Top

ರಷ್ಯಾ ಟ್ರಿಪ್‌ಗೆ ಹೋಗಲಿದ್ದಾರಂತೆ ನಟ ಗಣೇಶ್

ರಷ್ಯಾ ಟ್ರಿಪ್‌ಗೆ ಹೋಗಲಿದ್ದಾರಂತೆ ನಟ ಗಣೇಶ್
X

ಜೂಮ್ ಮತ್ತು ಚಮಕ್ ಸಿನಿಮಾಗಳ ಸೂಪರ್ ಹಿಟ್ ನಂತ್ರ, ಇತ್ತೀಚೆಗಷ್ಟೇ 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್. ತಮ್ಮ ಜನುಮ ದಿನ ಮಹೋತ್ಸವವನ್ನ ಅಭಿಮಾನಿಗಳ ಜೊತೆ ತುಂಬಾ ಅದ್ದೂರಿಯಾಗಿ ಆಚರಿಸಿಕೊಂಡಿದ್ರು. ಜತೆಗೆ ಗೀತಾ ಸಿನಿಮಾದ ಫಸ್ಟ್ ಲುಕ್ ಕೂಡ ರಿವೀಲ್ ಆಗಿತ್ತು.

ಅಷ್ಟೇ ಯಾಕೆ ಸದ್ಯ ಗಣಿ ಬ್ಯುಸಿ ಇರೋ ನಿರೀಕ್ಷಿತ ಚಿತ್ರ ಆರೆಂಜ್​ ಟೀಸರ್ ಲಾಂಚ್ ಮಾಡಿತ್ತು ಚಿತ್ರತಂಡ. ಇದೀಗ ಅದೇ ಸಿನಿಮಾದ ಶೂಟಿಂಗ್ ನಿಮಿತ್ತ ಗೋಲ್ಡನ್ ಸ್ಟಾರ್ ರಷ್ಯಾಗೆ ಪ್ರಯಾಣ ಬೆಳೆಸ್ತಿದ್ದಾರೆ. ಪ್ರಶಾಂತ್ ರಾಜ್ ನಿರ್ದೇಶನದ ಸಿನಿಮಾ ಇದಾಗಿದ್ದು, ಜೂಮ್ ಬ್ಲಾಕ್ ಬಸ್ಟರ್ ಹಿಟ್​ನ ನಂತ್ರ ಮತ್ತೊಮ್ಮೆ ಗಣಿ-ಪ್ರಶಾಂತ್ ರಾಜ್ ಜೋಡಿ ಮೋಡಿ ಮಾಡೋ ಸೂಚನೆ ಕೊಟ್ಟಿದೆ.

ಹೇಳಿ ಕೇಳಿ ಗಣಿ ಸಿನಿಮಾಗಳ ಸಾಂಗ್ಸ್ ಅಂದ್ರೆ ಅಲ್ಲೊಂದು ಅದ್ಧೂರಿತನ ಇದ್ದೇ ಇರುತ್ತೆ. ಅದು ಕಿವಿಗೆ ಇಂಪು ಕಣ್ಣಿಗೆ ತಂಪು ಕೊಡೋದ್ರಲ್ಲಿ ಎರಡು ಮಾತಿಲ್ಲ. ಅದ್ರಲ್ಲೂ ಪ್ರಶಾಂತ್ ರಾಜ್ ಸಿನಿಮಾಗಳು ಅಂದಾಗ ಅಲ್ಲಿ ಮ್ಯೂಸಿಕ್​ಗೆ ಹೆಚ್ಚು ಒತ್ತು ಕೊಡಲಾಗುತ್ತೆ. ಅದ್ರಂತೆ ಅದಕ್ಕೆ ತಕ್ಕನಾದ ಕಲರ್​ಫುಲ್ ಲೊಕೇಷನ್ಸ್ ಕೂಡ ಇಂಪಾರ್ಟೆಂಟ್ ಅನಿಸುತ್ತೆ. ಅದಕ್ಕೆ ಅಂತಲೇ ಗಣಿ ಅಂಡ್ ಟೀಂ ರಷ್ಯಾಗೆ ಹೊರಟಿದೆ.

ರಷ್ಯಾದ ಬಾಕೂ ಮತ್ತು ಅದರ ಸುತ್ತಮುತ್ತಲಿನ ರಮಣೀಯ ತಾಣಗಳಲ್ಲಿ ಮೂರು ಹಾಡುಗಳನ್ನ ಚಿತ್ರಿಸಲಿದೆ ಆರೆಂಜ್ ಟೀಂ. ಇನ್ನು ಜೂಮ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದ ಎಸ್ ಎಸ್ ಥಮನ್ ಈ ಸಿನಿಮಾಗೂ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದು, ಹೈದ್ರಾಬಾದ್​ನ ಸ್ಟಾರ್ ಕೊರಿಯೋಗ್ರಫರ್ ಗಣೇಶ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದಾರೆ.

ಗಣಿ ಜೊತೆ ನಟಿ ಪ್ರಿಯಾ ಆನಂದ್ ಕೂಡ ಫ್ಲೈಟ್ ಹತ್ತುತ್ತಿದ್ದು, 30 ಮಂದಿ ಆರೆಂಜ್ ಟೀಂ ರಷ್ಯಾದಲ್ಲಿ ಬೀಡು ಬಿಡಲಿದೆ. ಒಟ್ಟಾರೆ ಹತ್ತು ದಿನದಲ್ಲಿ ಮೂರು ಹಾಡುಗಳನ್ನ ಚಿತ್ರಿಸೋ ಮೂಲಕ ಆರೆಂಜ್ ಶೂಟಿಂಗ್ ಪ್ಯಾಕಪ್ ಆಗಲಿದ್ದು, ಆದಷ್ಟು ಬೇಗ ಸಿನಿಮಾನ ತೆರೆಗೆ ತರಲಿದೆ ಚಿತ್ರತಂಡ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES