Top

"ಬಸವರಾಜ ಸಮಿತಿ"ವರದಿ ಜಾರಿಗೆ ರೇಷ್ಮೆ ಬೆಳಗಾರರ ಒತ್ತಾಯ

ಬಸವರಾಜ ಸಮಿತಿವರದಿ ಜಾರಿಗೆ ರೇಷ್ಮೆ ಬೆಳಗಾರರ ಒತ್ತಾಯ
X

ರಾಮನಗರ : ಸೂಕ್ಷ ಬೆಳೆ ವಿಚಾರದಲ್ಲಿ ರಾಜ್ಯ ಸರ್ಕಾರ ರೈತರ ಜೊತೆ ಚೆಲ್ಲಾಟವಾಡುತ್ತಿದೆ. ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ವಕ್ಷೇತ್ರ ರಾಮನಗರ ಜಿಲ್ಲೆಯಲ್ಲೇ ರೇಷ್ಮೆ ಬೆಳೆಗಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೇಷ್ಮೆ ಬೆಳೆಗಾರರ ಕೈ ಹಿಡಿಯಲೆಂದೇ ಕಳೆದ ಸರ್ಕಾರ ರಚಿಸಿದ ಬಸವರಾಜ ಸಮಿತಿ ವರಧಿಯನ್ನ ಜಾರಿಗೊಳಸುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ.

ಬೆಲೆ ಕುಸಿತಗೊಂಡು ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ

ರೇಷ್ಮೆನಗರಿ ಎಂದೇ ಖ್ಯಾತಿ ಪಡೆದಿರುವ ರಾಮನಗರ ಜಿಲ್ಲೆಯಲ್ಲೇ ಸಿಲ್ಕ್‌ಗೆ ಸೂಕ್ತ ಬೆಲೆಯಿಲ್ಲದಂತಾಗಿದೆ. ಒಂದು ಕೆ.ಜಿ ರೇಷ್ಮೆಗೆ ಮಾರುಕಟ್ಟೆಯಲ್ಲಿ ಕೇವಲ 300 ರಿಂದ 350 ರೂಪಾಯಿ ಸಿಗುತ್ತಿದ್ದು ರೇಷ್ಮೆ ಬೆಳೆಗಾರರು ಕಂಗಲಾಗಿದ್ದಾರೆ. ರಾಮನಗರ ಜಿಲ್ಲೆ ಸಿಎಂ ಕ್ಷೇತ್ರವಾಗಿದೆ, ಆದರೆ ಈ ಜಿಲ್ಲೆಯಲ್ಲೇ ರೇಷ್ಮೆಗೆ ಬೆಂಬಲ ಬೆಲೆ ಇಲ್ಲದಿರುವುದು ನಿಜಕ್ಕೂ ನಾಚಿಕೆಪಡುವ ಸಂಗತಿ.

ಈ ಬಾರಿಯ ಬಜೆಟ್‌ನಲ್ಲೂ ಕೂಡ ರೇಷ್ಮೆ ಬೆಳೆ ಹಾಗೂ ಉದ್ಯಮದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಹಾಗೇ ಮುಖ್ಯವಾಗಿ ರೈತರ ಹಿತಕ್ಕಾಗಿ ರಾಮನಗರದಲ್ಲಿ ರೇಷ್ಮೆ ನೂಲು ಬಿಡಿಸುವ ಕಾರ್ಖಾನೆಯನ್ನ ತೆರೆಯಬೇಕು ಹಾಗೂ ಸರ್ಕಾರದಿಂದ ರೀಲರ್ಸ್ ಗಳನ್ನ ನೇಮಕ ಮಾಡಬೇಕೆಂದು ಒತ್ತಾಯಿಸಿದ್ದರು. ಹಾಗೆಯೇ ರೇಷ್ಮೆ ಬೆಳೆಗಾರರ ಸಮಸ್ಯೆ ನಿವಾರಣೆಗೆಂದೇ ಕಳೆದ ಸರ್ಕಾರ ಬಸವರಾಜ ಸಮಿತಿಯನ್ನ ಜಾರಿಗೊಳಿಸಿ ರೇಷ್ಮೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಪ್ರಕಟಿವಂತೆ ಹೇಳಲಾಗಿತ್ತು. ಆದರಂತೆ ಬಸವರಾಜ ಸಮಿತಿ ಕೂಡ ವರದಿಯನ್ನ ಸರ್ಕಾರದ ಮುಂದೆ ಇಟ್ಟಿದೆ.

ಬಸವಾಜ ಸಮಿತಿ ವರದಿಯಲ್ಲಿ ಏನಿದೆ…?

  1. ಪ್ರತಿ ಕೆಜಿ ರೇಷ್ಮೆ ಗೂಡಿಗೆ 300 ರೂ ಕೆಳಗೆ ವ್ಯಾಪಾರವಾಗಬಾರದು
  2. ಕೆಜಿ 300 ರೂ ಕೆಳಗಡೆ ವ್ಯಾಪಾರವಾದ್ರೆ ಸರ್ಕಾರ ಬೆಂಬಲ ಬೆಲೆ ನಿಗಧಿ ಪಡಿಸಬೇಕು
  3. ಒಂದು ಸಾವಿರ ರೇಷ್ಮೆ ಮೊಟ್ಟೆಗೆ 1500 ರೂ ಬೆಲೆ ನಿಗಧಿ ಪಡಿಸಬೇಕು
  4. ರೇಷ್ಮೆ ಬೆಳೆಗಾರರಿಗೆ ವಿಮೆ ಮಾಡಿಸಬೇಕು
  5. ಬೆಳೆಗಾರರಿಗೆ ಪ್ರತ್ಯೇಕ ಸ್ಮಾರ್ಟ್ ಕಾರ್ಡ್ ನಿಗಧಿ ಮಾಡಬೇಕು.
  6. ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡಬೇಕು
  7. ಮದ್ಯವರ್ತಿ ಹಾವಳಿ ತಡೆಗೆ ಸೂಕ್ತ ಕ್ರಮ
  8. ರೇಷ್ಮೆ ಗೂಡಿಗೆ ವೈಜ್ಞಾನಿಕ ಬೆಲೆ ನಿಗಧಿ.

ಈ ಅಂಶಗಳು ಸೇರಿದಂತೆ ಬಸವರಾಜ ಸಮಿತಿ ಸರ್ಕಾರಕ್ಕೆ ರೇಷ್ಮೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ವರದಿಯೊಂದನ್ನ ನೀಡಿತ್ತು.ಆದ್ರೆ ಇದುವರೆಗೂ ಆ ವರದಿಯನ್ನ ಜಾರಿಗೊಳಿಸವಲ್ಲಿ ಸರ್ಕಾರ ಮೀನಾಮೇಷ ಏಣಿಸುತ್ತಿದೆ. ಸರ್ಕಾರಕ್ಕೆ ಮಾನ ಮಾರ್ಯಾದೆ ಇದ್ರೆ ರೇಷ್ಮೆ ರೈತರ ಕೈ ಹಿಡಿಯುವಂತೆ ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.

ರೇಷ್ಮೆ ಗೂಡಿಗೆ ಬೆಲೆ ನಿಗಧಿ ಪಡಿಸುವಲ್ಲಿ ಸರ್ಕಾರ ವಿಫಲವಾದ್ರೆ ರಾಮನಗರದ ಜಿಲ್ಲಾ ರೇಷ್ಮೆ ಮಾರುಕಟ್ಟೆಯ ಆವರಣದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಗ್ರಹ ನಡೆಸಲು ರೇಷ್ಮೆ ಬೆಳೆಗಾರರ ಸಂಘ ಈಗಾಗಲೇ ತೀರ್ಮಾನಿಸಿದೆ. ಸರ್ಕಾರಕ್ಕೆ ೧೫ ದಿನಗಳ ಕಾಲಾವಕಾಶ ನೀಡಿದ್ದೇವೆ. ಅಷ್ಟರಲ್ಲಿ ಎಚ್ಚೆತ್ತು ರೇಷ್ಮೆ ಬೆಳೆಗಾರರ ಜೊತೆಗೆ ಮಾತುಕತೆ ನಡೆಸಿ ರೇಷ್ಮೆಗೆ ಇಳಿಮುಖವಾಗಿರುವ ಬೆಲೆಯ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಉಗ್ರ ಹೋರಾಡ ಮಾಡಲಾಗುವುದೆಂದು ಎಚ್ಚರಿಸಿದರು. ಹಾಗೇ ನಮ್ಮ ಹೋರಾಟದಲ್ಲಿ ಮಠಾಧೀಶರು, ಕನ್ನಡಪರ ಹೋರಾಟಗಾರರು, ರೈತ ಮುಖಂಡರು ಭಾಗಿಯಾಗಲಿದ್ದಾರೆಂದು ತಿಳಿಸಿದ್ದಾರೆ.

ಬೆಳೆ ನಮ್ಮ ರಾಜ್ಯ ರೈತರ ಆರ್ಥಿಕ ಬೆಳೆ ಕೂಡ. ಅಷ್ಟೇ ಸೂಕ್ಷ್ಮ ಬೆಳೆ ಕೂಡ. ಹೆಸರಲ್ಲೆ ರೇಷ್ಮೆ ನಗರಿ ಎಂದು ಖ್ಯಾತಿ ಪಡೆದ ರಾಮನಗರ ಜಿಲ್ಲೆಯ ರೇಷ್ಮೆ ಬೆಳೆಗಾರರು ಹಾಗೂ ರೇಷ್ಮೆ ಬೆಳೆಗಾರರ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳತ್ತಲೇ ಇದೆ. ರೇಷ್ಮೆ ಕಷ್ಟ ಪಟ್ಟು ಬೆಳೆದ ರೇಷ್ಮೆ ಗೂಡನ್ನು ಒಂದು ವಾರದೊಳಗೆ ಮಾರಟ ಮಾಡಲೇಬೇಕು. ಈ ಸೂಕ್ಷ್ಮ ವಿಷಯದಲ್ಲಿ ಸರ್ಕಾರಗಳು ರೈತರ ಜತೆ ಚೆಲ್ಲಾಟವಾಡುತ್ತಲೇ ಇದೆ. ರೇಷ್ಮೆ ಬೆಳೆಗೆ ವೈಜ್ಞಾನಿಕವಾಗಿ ಬೆಲೆ ನಿಗಧಿ ಪಡಿಸದೇ ಮಲತಾಯಿ ದೋರಣೆಯನ್ನ ಅನುಸರಿಸುತ್ತಿದ್ದಾರೆ.

ಒಟ್ಟಾರೆ ರಾಜ್ಯಯ ರೇಷ್ಮೆ ಬೆಳೆಗಾರರ ಬದುಕು ಮಾತ್ರ ದೀಪದ ಕೆಳಗಿನ ಕತ್ತಲೆಯಂತಾಗಿದೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಅತ್ಯಧಿಕವಾಗಿ ಬೆಳೆಯುವ ರೇಷ್ಮೆ ಬೆಳೆಗಾರರ ಸರ್ಕಾರ ಕೈ ಹಿಡಿಯಬೇಕಿದೆ. ರೇಷ್ಮೆನಾಡು ಅಂತಾನೆ ಹೆಸರಾಗಿರುವ ರಾಮನಗರ ಜಿಲ್ಲೆಯಲ್ಲೇ ರೇಷ್ಮೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಇದು ಮುಖ್ಯಮಂತ್ರಿ ಕ್ಷೇತ್ರವಾಗಿರುವ ಹಿನ್ನೆಲೆ ಜರೂರಾಗಿ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕಿದೆ.

ವರದಿ : ನಟರಾಜ್ ಬೆಳಕವಾಡಿ, ಟಿವಿ5 ರಾಮನಗರ

Next Story

RELATED STORIES