Top

ಕುಮಾರಸ್ವಾಮಿ 2 ನಾಲಿಗೆಯ ಮುಖ್ಯಮಂತ್ರಿ

ಕುಮಾರಸ್ವಾಮಿ 2 ನಾಲಿಗೆಯ ಮುಖ್ಯಮಂತ್ರಿ
X

ತುಮಕೂರು: ಮಾಜಿ ಕಾಂಗ್ರೆಸ್ ಶಾಸಕ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಸಿಎಂ ಕುಮಾರಸ್ವಾಮಿಯನ್ನ ಎರಡು ನಾಲಿಗೆ ಸಿಎಂ ಎಂದು ಕಿಡಿಕಾರಿದ್ದಾರೆ.ಮಧುಗಿರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಡಬಲ್ ಟಂಗ್ ನಾಯಕ . ಅವರು ಹೇಳುವುದು ಒಂದು, ಮಾಡುವುದು ಇನ್ನೊಂದು. ರೈತರ ಸಂಪೂರ್ಣ ಸಾಲ ಮನ್ನಾ ಅಂದ್ರು. ಈಗ ರೈತರ ಸಾಲಮನ್ನಾವು ಕನ್ನಡಿಯೊಳಗಿನ ಗಂಟಾಗಿದೆ. ಸಾಲ ಮನ್ನಾ ದೊಡ್ಡ ದೊಡ್ಡ ಎಸ್ಟೇಟ್ ಹೊಂದಿರುವ ಉದ್ಯಮಿಗಳಿಗೆ ವರದಾನವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಬಜೆಟ್ ನಲ್ಲಿ ತುಮಕೂರು ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಜಿಲ್ಲೆಗೆ ವೈದ್ಯಕೀಯ ಕಾಲೇಜು ಈ ಹಿಂದೆ ಘೋಷಣೆಯಾಗಿತ್ತು. ಕುಮಾರಸ್ವಾಮಿ ಬಜೆಟ್‌ಲ್ಲಿ ಅದನ್ನು ಪ್ರಸ್ತಾಪಿಸದೇ ಮೋಸ ಮಾಡಿದ್ದಾರೆ. ಹಿಂದಿನ ಕಾಂಗ್ರೆಸ್ ‌ಸರ್ಕಾರ ಕೆಲ ಯೋಜನೆಗೆ ಕುಮಾರಸ್ವಾಮಿ ಕತ್ತರಿ ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ನಮ್ಮ ಜಿಲ್ಲೆಗೆ ಹಿಂದಿನ ಸರಕಾರ ಮಂಜೂರು ಮಾಡಿದ್ದ ಯೋಜನೆಗಳನ್ನು ಹೆಚ್ ಡಿ ಕೆ ಯಾಕೆ ಮುಂದುವರೆಸುತ್ತಿಲ್ಲ..? ವಿದ್ಯಾರ್ಥಿ ಗಳಿಗೆ ಉಚಿತ ಬಸ್ ಪಾಸ್ ನೀಡುವಲ್ಲೂ ಮೋಸ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಯಲ್ಲಿ 2 ಕೆ.ಜಿ. ಅಕ್ಕಿಯನ್ನು ಕಡಿಮೆ ಮಾಡಿ, ಬಡವರ ಹೊಟ್ಟೆ ಮೇಲೆ ಹೊಡೆದಿದ್ದಾರೆ. ಡಿಸೆಲ್ ಪೆಟ್ರೋಲ್ ವಿದ್ಯುತ್ ದರ ಹೆಚ್ಚಿಸಿ ಜನಸಾಮಾನ್ಯರ ಮೇಲೆ‌ ಹೊರೆ ಹೇರಿದ್ದಾರೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Next Story

RELATED STORIES