Top

ಬಿಎಸ್‌ವೈ ನಂತ್ರದ ಉತ್ತರಾಧಿಕಾರಿ ವಿಜಯೇಂದ್ರ : ಸಿದ್ದಗಂಗಾ ಕಿರಿಯ ಶ್ರೀ

ಬಿಎಸ್‌ವೈ ನಂತ್ರದ ಉತ್ತರಾಧಿಕಾರಿ ವಿಜಯೇಂದ್ರ : ಸಿದ್ದಗಂಗಾ ಕಿರಿಯ ಶ್ರೀ
X

[story-lines]ತುಮಕೂರು : ಮಾಜಿ ಮಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ ನಂತ್ರ ಅವರ ಉತ್ತರಾಧಿಕಾರಿ ಯಾರೋ ಅನ್ನೋ ಪ್ರಶ್ನೆ ಬಿಜೆಪಿ ಪಾಳೆಯದಲ್ಲಿ ಶುರುಗಾಗಿದ್ಯೋ ಇಲ್ವೋ ಗೊತ್ತಿಲ್ಲಾ ಆದ್ರೆ ತುಮಕೂರಿನ ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು ಬಿಎಸ್‌ವೈ ಸ್ಥಾನ ತುಂಬೋದು ವಿಜಯೇಂದ್ರ ಮಾತ್ರ ಅಂತಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತುಮಕೂರಿನ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಮಾತ್ನಾಡಿದ ಸಿದ್ದಲಿಂಗ ಶ್ರೀಗಳು, ಯಡಿಯೂರಪ್ಪರ ಪುತ್ರ ವಿಜಯೇಂದ್ರ ಮುಂದಿನ ದಿನದಲ್ಲಿ ಯಡಿಯೂರಪ್ಪರ ಸ್ಥಾನ ತುಂಬುತ್ತಾರೆ. ವಿಜಯೇಂದ್ರಗೆ ವರುಣಾದಿಂದ ಟಿಕೆಟ್ ಕೊಟ್ಟಿದ್ರೆ ಬಿಜೆಪಿ ಗೆಲುವು ಕಾಣುತಿತ್ತೋನೋ. ಅಲ್ಲದೇ ವಿಜಯೇಂದ್ರರ ಜೊತೆಗೆ ಅಕ್ಕಪಕ್ಕ ನಾಲ್ಕೈದು ಕ್ಷೇತ್ರಗಳಲ್ಲೂ ಬಿಜೆಪಿ ಗೆಲವು ಸಾಧ್ಯವಾಗುತ್ತಿತ್ತು ಎಂಬ ನಿರೀಕ್ಷೆಯ ಮಾತುಗಳನ್ನಾಡಿದ್ದಾರೆ.

ಕರ್ನಾಟಕದ ಒಬ್ಬ ಧೀಮಂತ ನಾಯಕ ಎಂದು ಧೈರ್ಯದಿಂದ ಹೇಳಿಕೊಳ್ಳಬೇಕು. ಎಲ್ಲಾ ಸಮಾಜದ ನಾಯಕರು ತಮ್ಮ ಸಮಾಜದ ನಾಯಕರ ಬಗ್ಗೆ ಎದೆ ತಟ್ಟಿ ಹೇಳಿಕೊಳ್ತಾರೆ ಆದ್ರೆ ಇತ್ತಿಚಿನ ದಿನಗಳಲ್ಲಿ ನಮ್ಮ ಸಮಾಜದ ರಾಜಕೀಯ ಶಕ್ತಿ ದುರ್ಬಲ ವಾಗಿತಿದೆ. ಹಿಂದೆ ಇದ್ದಂತಹ ಒಗ್ಗಟ್ಟು ಈಗ ಇಲ್ಲ ಮುಂದಿನ ದಿನದಲ್ಲಿ ಮತ್ತೆ ಸರಿಹೋಗಬಹುದು ಎಂಬ ನಂಬಿಕೆ ಇದೆ ಅಂತಾ ಇತ್ತೀಚಿನ ದಿನಗಳಲ್ಲಿ ಪ್ರತ್ಯೇಕ ಲಿಂಗಾಯಿತ ವಿಚಾರದ ಪ್ರಸ್ತಾಪಿಸದೆ ಒಗ್ಗಟ್ಟಿನ ಮಂತ್ರದ ಜಪಿಸಿದ್ದಾರೆ.

Next Story

RELATED STORIES