Top

ಚಿರಂಜೀವಿ ಸೈರಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುದೀಪ್​!

ಚಿರಂಜೀವಿ ಸೈರಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುದೀಪ್​!
X

ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಮಾತ್ರವಲ್ಲ, ಹಲವು ಭಾಷೆಗಳ ದಿಗ್ಗಜರ ಚಿತ್ರಗಳಲ್ಲೂ ಆಗೊಮ್ಮೆ- ಈಗೊಮ್ಮೆ ಕಾಣಿಸಿಕೊಂಡಿದ್ದು ಇದೆ. ಇದೀಗ ಸುದೀಪ್ ಅಭಿಮಾನಿಗಳಿಗೆ ಸಂತಸ ಸುದ್ದಿಯೊಂದು ಬಂದಿದೆ. ಅದೇನೆಂದರೆ ಚಿರಂಜೀವಿ ಅವರ ಐತಿಹಾಸಿಕ ಚಿತ್ರ ಸೈರಾ ಚಿತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ.

ಹೌದು, ಮೆಗಾಸ್ಟಾರ್ ಅವರ ಸೈರಾ ಚಿತ್ರದಲ್ಲಿ ಸುದೀಪ್ ನಟಿಸುತ್ತಾರೆ ಎಂಬ ವದಂತಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿರಲಿಲ್ಲ. ಇದೀಗ ಸ್ವತಃ ಸುದೀಪ್ ಟ್ವೀಟ್ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರ ಬಹುನಿರೀಕ್ಷಿತ ಚಿತ್ರವನ್ನು ಸುರೇಂದರ್ ರೆಡ್ಡಿ ನಿರ್ದೇಶಿಸುತ್ತಿದ್ದಾರೆ. ಪುತ್ರ ರಾಮ್ ಚರಣ್ ತೇಜಾ‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಪಾರ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಸುದೀಪ್ ನಟಿಸುತ್ತಿರುವುದು ಖಚಿತವಾಗಿದೆ. ಆದರೆ ಸುದೀಪ್ ತಮ್ಮ ಪಾತ್ರದ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ.

ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಜೊತೆ ಕಾಣಿಸಿಕೊಂಡಿದ್ದ ಸುದೀಪ್​, ನಂತರ ಬಾಹುಬಲಿ ಚಿತ್ರದಲ್ಲಿ ಸಣ್ಣದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಮಿಳಿನ ವಿಜಯ್ ಜೊತೆಯೂ ಪುಲಿ ಚಿತ್ರದಲ್ಲಿ ಖಳನಾಗಿ ಪ್ರಮುಖ ಪಾತ್ರ ನಿಭಾಯಿಸಿದ್ದರು. ಇದೀಗ ಚಿರಂಜೀವಿ ಜೊತೆ ಬೆಳ್ಳಿತೆರೆ ಹಂಚಿಕೊಳ್ಳುವ ಮತ್ತೊಂದು ಅಭೂತಪೂರ್ವ ಅವಕಾಶ ಪಡೆದಿದ್ದಾರೆ. ಸೋಮವಾರದಿಂದ ಸೈರಾ ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಭಾಗಿಯಾಗಿದ್ದಾರೆ.

Next Story

RELATED STORIES