Top

ಉಚಿತ ಬಸ್ ಪಾಸ್ ನೀಡುವಂತೆ ಖಂಡಿಸಿ ಪ್ರತಿಭಟನೆ...!

ಉಚಿತ ಬಸ್ ಪಾಸ್ ನೀಡುವಂತೆ ಖಂಡಿಸಿ ಪ್ರತಿಭಟನೆ...!
X

ಯಾದಗಿರಿ : ಜಿಲ್ಲೆಯಲ್ಲಿ ಉಚಿತ ಬಸ್ ಪಾಸ್‌ಗೆ ಒತ್ತಾಯಿಸಿ, ಯಾದಗಿರಿಯಲ್ಲಿಂದು ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆಯಾಗಿದೆ. ಸಿಎಂ ಕುಮಾರಸ್ವಾಮಿಯವರು ಮಂಡಿಸಿದ ಬಜೆಟ್ ನಲ್ಲಿ ವಿದ್ಯಾರ್ಥಿಗಳ ಬಹುದಿನಗಳ ಬೇಡಿಕೆಯಾಗಿದೆ. ಇಂತಹ ಉಚಿತ ಬಸ್ ಪಾಸ್ ನೀಡದೇ ಇರುವ ದೋಸ್ತಿ ಸರ್ಕಾರವನ್ನು ಖಂಡಿಸಿ ಯಾದಗಿರಿ ನಗರದಲ್ಲಿಂದು, ವಿವಿಧ ಶಾಲೆಯ ವಿದ್ಯಾರ್ಥಿಗಳು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ನೇತೃತದಲ್ಲಿ ಪ್ರತಿಭಟನೆ ಮಾಡಿದರು.

ಸರ್ಕಾರದ ವಿರುದ್ದ ಘೋಷಣೆ ಕೊಗುತ್ತಾ ನಗರದ ಕನಕ ವೃತ್ತದಿಂದ ಪ್ರಾರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ರಾಲಿ ನಗರದ ಪ್ರಮುಖ ರಸ್ತೆಗಳ ಮೂಲಕ ಸುಭಾಷ ವೃತ್ತ ತಲುಪಿತು. ನಂತರ ಮಾನವ ಸರಪಳಿ ನಿರ್ಮಾಸಿ ರಾಜ್ಯ ಸರ್ಕಾರದ ವಿರುದ್ದ ವಿದ್ಯಾರ್ಥಿಗಳು ಧಿಕ್ಕಾರ ಕೂಗಿದ್ದರು. ರಾಜ್ಯದಲ್ಲಿ ಮುಖ್ಯಮಂತ್ರಿಯವರು ಮಂಡಿಸಿದ ಬಜೆಟ್ ನಲ್ಲಿ ಈ ಭಾಗದ ಶಾಲಾ ಕಾಲೇಜು ಹಾಗು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಯಾವುದೇ ಕೊಡುಗೆ ನೀಡಿಲ್ಲ. ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

Next Story

RELATED STORIES