Top

ಕುಣಿಗಲ್ ಕ್ಷೇತ್ರದಲ್ಲಿ ಕೈ-ದಳ ಕಾರ್ಯಕರ್ತರ ಗಲಾಟೆ

ಕುಣಿಗಲ್ ಕ್ಷೇತ್ರದಲ್ಲಿ ಕೈ-ದಳ ಕಾರ್ಯಕರ್ತರ ಗಲಾಟೆ
X

ತುಮಕೂರು : ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ರು ತುಮಕೂರಿನ ಕುಣಿಗಲ್ ಕ್ಷೇತ್ರದಲ್ಲಿ ಮುಗಿದಿಲ್ಲ ಕೈ ದಳ ಕಾರ್ಯಕರ್ತರ ಗಲಾಟೆ.

ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ ಮನೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭದಲ್ಲಿ ಶಿಷ್ಟಚಾರ ಉಲ್ಲಂಘಿಸಲಾಗಿದೆ ಅಂತಾ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ವಾಗ್ವಾದ ನಡೆಸಿದ್ರು. ಕೇವಲ ಕಾಂಗ್ರೆಸ್ ಸಚಿವ ಹಾಗೂ ಮುಖಂಡರ ಪೋಟೋ ಮಾತ್ರ ಹಾಕಿ ಪ್ಲೇಕ್ಸ್ ನಲ್ಲಿ ಸಿಎಂ ಹಾಗೂ ಸ್ಥಳೀಯ ಸಚಿವರ ಪೋಟೋ ಹಾಕದಕ್ಕೆ ಜೆಡಿಎಸ್ ಕಾರ್ಯಕರ್ತರು ಆಕ್ಷೆಪ ವ್ಯಕ್ತಪಡಿಸಿದ್ರು.

ಕಾರ್ಯಕ್ರಮ ಪ್ಲೇಕ್ಸ್ ನಲ್ಲಿ ಸಚಿವ ಯು.ಟಿ ಖಾದರ್,ಡಿ.ಕೆ ಶಿವಕುಮಾರ್, ಶಾಸಕ ಡಾ. ರಂಗನಾಥ್, ಸಂಸದ ಡಿ.ಕೆ ಸುರೇಶ್ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡ ಪೋಟೋಗಳು ಮಾತ್ರ ಕಾಣಿಸಿಕೊಂಡಿದ್ವು. ಸಿಎಂ ಸೇರಿದ್ದಂತೆ ಸ್ಥಳೀಯ ಸಚಿವರ ಹಾಗೂ ಜೆಡಿಎಸ್ ಮುಖಂಡರ ಕಡಗಣನೆ ಬಗ್ಗೆ ಶಾಸಕ ಡಾ. ರಂಗನಾಥ್ ಜೊತೆಗೆ ವಾಗ್ವಾದ ನಡೆಸಿದ ತಾಲೂಕು ಜೆಡಿಎಸ್ ಅಧ್ಯಕ್ಷ ಹರೀಶ್ ,ಪರಸ್ಪರ ವಾಗ್ವಾದಕ್ಕೆ ಇಳಿದ ಉಭಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲು ಜೆಡಿಎಸ್ ಮುಖಂಡರ ನಿರ್ಧಾರಿಸಿದ್ದಾರೆ.

Next Story

RELATED STORIES