Top

ಮಾನವೀಯತೆ ಮರೆತ ಜನ : ಗಾಯಾಳು ಪತಿಯ ರಕ್ಷಣೆಗಾಗಿ ಪತ್ನಿಯ ಗೋಳಾಟ

ಮಾನವೀಯತೆ ಮರೆತ ಜನ : ಗಾಯಾಳು ಪತಿಯ ರಕ್ಷಣೆಗಾಗಿ ಪತ್ನಿಯ ಗೋಳಾಟ
X

ಚಿಕ್ಕಬಳ್ಳಾಪುರ : ಅಪಘಾತವಾದ ಸಂದರ್ಭದಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವವರನ್ನು ರಕ್ಷಿಸಬೇಕಾದ್ದು ಎಲ್ಲರ ಕರ್ತವ್ಯ. ಹೀಗೆ ರಕ್ಷಣೆ ಮಾಡಿದವರನ್ನು ಪೊಲೀಸರು ಸಾಕ್ಷೀದಾರರನ್ನಾಗಿ ಮಾಡಬಾರದು ಎಂದು ಸುಪ್ರೀಂ ಕೋರ್ಟ ಸಹ ಖಡಕ್ ಸೂಚನೆ ನೀಡಿದೆ. ಆದರೂ ಜನರು ಮಾತ್ರ ಅಪಘಾತವಾದ ಸಂದರ್ಭದಲ್ಲಿ ಮಾನವೀಯತೆ ಮರೆಯುತ್ತಿದ್ದಾರೆ. ರಕ್ಷಿಸಿ, ಅಮೂಲ್ಯ ಜೀವವನ್ನು ರಕ್ಷಿಸಬೇಕಾದವರೇ, ಅಪಘಾತದ ಸ್ಥಳದಲ್ಲಿ ಮೊಬೈಲ್ ಹಿಡಿದು ಚಿತ್ರೀಕರಣಕ್ಕೆ ಇಳಿಯುತ್ತಿದ್ದಾರೆ. ಹೀಗೆ ಇಳಿದದ್ದಕ್ಕೇ, ಒಂದು ಜೀವ ಬಲಿಯಾಗಿ, ಮಾನವೀಯತೆ ಮರೆಯಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

[story-lines]

ಈ ಘಟನೆ ಕಳೆದ ನಿನ್ನೆ ನಡೆದಿದ್ದರೂ, ಇಂದು ಅಪಘಾತದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿ ಪ್ರತಿಯೊಬ್ಬರು, ಅಯ್ಯೋ, ಛೇ.., ಹೀಗೆ ಆಗಬಾರದಾಗಿತ್ತು. ಯಾರಾದರೂ ರಕ್ಷಣೆ ಮಾಡಬಾರದಾಗಿತ್ತಾ ಅಂತ ಮರುಕ ಪಡುವಂತಾಗಿದೆ. ಆದರೇ ವೀಡಿಯೋ ದೃಶ್ಯವನ್ನು ಚಿತ್ರಿಸಿಕೊಳ್ಳುವಷ್ಟು ಕುತೂಹಲದಲ್ಲಿದ್ದ ವ್ಯಕ್ತಿಗಳು ಗಾಯಗೊಂಡು ನರಳಾಡುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿ, ಅಮೂಲ್ಯ ಜೀವವನ್ನು ಉಳಿಸಲು ಸಕ್ರೀಯವಾಗದೇ, ಒಂದು ಜೀವವನ್ನೇ ಬಲಿ ಪಡೆದಿದ್ದಾರೆ.

ಸಂತೆಬಿದನೂರಿನ ಮೇಳ್ಯಕ್ಕೆ ಮಹ್ಮದ್‌ ಖಾನ್‌ ಮತ್ತು ಈತನ ಪತ್ನಿ ಆಟೋದಲ್ಲಿ ತೆರಳುತ್ತಾ ಇದ್ದರು. ಈ ವೇಳೆ ಹಿಂದೂಪುರ ತಾಲೂಕು ಗುಡ್ಡಂಪಲ್ಲಿ ಗ್ರಾಮದ ಬಳಿ, ಆಟೋದ ಮುಂದಿನ ಚಕ್ರ ಮುಗುಚಿ ಬಿದ್ದ ಪರಿಣಾಮ, ಆಟೋದಲ್ಲಿದ್ದ ಗೌರಿಬಿದನೂರು ತಾಲೂಕಿನ ಮೇಳ್ಯಾದ ಮಹ್ಮದ್ ಖಾನ್ (50) ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು, ಗಾಯಾಳುಗಳನ್ನು ರಕ್ಷಿಸುವುದನ್ನು ಮರೆತು, ಮೊಬೈಲ್‌ನಲ್ಲಿ ಅಪಘಾತದ ದೃಶ್ಯಾವಳಿಯನ್ನು ಚಿತ್ರಿಸಿಕೊಂಡಿದ್ದಾರೆ.

https://www.youtube.com/watch?v=X73f-Eryf5c&feature=youtu.be

ಇತ್ತ ಪತಿ ಮಹ್ಮದ್‌ ಖಾನ್‌ ತೀವ್ರವಾಗಿ ಗಾಯಗೊಂಡಿದ್ದರಿಂದ, ಆಸ್ಪತ್ರೆಗೆ ಸಾಗಿಸುವಂತೆ ಪತ್ನಿ ಗೋಳಾಡುತ್ತಿದ್ದರೂ ಯಾರೊಬ್ಬರು ಕಿವಿಗೊಡಲಿಲ್ಲ. ರಕ್ತದ ಮಡುವಿನಲ್ಲಿದ್ದ ಮಹ್ಮದ್‌ ಖಾನ್‌ನನ್ನು ಹೇಗೋ ಆಸ್ಪತ್ರೆಗೆ ಸಾಗಿಸಲು ಕೊಂಡೊಯ್ಯಲಾಗಿದೆ. ಆದರೇ ತೀವ್ರ ರಕ್ತ ಸ್ರಾವದಿಂದ್ದಾಗಿ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಮಹ್ಮದ್‌ ಖಾನ್‌ ಸಾವನ್ನಪ್ಪಿದ್ದಾರೆ. ಈ ಸಂಬಂಧ ಹಿಂದೂಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಎಲ್ಲಾ ಅಪಘಾತದ ದೃಶ್ಯಾವಳಿಯನ್ನು ಸ್ಥಳಕ್ಕೆ ಬಂದವರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳ ತೊಡಗುವ ಬದಲು, ತೀರ್ವ ರಕ್ತ ಸ್ರಾವ ಆಗ್ತಾ ಇದೆ. ರಕ್ಷಣೆ ಮಾಡಿ, ಸೂಕ್ತ ಕಾಲದಲ್ಲಿ ಚಿಕಿತ್ಸೆ ಕೊಡಿಸಿದರೇ ವ್ಯಕ್ತಿ ಬದುಕಬಹುದು ಎಂಬ ಕಿಂಚಿತ್‌ ಕಾಳಜಿ ಕೂಡ ಇಲ್ಲದೇ ಒಬ್ಬರ ಸಾವಿಗೆ ಕಾರಣರಾಗಿದ್ದಾರೆ.

ಆಂದ್ರದ ಅನಂತಪುರ ಜಿಲ್ಲೆಯ ಹಿಂದೂಪುರ ತಾಲೂಕಿನ ಹಳ್ಳಿಯಲ್ಲಿ ಈ ಘಟನೆ, ಮಾನವಿಯತೆ ಮರೆತ ಆಂದ್ರ ಕರ್ನಾಟಕ ಗಡಿನಾಡ ಜನತೆಯ ನಡೆಯನ್ನು ಎತ್ತಿ ತೋರಿಸಿದಂತಿದೆ. ಹೀಗಾಗಿ ಓದುಗರೇ, ಇಂತಹ ಸಂದರ್ಭದಲ್ಲಿ ಮಾವೀಯತೆಯನ್ನು ಮುಂದೆ ಮಾಡಿ. ನೀವು ಸಕಾಲದಲ್ಲಿ ತೋರುವ ನಿಮ್ಮ ಈ ನಡೆ, ಅದೆಷ್ಟೋ ಕುಟುಂಬಗಳಿಗೆ ಆಸರೆಯಾದವರ ಜೀವವನ್ನು ರಕ್ಷಿಸಿ, ನಿಮಗೊಂದು ಧನ್ಯತೆಯ ಕೃತಜ್ಞನೆ ಅರ್ಪಿಸಬಹುದು. ಅಲ್ಲದೇ ನೀವು ಮಾಡುವ ಕಾಳಜಿ, ಸಾವು ಬದುಕಿನಲ್ಲಿನ ವ್ಯಕ್ತಿಯನ್ನು ರಕ್ಷಿಸಿದ ಹೆಮ್ಮೆಯನ್ನು ನಿಮ್ಮಲ್ಲಿ ಮೂಡಿಸುತ್ತದೆ. ಇತರರಿಗೂ ಮಾದರಿಯಾಗಿ ನಿಮ್ಮ ನಡೆ ತೋರುತ್ತದೆ ಎಂಬುದೇ ನಮ್ಮ ಟಿವಿ5 ಕನ್ನಡದ ಕಳಕಳಿಯ ಮನವಿ. ಈ ಮೂಲಕ ನಮ್ಮ ವಿನಂತಿ.

Next Story

RELATED STORIES