Top

ಕನ್ನಡ ಚಿತ್ರರಂಗದ `ಪೆಟ್ಟಾಯಿ ಪಿಲಿ' ಸದಾಶಿವ ಸಾಲ್ಯಾನ್ ಇನ್ನಿಲ್ಲ

ಕನ್ನಡ ಚಿತ್ರರಂಗದ `ಪೆಟ್ಟಾಯಿ ಪಿಲಿ ಸದಾಶಿವ ಸಾಲ್ಯಾನ್ ಇನ್ನಿಲ್ಲ
X

ಉಡುಪಿ: ತುಳು ಹಾಗೂ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಹಿರಿಟ ನಟ ಸದಾಶಿವ ಸಾಲ್ಯಾನ್ ಭಾನುವಾರ ಮುಂಬೈನ ನಿವಾಸದಲ್ಲಿ ವಿಧಿವಶರಾಗಿದ್ದಾರೆ.

ಹವ್ಯಾಸಿ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ಸದಾಶಿವ ಸಾಲ್ಯಾನ್ ಭಾಗ್ಯವಂತೆದಿ, ಬದ್ಕೆರೆ ಬುಡ್ಲೆ, ಪಟ್ಟಾಯಿ ಪಿಲಿ, ಸತ್ಯ ಓಲುಂಡು ಎಂಬ ತುಳು ಚಿತ್ರಗಳಲ್ಲಿ ಅಲ್ಲದೇ ಸಮರ ಸಿಂಹ, ಅನಾಥ ರಕ್ಷಕ, ಸಿಡಿದೆಡ್ಡ ಪಾಂಡವರು, ಕಾಲೇಜು ರಂಗ ಮುಂತಾದ ಕನ್ನಡ ಚಿತ್ರಗಳು ಸೇರಿದಂತೆ ಸುಮಾರು 50 ಚಿತ್ರಗಳಲ್ಲಿ ನಟಿಸಿದ್ದರು.

ಉಡುಪಿಯ ತೆಂಕ ಎರ್ಮಾಳ್ ನಲ್ಲಿ ಜನಿಸಿದ್ದ ಸದಾಶಿವ ಸಾಲ್ಯಾನ್​, ಚಿಕ್ಕ ವಯಸ್ಸಿನಲ್ಲಿಯೇ ಮುಂಬೈಗೆ ವಲಸೆ ಹೋಗಿದ್ದರು. ಅಂಧೇರಿಯ ಚಿನ್ಮಯ ಕಾಲೇಜ್ ನಲ್ಲಿ ಪದವಿ ಶಿಕ್ಷಣ ಪೂರೈಸಿದ ಬಳಿಕ ಮುಂಬೈನ ಸೆಂಟ್ರಲ್ ಬ್ಯಾಂಕ್​ನಲ್ಲಿ ಉದ್ಯೋಗ ಸಂಪಾದಿಸಿದ್ದರು.

ಬ್ಯಾಂಕಿಂಗ್ ಕೆಲಸದ ಜೊತೆ ರಂಗಭೂಮಿಯತ್ತ ಆಸಕ್ತಿ ಬೆಳೆಸಿಕೊಂಡಿದ್ದ ಸಾಲ್ಯಾನ್​, ತುಳು, ಹಿಂದಿ ಹಾಗೂ ಮರಾಠಿಯ ಸುಮಾರು 500 ನಾಟಕಗಳನ್ನು ನಿರ್ದೇಶಿಸಿದ್ದರು. ಇದೇ ಜನಪ್ರಿಯತೆಯೊಂದಿಗೆ ನಟನೆಗೂ ಕಾಲಿಟ್ಟರು.

ರಂಗಕರ್ಮಿ ಕೆಎನ್ ಟೈಲರ್ ಮೂಲಕ ತುಳು ಸಿನಿಮಾ ರಂಗದ ನಂಟು ಸಾಲ್ಯಾನ್ ಅವರಿಗೆ ಆಯಿತು. ಹೀಗೆ ಸುಮಾರು 50 ಸಿನಿಮಾಗಳಲ್ಲಿ ನಟಿಸಿ ಹೆಸರು ಗಳಿಸಿದ್ದರು. ಅನಾರೋಗ್ಯದ ಕಾರಣದಿಂದ ಸದಾಶಿವ ಸಾಲ್ಯಾನ್ ಅವರು ನಟನೆಯಿಂದ ದೂರ ಉಳಿದಿದ್ದರು. ಇವರು ಪತ್ನಿ ಸುಶೀಲಾ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಕುಟುಂಬ ವರ್ಗವನ್ನು ಅಗಲಿದ್ದಾರೆ.

Next Story

RELATED STORIES