Top

ಇದು ಕಾನೂನು ಪಾಲಕ ಪೊಲೀಸಪ್ಪನ ಪೋಲಿ ಆಟ ಕತೆ.!

ಇದು ಕಾನೂನು ಪಾಲಕ ಪೊಲೀಸಪ್ಪನ ಪೋಲಿ ಆಟ ಕತೆ.!
X

ಮೈಸೂರು : ನಮಗೆ ರಕ್ಷಣೆ ನೀಡಬೇಕಾದ ರಕ್ಷಕನೇ ಇಲ್ಲಿ ಡಬಲ್ ಗೇಮ್ ಆಟವಾಡಿದ್ದ. ಎಲ್ಐಸಿ ಬಾಂಡ್ ಅಂತೇಳಿ 18 ವರ್ಷ ಸಂಸಾರ ಮಾಡಿದ ಪತ್ನಿಗೆ ವಿಚ್ಚೇದ್ದನದ ಕೊಟ್ಟಿದ್ದ. ಅಜರ್ಿಗೆ ಸಹಿ ಮಾಡಿಸಿಕೊಂಡು ಮತ್ತೊಂದು ಮದುವೆ ಮಾಡಿಕೊಂಡ ಪೊಲೀಸಪ್ಪನಿಗೆ ಮದುವೆ ಮನೆಯಲ್ಲೇ ಏನ್ ಉಡುಗೊರೆಯೂ ಸಿಕ್ತು ಗೊತ್ತಾ..? ಆ ಉಡುಗೊರೆಯ ಸೀಕ್ರೆಟ್ ಕಹಾನಿ ಮುಂದೆ ಓದಿ..

ರಾಜಾಚಾರಿ ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್ಟೆಬಲ್. ಮೂಲತಹ ಹುಣಸೂರಿನ ಹೊಸಳ್ಳಿ ಗ್ರಾಮದ ನಿವಾಸಿಗರುವ ಈತ ತನ್ನ ಅಕ್ಕನ ಮಗಳನ್ನ 18 ವರ್ಷದಿಂದೆಯೇ ಮದುವೆಯಾಗಿದ್ದ. ಇವ್ರಿಗೆ ಒಬ್ಬ ಮಗ ಹಾಗೂ ಮಗಳು ಕೂಡ ಇದ್ದಾಳೆ. ಇಷ್ಟಿದ್ರು ಕೂಡ ಇವತ್ತು ಮೊದಲ ಪತ್ನಿಗೆ ತಿಳಿಯದಂತೆ ಮತ್ತೊಂದು ಹೆಣ್ಣನ್ನ ವರಿಸಿದ್ದಾನೆ.

ಹೌದು, ಮೈಸೂರಿನ ವಿಜಯನಗರದ ಯೋಗಾ ನರಸಿಂಹಸ್ವಾಮಿ ದೇಗುಲದಲ್ಲಿ ಬೆಂಗಳೂರು ಮೂಲದ ಸೌಮ್ಯ ಎಂಬಾಕೆಯನ್ನ ರಾಜಾಚಾರಿ ನಿನ್ನೆ ಕದ್ದು ಮುಚ್ಚಿ ಮದುವೆಯಾಗಿದ್ದಾನೆ. ತಾಳಿ ಕಟ್ಟಿತ್ತಿದ್ದಂತೆ ಮೊದಲನೇ ಪತ್ನಿ ಸವಿತಾ ದೇಗುಲಕ್ಕೆ ಎಂಟ್ರಿಕೊಟ್ಟು ಗಂಡನಿಗೆ ಹಿಗ್ಗಾಮುಗ್ಗಾ ಕೊಟ್ಟಿದ್ದಾಳೆ. ಇದು ಮದುವೆಯಾದ ಬಳಿಕ ಮೊದಲ ಪತ್ನಿ ಸವಿತಾ ಕೊಟ್ಟ ಮೊದಲ ಉಡುಗೊರೆಯಾಗಿತ್ತು. ನಂತರ ಗಂಡ ರಾಜಾಚಾರಿಯನ್ನ ಎಳೆದು ತಂದು ಮೈಸೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲೂ ಗಂಡನನ್ನ ಎಳೆದಾಡಿ ಗೂಸಾ ಕೊಟ್ಟಿದ್ದಾಳೆ. ಇದಕ್ಕೆ ಸಾಕ್ಷಿ ಎಂಬಂತೆ ಮದುವೆಯಲ್ಲಿ ರಾಜಾಚಾರಿ ತೊಟ್ಟಿದ್ದ ಶರ್ಟ್‌ ಪಂಚೆ ಎಲ್ಲವೂ ಪತ್ನಿ ಕೊಟ್ಟ ಉಡುಗೊರೆಯನ್ನ ತೋರಿಸುತ್ತಿತ್ತು.

ಇನ್ನೂ ಪ್ರಕರಣ ಇಷ್ಟೆಲ್ಲ ನಡೆಯುತ್ತಿರುವಾಗ ಗಂಡ ಡೈವೋರ್ಸ್ ಕೊಟ್ಟಿರುವುದಾಗಿ ಪೊಲೀಸ್ರಿಗೆ ತಿಳಿಸಿದ್ದ. ಹೌದು, ಈ ಹಿಂದೆ ಪತ್ನಿಯ ಬಳಿ ಎಲ್ಐಸಿ ಬಾಂಡ್ ಅಂತೇಳಿ ಸಹಿ ಹಾಕಿಸಿಕೊಂಡು ಕೇವಲ ಮೂರೇ ತಿಂಗಳಲ್ಲಿ ವಿಚ್ಚೇಧನ ಪಡೆದಿದ್ದಾನೆಂದು ಆರೋಪಿಸಲಾಗಿದೆ. ಆದ್ರೆ, ಈ ವಿಚ್ಚೇದಕ್ಕೆ ಸದ್ಯ ಸ್ಟೇ ತಂದಿರುವ ಪತ್ನಿ ಸವಿತಾ, ಗಂಡನ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾಳೆ. ಅಲ್ಲದೆ, ಸವಿತಾ ಮಾವಂದಿರು ಕೂಡ ಅಳಿಯನಿಗೆ ಸರಿಯಾಗಿಯೇ ಉಡುಗೊರೆ ಕೊಟ್ಟು, ನಜರಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

ಒಟ್ಟಾರೆ, 18 ವರ್ಷದಿಂದೆ ಆಸೆಪಟ್ಟು ಸವಿತಾರನ್ನ ಮದುವೆಯಾದ ಪೊಲೀಸಪ್ಪ ಇದೀಗಾ ತನ್ನ ಪೊಲೀಯಾಟಕ್ಕೆ ಮತ್ತೊಂದು ಮದುವೆಯಾಗಿದ್ದಾನೆ. ಪ್ರಕರಣ ಕೋರ್ಟ್‌ನಲ್ಲಿದ್ದರೂ ಕೂಡ ಯಾವುದಕ್ಕೂ ಜಗ್ಗದೇ ಮತ್ತೊಂದು ಮದುವೆ ಆಗಿರೋದು, ಪೊಲೀಸ್ ಇಲಾಖೆಯನ್ನ ಇದೀಗಾ ಇಕ್ಕಟ್ಟಿಗೆ ಸಿಲುಕಿಸಿದೆ.

ವರದಿ : ಸುರೇಶ್, ಟಿವಿ5 ಮೈಸೂರು

Next Story

RELATED STORIES