪರಾರಿಯಾಗಿರುವ ಆತಂಕಕಾರಿ ಘಟನೆ ವರದಿಯಾಗಿದೆ.

ರಾಸಾಯನಿಕ ಸಿಂಪಡಿಸಿದ ಪರಿಣಾಮ ಕೊಯ್ಲಿಗೆ ಬಂದಿದ್ದ 25 ಲಕ್ಷ ರೂಪಾಯಿ ಮೌಲ್ಯದ ಸಿಗಡಿ ಬೆಳೆ ಸಂಪೂರ್ಣ ನಾಶವಾಗಿದೆ. ನಾಲ್ಕೈದು ದಿನಗಳಲ್ಲಿ ಸಿಗಡಿ ಹಾರ್ವೆಸ್ಟಿಂಗ್ ನಡೆಯಬೇಕಾಗಿದ್ದು ಸಿಗಡಿ ಮರಿಗಳು ಚೆನ್ನಾಗಿ ಬೆಳೆದಿದ್ದವು ಎನ್ನಲಾಗಿದೆ. ವ್ಯಾವಹಾರಿಕ ದ್ವೇಷದಿಂದ ಈ ಕೃತ್ಯ ನಡೆಸಿರಬಹುದಾಗಿದೆ ಎಂದು ಶಂಕಿಸಲಾಗಿದೆ.

ಕುಂದಾಪುರ ತಾಲೂಕಿನ ಅರಾಟೆಯಲ್ಲಿರುವ ಸಿಗಡಿ ಕೆರೆಗೆ ಭಾನುವಾರ ತಡರಾತ್ರಿ ದುಷ್ಕರ್ಮಿಗಳು ಕೆಮಿಕಲ್ ಹಾಕಿ ಪರಾರಿಯಾಗಿದ್ದಾರೆ. ಈ ಕೆರೆ ಬಂಟ್ವಾಡಿ ನಿವಾಸಿ ನರಸಿಂಹ ಮೊಗವೀರರಿಗೆ ಸಂಬಂಧಿಸಿದೆ ಎನ್ನಲಾಗಿದೆ. ಕೆಮಿಕಲ್ ಸಿಂಪಡಿಸಿದ ಪರಿಣಾಮ 9 ಟನ್ ಸಿಗಡಿ ಬೆಳೆ ಸಂಪೂರ್ಣ ನಾಶವಾಗಿದೆ. ಬೆಳೆದ ಸಿಗಡಿಗಳು ಕೆರೆಯಲ್ಲಿ ಸತ್ತು ಬಿದ್ದು ತೇಲಾಡುತ್ತಿವೆ. 25 ಲಕ್ಷಕ್ಕೂ ಹೆಚ್ಚಿನ ನಷ್ಟ ಸಂಭವಿಸಿದೆ.

ಸಿಗಡಿ ಕೆರೆಗೆ ಇಬ್ಬರು ಕಾವಲುಗಾರರಿದ್ದರೂ ಈ ಕೃತ್ಯ ನಡೆದಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Next Story

RELATED STORIES