Top

ಯಶ್‌ರನ್ನು ಹಾಡಿಹೊಗಳಿದ ಉಪೇಂದ್ರ

ಯಶ್‌ರನ್ನು ಹಾಡಿಹೊಗಳಿದ ಉಪೇಂದ್ರ
X

ಸಾಮಾನ್ಯವಾಗಿ ಒಬ್ಬ ಸ್ಟಾರ್​ನ ಮತ್ತೊಬ್ಬ ಸ್ಟಾರ್ ಹೊಗಳೋದೇ ಕಷ್ಟ. ಅದ್ರಲ್ಲೂ ತಮಗಿಂತ ಲೇಟ್ ಆಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಜೂನಿಯರ್ಸ್​ಗೆ ಸೀನಿಯರ್ಸ್​ ಗುಣಗಾನ ಮಾಡೋದು ಕಷ್ಟಸಾಧ್ಯ. ಆದ್ರಿಲ್ಲಿ ಸೂಪರ್ ಸ್ಟಾರ್ ಉಪೇಂದ್ರ ರಾಕಿಂಗ್ ಸ್ಟಾರ್ ಯಶ್​ರನ್ನ ಹಾಡಿ ಹೊಗಳಿರೋದು ಸದ್ಯ ಟಾಕ್ ಆಫ್ ದ ಟೌನ್ ಆಗಿದೆ.

ಸದ್ಯ ಗಾಂಧಿನಗರದಲ್ಲಿ ಉಪೇಂದ್ರ ಮತ್ತು ಯಶ್​ರದ್ದೇ ಸುದ್ದಿ. ಅದಕ್ಕೆ ಕಾರಣ ಯಶ್​ರ ಕೆಜಿಎಫ್. ಅದಕ್ಕಿಂತ ಹೆಚ್ಚಾಗಿ ಆ ಸಿನಿಮಾಗಾಗಿ ರಾಕಿಂಗ್ ಸ್ಟಾರ್ ಡೆಡಿಕೇಷನ್, ಹಾರ್ಡ್​ವರ್ಕ್​ ಮತ್ತು ಸಿನಿಮೋತ್ಸಾಹ.

ಸ್ಯಾಂಡಲ್​ವುಡ್​ನ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾ ಕೆಜಿಎಫ್​ಗಾಗಿ ಯಶ್, ಬರೋಬ್ಬರಿ ಎರಡು ವರ್ಷ ಹಗಲಿರುಳು ದುಡಿದಿರೋದು, ದುಡಿಯುತ್ತಿರೋದು ಎಲ್ರಿಗೂ ಗೊತ್ತೇಯಿದೆ. ಇದೀಗ ಸಡನ್ ಆಗಿ ರಿಯಲ್ ಸ್ಟಾರ್ ಉಪೇಂದ್ರ ಈ ಕುರಿತು ಯಶ್​ರನ್ನ ಟ್ವಿಟರ್ ಮೂಲಕ ಗುಣಗಾನ ಮಾಡಿದ್ದಾರೆ.

‘ಕನ್ನಡ ಚಿತ್ರರಂಗದ ಮೋಸ್ಟ್ ವಾಂಟೆಡ್ ಹೀರೋ ಯಶ್. ಕಳೆದ ಎರಡು ವರ್ಷದಿಂದ ಒಂದೇ ಚಿತ್ರಕ್ಕಾಗಿ ರಗಡ್ ಲುಕ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಅವರ ಬದ್ದತೆಗೆ ಸಾಕ್ಷಿ. ಅವರಿಂದ ನಾವು ಕಲಿಯುವುದು ಸಾಕಷ್ಟಿದೆ’.

ಹೀಗಂತ ಖುದ್ದು ಉಪೇಂದ್ರ ಅವರೇ ಯಶ್​ ಬಗ್ಗೆ ಹೆಮ್ಮೆಯಿಂದ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಗಾಡ್ ಫಾದರ್ ಇಲ್ಲದೆ ಇಂಡಸ್ಟ್ರಿಗೆ ಬಂದು ಶ್ರದ್ದೆ ಮತ್ತು ಸಿನಿಮೋತ್ಸಾಹದಿಂದಲೇ ಸ್ಟಾರ್ ಆಗಿ ನಿಂತಿರೋ ಯಶ್ ಬಗ್ಗೆ ಉಪ್ಪಿಗೆ ಹೇಳಿಕೊಳ್ಳಲಾರದಷ್ಟು ಖುಷಿ ಇದೆ. ಹಾಗಾಗಿ ಸದ್ಯ ಕೆಜಿಎಫ್​ಗಾಗಿ ಯಶ್ ಹಾರ್ಡ್​ ವರ್ಕ್​ ಮತ್ತು ಡೆಡಿಕೇಷನ್ ಕಂಡು ಫಿದಾ ಆಗಿದ್ದಾರೆ. ಅದನ್ನ ಈ ರೀತಿ ಬರೆದುಕೊಳ್ಳೋ ಮೂಲಕ ಇಡೀ ರಾಕಿಂಗ್ ಸ್ಟಾರ್ ಫ್ಯಾನ್ಸ್ ಜೊತೆ ಕನ್ನಡ ಸಿನಿಪ್ರಿಯರನ್ನ ಖುಷಿ ಆಗುವಂತೆ ಮಾಡಿದ್ದಾರೆ.

ಉಪೇಂದ್ರ ಟ್ವಿಟರ್​ನಲ್ಲಿ ಬರೆದ ಮೆಚ್ಚುಗೆಯ ಮಾತುಗಳಿಗೆ ದಿಲ್ ಖುಷ್ ಆಗಿರೋ ರಾಕಿಂಗ್ ಸ್ಟಾರ್ ಕೂಡ ಟ್ವಿಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಅಷ್ಟೇ ಅಲ್ಲ ನೀವೇ ನನಗೆ ಅಸಲಿ ಸ್ಫೂರ್ತಿ ಅಂತ ಟ್ವೀಟ್ ಮಾಡಿದ್ದಾರೆ.

ಮೊದಲಿನಿಂದಲೂ ನೀವು ನನಗೆ ಸ್ಫೂರ್ತಿ ಆಗಿದ್ದೀರಿ. ನಿಮ್ಮಿಂದ ಸಾಕಷ್ಟು ವಿಚಾರಗಳನ್ನ ಕಲಿತಿದ್ದೇನೆ. ನನ್ನಂತ ಇನ್ನೂ ಹಲವಾರು ಕನಸುಗಾರರಿಗೆ ಸ್ಫೂರ್ತಿ ನೀಡ್ತಾ ಇರಿ’. ಕಲಿಯೋಕೆ ಹಿರಿಯರಾದರೇನು ಕಿರಿಯರಾದರೇನು..? ಒಳ್ಳೆಯದು ಅನಿಸಿದ್ದನ್ನ ಯಾರಿಂದ ಯಾವಾಗ ಬೇಕಾದ್ರು ಕಲಿಯಬೇಕು ಅನ್ನೋದು ಉಪೇಂದ್ರರ ಮಾತಿನ ಅರ್ಥವಾಗಿತ್ತು. ಆದ್ರೆ ಯಶ್ ಮಾತ್ರ ನೀವೇ ನನಗೆ ಸ್ಫೂರ್ತಿ ನಿಮ್ಮಿಂದ ನಾನು ಸಾಕಷ್ಟು ಕಲಿತಿದ್ದೇನೆ ಅಂದಿರೋದು ನಿಜಕ್ಕೂ ಮೆಚ್ಚಲೇಬೇಕು.

ಬಾಲಿವುಡ್​ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಹಾಗೂ ಟಾಲಿವುಡ್​ನ ಬಾಹುಬಲಿ ಖ್ಯಾತಿಯ ಪ್ರಭಾಸ್ ಸಿನಿಮಾ ಪ್ರೇಮ ಮತ್ತು ಪಾತ್ರಗಳ ಆಯ್ಕೆ ನಿಜಕ್ಕೂ ಗಮನಾರ್ಹ. ವರ್ಷ ಅಥವಾ ಎರಡು ವರ್ಷಕ್ಕೆ ಒಂದು ಸಿನಿಮಾದಂತೆ ಕಮಿಟ್ ಆದ ಸಿನಿಮಾಗೆ ಮತ್ತು ಆ ಪಾತ್ರಕ್ಕೆ ನ್ಯಾಯ ಒದಗಿಸೋದ್ರಲ್ಲಿ ಎತ್ತಿದ ಕೈ. ಸದ್ಯ ಯಶ್​ರ ಕೆಜಿಎಫ್ ಸಿನಿಮಾ ನೋಡಿದ್ರೆ, ಆಮೀರ್-ಪ್ರಭಾಸ್ ಹಾದಿಯಲ್ಲಿ ರಾಕಿಂಗ್ ಕಮಾಲ್ ಮಾಡ್ತಿದ್ದಾರೆ.

ಉಪೇಂದ್ರ ಮತ್ತು ಯಶ್ ಪರಸ್ಪರ ಗುಣಗಾನ ಮಾಡಿರೋದು ಸದ್ಯ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು, ಒಟ್ಟಿಗೆ ಸಿನಿಮಾ ಮಾಡೋ ಸೂಚನೆ ಕೂಡ ಸಿಕ್ಕಿದೆ. ನಟನೆಗೆ ಬರೋಕ್ಕೂ ಮುನ್ನ ಉಪ್ಪಿ ಸ್ಟಾರ್ ಡೈರೆಕ್ಟರ್ ಆಗಿ ಗುರುತಿಸಿಕೊಂಡವ್ರು. ಇಂದಿಗೂ ನಟನೆಯ ಜೊತೆ ನಿರ್ದೇಶನ, ನಿರ್ಮಾಣ ಮಾಡ್ತಾನೇ ತನ್ನದೇ ಆದಂತಹ ಒಂದು ದೊಡ್ಡ ಪ್ರೇಕ್ಷಕವರ್ಗ ಕೊಟ್ಟಿದ್ದಾರೆ ಸೂಪರ್ ಸ್ಟಾರ್ ಉಪ್ಪಿ. ಹಾಗಾಗಿ ಯಶ್​ಗೆ ಉಪ್ಪಿ ಆ್ಯಕ್ಷನ್ ಕಟ್ ಹೇಳಿದ್ರೂ ಅಚ್ಚರಿಯಿಲ್ಲ ಅಂತಿದೆ ಗಾಂಧಿನಗರ.

ಇತ್ತೀಚೆಗೆಷ್ಟೇ ಯಶ್​ರ ಕೆಜಿಎಫ್​ ಚಿತ್ರದ ಪಾರ್ಟ್​-1 ಚಿತ್ರೀಕರಣ ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್​ನಲ್ಲಿ ಬ್ಯುಸಿ ಆಗಿದೆ ಚಿತ್ರತಂಡ. ಇನ್ನು ಕೆಜಿಎಫ್ ಡಿಸೆಂಬರ್​ಗೆ ತೆರೆಗೆ ಬರೋ ಎಲ್ಲಾ ಲಕ್ಷಣಗಳು ಕಾಣ್ತಿದೆ. ಇದಾಗ್ತಿದ್ದಂತೆ ಯಶ್, ಮಫ್ತಿ ಡೈರೆಕ್ಟರ್ ನರ್ತನ್, ಹರ್ಷ ನಿರ್ದೇಶನದ ರಾಣ, ರ್ಯಾಂಬೊ 2 ನಿರ್ದೇಶಕ ಅನಿಲ್ ನಿರ್ದೇಶನದ ಸಿನಿಮಾ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಯಶ್ ಬ್ಯುಸಿ ಆಗಲಿದ್ದಾರೆ.

ಉಪೇಂದ್ರ ಕೂಡ ಪ್ರಜಾಕೀಯ ಅಂತ ಎಲ್ಲಿ ಗಾಂಧಿನಗರಕ್ಕೆ ದೂರ ಆಗಿಬಿಡ್ತಾರೋ ಅಂತ ಆತಂಕಗೊಂಡಿದ್ದ ಫ್ಯಾನ್ಸ್​ಗೆ ಐ ಲವ್ ಯು ಸಿನಿಮಾ ಮೂಲಕ ಬಣ್ಣದಲೋಕದಿಂದ ದೂರ ಹೋಗೋ ಮಾತನ್ನ ತಳ್ಳಿ ಹಾಕಿದ್ದಾರೆ. ಅದೇನೇ ಇರಲಿ, ಯಶ್​ಗೆ ಉಪೇಂದ್ರ ಆ್ಯಕ್ಷನ್ ಕಟ್ ಹೇಳಿದ್ರೆ ಅದಕ್ಕಿಂತ ಖುಷಿಯ ವಿಚಾರ ಮೊತ್ತೊಂದಿರಲ್ಲ. ಅದು ಆದಷ್ಟು ಬೇಗ ಈಡೇರಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5.

Next Story

RELATED STORIES