Top

ಟೀಂ ಇಂಡಿಯಾ ಮಡಿಲಿಗೆ ಟಿ20 ಸರಣಿ

ಟೀಂ ಇಂಡಿಯಾ ಮಡಿಲಿಗೆ ಟಿ20 ಸರಣಿ
X

ಆಂಗ್ಲರ ನಾಡಲ್ಲಿ ಟೀಂ ಇಂಡಿಯಾ ಚೊಚ್ಚಲ ಟಿ20 ಸರಣಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ. ಬ್ರಿಸ್ಟಲ್​ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ದ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿ ಸರಣಿಯನ್ನ 2-1 ಅಂತರದಿಂದ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. 199 ರನ್​ಗಳ ಬೃಹತ್ ಮೊತ್ತವನ್ನ ಬೆನ್ನತ್ತಿದ ಟೀಂ ಇಂಡಿಯಾ 18.4 ಓವರ್​ಗಲ್ಲಿ ಇನ್ನು 8 ಎಸೆತ ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅಜೇಯ 100 ರನ್​ಗಳಿಸಿ ಮಿಂಚಿದ್ರು. ಇವರಿಗೆ ಉತ್ತಮ ಸಾಥ್ ನೀಡಿದ ಹಾರ್ದಿಕ್ ಪಾಂಡ್ಯ ಅಜೇಯ 33, ವಿರಾಟ್ ಕೊಹ್ಲಿ 43, ರನ್ ಬಾರಿಸಿದ್ರು. ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಜೆಸನ್ ರಾಯ್​ ಅವರ ಅರ್ಧ ಶತಕದ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್ ನಿಗದಿತ ಓವರ್​ಗಳಲ್ಲಿ 198/9

ಜೆಸನ್​ ರಾಯ್ 67, ಜೋಸ್​ ಬಟ್ಲರ್​ 34

ಅಲೆಕ್ಸ್ ಹೇಲಸ್ 30, ಜಾನಿ ಬೈರ್​ ಸ್ಟೋ 25

ಹಾರ್ದಿಕ್ ಪಾಂಡ್ಯ 38ಕ್ಕೆ 4, ಸಿದ್ದಾರ್ಥ್​ ಕೌಲ್ 35ಕ್ಕೆ 2 ವಿಕೆಟ್

ಭಾರತ 201/3 (18.4 ಓವರ್​)

ರೋಹಿತ್ ಶರ್ಮಾ ಅಜೇಯ 100, ವಿರಾಟ್ ಕೊಹ್ಲಿ 43

ಹಾರ್ದಿಕ್ ಪಾಂಡ್ಯ ಅಜೇಯ 33

ಡೇವಿಡ್ ವಿಲ್ಲಿ 37ಕ್ಕೆ 1, ಕ್ರಿಸ್​ಜೋರ್ಡನ್ 40ಕ್ಕೆ1

Next Story

RELATED STORIES