Top

ಮುಲಾಜಿಲ್ಲದೇ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಡಿಸಿ: ವಿಡಿಯೋ ವೈರಲ್

ಮುಲಾಜಿಲ್ಲದೇ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಡಿಸಿ: ವಿಡಿಯೋ ವೈರಲ್
X

ರಾಯಚೂರು: ರಾಯಚೂರಿನ ಡಿಸಿ ಲಂಚಬಾಕ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಬೈದು ಬೆವರಿಳಿಸಿದ್ದಾರೆ. ಜಿಲ್ಲಾಧಿಕಾರಿ ಬಗಾದಿ ಗೌತಮ್ ಕೆಲ ಕಚೇರಿಗಳಿಗೆ ಭೇಟಿ ನೀಡಿ, ಅಲ್ಲಿರುವ ಅಧಿಕಾರಿಗಳ ಕೆಲಸ ಗಮನಿಸಿದ್ದಾರೆ. ಅಧಿಕಾರಿಗಳು ಜನರಿಗೆ ಕೆಲಸ ಮಾಡಿಕೊಡುವುದನ್ನು ಬಿಟ್ಟು, ಅವರ ಹತ್ತಿರ ಹಣ ತೆಗೆದುಕೊಂಡು, ಅವರನ್ನ ಪೀಡಿಸುತ್ತಿದ್ದರೆಂದು ಕಂಪ್ಲೇಂಟ್ ಬಂದ ತಕ್ಷಣವೇ, ಫೈಲ್ ಓಪೆನ್ ಮಾಡಿ, ಅಧಿಕಾರಿಗಳ ಕೆಲಸ ಗಮನಿಸಿದ ಜಿಲ್ಲಾಧಿಕಾರಿ ಗೌತಮ್, ಡಿಸಿ ಕಚೇರಿ, ನಗರಸಭೆಯ ವಿವಿಧ ವಿಭಾಗದ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಝಾಡಿಸಿದ್ದಾರೆ. ಬ್ಲಡಿ ಬೆಗ್ಗರ್ ಬ್ರೋಕರ್ಸ್, ನೀವು ಮನುಷ್ಯರಾ ಎಂದು ಸಿಕ್ಕಾಪಟ್ಟೆ ಬೈದಿದ್ದಾರೆ.

ಲಂಚ ಪಡೆದು ಸರಿಯಾಗಿ ಕೆಲಸ ಮಾಡಿಕೊಡದ ಅಧಿಕಾರಿಗಳ ಅಮಾನತಿಗೆ ಡಿಸಿ ಲೀಸ್ಟ್ ರೆಡಿ ಮಾಡಿದ್ದಾರೆ.

ಇನ್ನು ಡಿಸಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಕಂಗಾಲಾಗಿ ನಿಂತಿದ್ರು. ಇವರು ಕ್ಲಾಸ್ ತೆಗೆದುಕೊಂಡ ರೀತಿಗೆ ಅಧಿಕಾರಿಗಳು ಇನ್ಯಾವತ್ತೂ ಲಂಚದ ಸುದ್ದಿಗೆ ಹೋಗುವುದಿಲ್ಲವೇನೋ ಅನ್ನಿಸಿದೆ.ಇನ್ನು ಈ ವಿಡಿಯೋ ನೋಡಿದವರಿಗೆ ಡಿಸಿ ಇದ್ದರೆ ಹಿಂಗಿರಬೇಕು ಅಂತಾ ಅನ್ನಿಸದೇ ಇರದು.

Next Story

RELATED STORIES