Top

ಅತಿವೃಷ್ಠಿಯಿಂದ ಮೃತರ ಕುಟುಂಬದ ಪರಿಹಾರ ಮೊತ್ತ 5 ಲಕ್ಷಕ್ಕೆ ಏರಿಕೆ

ಅತಿವೃಷ್ಠಿಯಿಂದ ಮೃತರ ಕುಟುಂಬದ ಪರಿಹಾರ ಮೊತ್ತ 5 ಲಕ್ಷಕ್ಕೆ ಏರಿಕೆ
X

ಬೆಂಗಳೂರು : ಪ್ರವಾಹ ಸೇರಿದಂತೆ ಇತರೆ ಅತಿವೃಷ್ಠಿಯಿಂದಾಗಿ ಸಾವನ್ನಪ್ಪುವ ಕುಟುಂಬಕ್ಕೆ ನೀಡಲಾಗುವ ಪರಿಹಾರ ಮೊತ್ತವನ್ನು ರಾಜ್ಯ ಸರ್ಕಾರ ಏರಿಕೆ ಮಾಡಿದೆ. ಈ ವರೆಗೆ ನೀಡಲಾಗುತ್ತಿದ್ದ ನಾಲ್ಕು ಲಕ್ಷದ ಜೊತೆಗೆ, ಒಂದು ಲಕ್ಷವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡುವ ಮೂಲಕ ಐದು ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ಈ ಕುರಿತು ಇಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಪ್ರವಾಸ ಸೇರಿದಂತೆ ಅನೇಕ ಅತಿವೃಷ್ಠಿಯಿಂದಾಗಿ ಸಾವನ್ನಪ್ಪಿದ ಕುಟುಂಬಕ್ಕೆ ಇದುವರೆಗೆ ನಾಲ್ಕು ಲಕ್ಷ ಪರಿಹಾರವನ್ನು ನೀಡಲಾಗುತ್ತಿದೆ. ಆದರೇ ಮೃತ ಕುಟುಂಬಕ್ಕೆ ಎಷ್ಟೇ ಪರಿಹಾರ ನೀಡಿದರೂ ಕಡಿಮೆಯೇ. ಸತ್ತವರ ಮತ್ತೆ ಬದುಕಿ ಬರೋದಿಲ್ಲ. ಹೀಗಾಗಿ ಈ ಮೊತ್ತಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಂದು ಲಕ್ಷ ಸೇರಿಸಿ, ಇನ್ಮುಂದೆ ಐದು ಲಕ್ಷ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದರು.

ಹೀಗಾಗಿ ಇದುವರೆಗೆ ಅತಿವೃಷ್ಠಿಯಿಂದಾಗಿ ಮೃತಪಟ್ಟ ಕುಟುಂಬಕ್ಕೆ ನೀಡಲಾಗುತ್ತಿದ್ದ ಪರಿಹಾರ ಧನ ನಾಲ್ಕು ಲಕ್ಷದಿಂದ, ಐದು ಲಕ್ಷ ಏರಿಕೆಯಾಗಿದೆ. ಈ ಮೂಲಕ ನೊಂದ ಕುಟುಂಬಕ್ಕೆ ಆಸರೆಯಾಗುವಂತೆ ಸರ್ಕಾರ ಹೆಚ್ಚುವರಿ ಒಂದು ಲಕ್ಷ ನೀಡುವ ಮೂಲಕ, ಪರಿಹಾದ ಮೊತ್ತವನ್ನು ಐದು ಲಕ್ಷಕ್ಕೆ ಏರಿಸಿದೆ..

Next Story

RELATED STORIES