Top

ಹುಬ್ಬಳ್ಳಿ ಜಿಲ್ಲಾ ಪಂಚಾಯತಿ ವೆಬ್‌ಸೈಟ್‌ನಲ್ಲಿ ಯಡವಟ್ಟು.!

ಹುಬ್ಬಳ್ಳಿ ಜಿಲ್ಲಾ ಪಂಚಾಯತಿ ವೆಬ್‌ಸೈಟ್‌ನಲ್ಲಿ ಯಡವಟ್ಟು.!
X

ಹುಬ್ಬಳ್ಳಿ : ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ, ನವಲಗುಂದ ವಿಧಾನ ಸಭಾ ಕ್ಷೇತ್ರಕ್ಕೆ ಎನ್.ಎಚ್.ಕೋನರಡ್ಡಿ ಹಾಗೂ ಕಲಘಟಗಿ ವಿಧಾನ ಸಭಾ ಕ್ಷೇತ್ರಕ್ಕೆ ಸಂತೋಷ ಲಾಡ್ ಇನ್ನೂ ಇವರೇ ಶಾಸಕರು. ಅರೇ ಇದೇನೂ ಹೇಳತಾ ಇರೋದಾ ಇವರು ಮಾಜಿ ಶಾಸಕರು ಅಲ್ಲವಾ...?

ಹೌದು, ಮಾಜಿ ಶಾಸಕರು. ಆದ್ರೆ, ನಮ್ಮ ಧಾರವಾಡ ಜಿಲ್ಲಾ ಪಂಚಾಯತಿಗೆ ಇವರು ಹಾಲಿ ಶಾಸಕರೆ. ರಾಜ್ಯ ವಿಧಾನ ಸಭೆ ಚುನಾವಣೆ ಮುಗಿದು 3 ತಿಂಗಳೂ ಕಳೆದರು ಇನ್ನು ಸಹ ಧಾರವಾಡ ಜಿಲ್ಲಾ ಪಂಚಾಯತಿ ವೆಬ್‍ಸೈಟ್‍ನ ಸ್ಟೇಟ್‍ಸ್‍ನಲ್ಲಿ ಧಾರವಾಡ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ, ನವಲಗುಂದ ವಿಧಾನ ಸಭಾ ಕ್ಷೇತ್ರಕ್ಕೆ ಎನ್.ಎಚ್.ಕೋನರೆಡ್ಡಿ ಹಾಗೂ ಕಲಘಟಗಿ ವಿಧಾನ ಸಭಾ ಕ್ಷೇತ್ರಕ್ಕೆ ಸಂತೋಷ ಲಾಡ್ ಶಾಸಕರು ಎಂದು ನಮೂದಿಸಲಾಗಿದೆ. ನಮ್ಮ ಧಾರವಾಡ ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ ಇನ್ನು ಎಚ್ಚರವಾಗಿಲ್ಲ ಅಂತಾ ಕಾಣುಸುತ್ತಿದೆ.

ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರಕ್ಕೆ ವಿನಯ ಕುಲಕರ್ಣಿ ವಿರುದ್ದ ಅಮೃತ ದೇಸಾಯಿ ಗೆದ್ದು ಬಂದಿದ್ದರೆ. ನವಲಗುಂದ ವಿಧಾನ ಸಭಾ ಕ್ಷೇತ್ರಕ್ಕೆ ಎನ್.ಎಚ್ ಕೋನರೆಡ್ಡಿ ವಿರುದ್ದ ಶಂಕರ ಪಾಟೀಲ ಮುನೇಕೊಪ್ಪ ಹಾಗೂ ಕಲಘಟಗಿ ವಿಧಾನ ಸಭಾ ಕ್ಷೇತ್ರಕ್ಕೆ ಸಂತೋಷ ಲಾಡ್ ವಿರುದ್ದ ಸಿ.ಎಂ.ನಿಂಬಣ್ಣವರ ಗೆಲವು ಸಾದಿಸಿದ್ದಾರೆ. ಆದ್ದರಿಂದ ಧಾರವಾಡ ಜಿಲ್ಲಾ ಪಂಚಾಯಿತಿ ವೆಬ್ಬ್‍ಸೈಟ್‍ನಲ್ಲಿ ನಮ್ಮ ಜನಪ್ರತಿನಿಧಿಗಳ ಹೆಸರು ಇನ್ನು ಅಫ್‍ಡೇಟ್ ಆಗಿಲ್ಲ ಈಗಲಾದರು ಜಿಲ್ಲಾ ಪಂಚಾಯತಿ ಅಧಿಕಾರಿಗಳು ಧಾರವಾಡ ವಿಧಾನ ಸಭಾ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಮತ್ತು ನವಲಗುಂದ ವಿಧಾನ ಸಭಾ ಕೇತ್ರದ ಮಾಜಿ ಎನ್.ಎಚ್. ಕೋನರಡ್ಡಿ, ಕಲಘಟಗಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಂತೋಷ ಲಾಡ್ ಅವರ ಹೆಸರುಗಳನ್ನು ಬದಲಾಯಿಸಬೇಕಿದೆ.

Next Story

RELATED STORIES