Top

ಮಹಾದಾಯಿ ಹೋರಾಟಗಾರರಿಂದ "ಬೆಂಗಳೂರು ಚಲೋ"

ಮಹಾದಾಯಿ ಹೋರಾಟಗಾರರಿಂದ ಬೆಂಗಳೂರು ಚಲೋ
X

ಹುಬ್ಬಳ್ಳಿ : ಮಾತುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡ್ಬೇಕು, ಮಹದಾಯಿ ವಿವಾದ ಇತ್ಯರ್ಥಪಡಿಸೋದಷ್ಟೇ ಅಲ್ಲ, ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತರ ಮೇಲಿನ ಕೇಸ್ ಗಳನ್ನ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ರೈತರು ಬೆಂಗಳೂರು ಚಲೋ ನಡೆಸಿದಾರೆ.

ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ಸರ್ಕಲ್ ನಿಂದ ರೈಲು ನಿಲ್ದಾಣದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ರು. ರೈತರು ತಮ್ಮ ಸಾಲ ಮನ್ನಾ ಮಾಡ್ತಾರೆಂದು ಸಾಕಷ್ಟು ನಿರೀಕ್ಷೆಗಳನ್ನಿರಿಸಿಕೊಂಡಿದ್ರು. ಆದ್ರೇ, ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ 2 ಲಕ್ಷದವರೆಗಿನ ಸುಸ್ತಿದಾರರ ಸಾಲ ಮನ್ನಾ ಅಂತ ಹೇಳುವ ಮೂಲಕ ನಂಬಿಕೆ ದ್ರೋಹ ಮಾಡಿದಾರೆ ಎಂದರು.

ಇನ್ನೂ ಮುಂದುವರೆದು ಮಾತನಾಡಿದ ಪ್ರತಿಭಟನಾಕಾರರು, ತಮ್ಮ ಪ್ರಣಾಳಿಕೆಯಲ್ಲೂ ಸಹ ಈ ಬಗ್ಗೆ ಭರವಸೆ ನೀಡಿದ್ದ ಹೆಚ್ ಡಿಕೆ ಈಗ ಸಾಲ ಮನ್ನಾಗೆ ಹಲವಾರು ಷರತ್ತುಗಳನ್ನ ವಿಧಿಸಿದ್ರಿಂದ ಇದರ ಲಾಭ ಬಹುತೇಕ ರೈತರಿಗೆ ಆಗ್ತಿಲ್ಲ. ಅದರಲ್ಲೂ ಉತ್ತರಕರ್ನಾಟಕದ ಶೇ. 90ಕ್ಕೂ ಹೆಚ್ಚು ರೈತರು ಇದರ ಲಾಭ ಪಡೆಯೋಕಾಗಲ್ಲ ಅಂತ ಹೋರಾಟಗಾರರು ಆಕ್ರೋಶ ಹೊರಹಾಕಿದ್ರು.

ಅಷ್ಟೇ ಅಲ್ಲ, ಮಹದಾಯಿ ವಿವಾದ ಇತ್ಯರ್ಥಪಡಿಸೋದಕ್ಕೆ ಮುಂದಾಗಬೇಕು ಜತೆಗೆ ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತರು ಈಗಲೂ ಸಹ ಕೋರ್ಟ್ ಗೆ ಅಲೆದಾಡ್ತಿದಾರೆ. ಅವರ ಮೇಲಿನ ಎಲ್ಲ ಕೇಸ್ ಗಳನ್ನ ವಾಪಸ್ ಪಡೆಯಬೇಕೆಂದು ರೈತರು ಆಗ್ರಹಿಸಿದ್ರು. ಇವತ್ತು ರೈಲಿನ ಮೂಲಕ ಬೆಂಗಳೂರನತ್ತ ಪ್ರಯಾಣ ಬೆಳೆಸಿರುವ ರೈತರು ನಾಳೆ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದಾರೆ. ನಾಲ್ಕು ಜಿಲ್ಲೆಗಳ ಒಂಭತ್ತು ತಾಲೂಕಿನ ನೂರಾರು ರೈತರು ಇವತ್ತು ಬೆಂಗಳೂರು ಚಲೋ ನಡೆಸಿದ್ದಾರೆ.

Next Story

RELATED STORIES