ನಕಲಿ ಅಂಕಪಟ್ಟಿ ಪ್ರಕರಣ : ಹರ್ಮಾನ್ ಪ್ರೀತ್ ಕೌರ್ಗೆ ಪಂಜಾಬ್ ಸರ್ಕಾರ ಬಿಗ್ ಶಾಕ್

X
TV5 Kannada10 July 2018 12:56 PM GMT
ಚಂಡಿಗಢ : ಭಾರತದ ಮಹಿಳಾ ಟಿ-20 ಕ್ರಿಕೆಟ್ ತಂಡದ ನಾಯಕಿ ಹರ್ಮಾನ್ ಪ್ರೀತ್ ಕೌರ್ಗೆ ಪಂಜಾಬ್ ಸರ್ಕಾರ ಬಿಗ್ ಶಾಕ್ ನೀಡಿದೆ. ಅವರ ಪದವಿ ಅಂಕಪಟ್ಟಿ ನಕಲಿಯೆಂದು ಸಾಬೀತಾಗಿದ್ದು, ಅವರಿಗೆ ಸರ್ಕಾರ ನೀಡಿದ್ದ ಡಿಎಸ್ಪಿ ಹುದ್ದೆ ಹಿಂಪಡೆದಿದೆ.
ಕಳೆದ ಮಾರ್ಚ್ 1ರಂದು ಡಿಎಸ್ಪಿಯಾಗಿ ಸೇರ್ಪಡೆಯಾಗಿದ್ದರು. ಈ ಸಂದರ್ಭದಲ್ಲಿ ಮೀರತ್ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಿಂದ 2011ರಲ್ಲಿ ಪದವಿ ಪಡೆದಿರುವುದಾಗಿ ಅಂಕಪಟ್ಟಿ ಸಲ್ಲಿಸಿದ್ದರು. ಆದ್ರೆ, ಪೊಲೀಸ್ ಪರಿಶೀಲನೆಯಲ್ಲಿ ನಕಲಿ ಎಂಬುದು ದೃಢಪಟ್ಟಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹರ್ಮಾನ್ ಪ್ರೀತ್ ಅವರ ಮ್ಯಾನೇಜರ್, ರೈಲ್ವೆ ಇಲಾಖೆಯಲ್ಲಿ ಕೆಲಸ ಪಡೆಯುವಾಗ ಸಲ್ಲಿಸಿದ್ದ ಪದವಿ ಅಂಕಪಟ್ಟಿಯನ್ನೇ ಪೊಲೀಸ್ ಇಲಾಖೆಗೆ ಸಲ್ಲಿಸಲಾಗಿತ್ತು. ಇದು ಹೇಗೆ ನಕಲಿಯಾಗಿದೆ ಎಂಬುದು ತಿಳಿಯುತ್ತಿಲ್ಲ ಅಂತ ತಿಳಿಸಿದ್ದಾರೆ.
Next Story