Top

ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ಮರಳಿ ತಾಯಿ ಮಡಿಲಿಗೆ

ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ಮರಳಿ ತಾಯಿ ಮಡಿಲಿಗೆ
X

ಉತ್ತರಕನ್ನಡ : ಕಳೆದ ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕನೋರ್ವ ಮರಳಿ ತಾಯಿ ಮಡಿಲಿಗೆ ಸೇರಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ಯಲ್ಲಾಪುರ ತಾಲ್ಲೂಕಿನ ಗೋರ್ಸಗದ್ದೆಯ ಸುಬ್ರಹ್ಮಣ್ಯ ಸಿದ್ದಿ ನಾಲ್ಕು ವರ್ಷಗಳ ಬಳಿಕ ಪತ್ತೆಯಾದ ಯುವಕ. ತಂದೆ ರುದ್ರೇಶ್ ಸಿದ್ದಿ ಮುಂಬೈನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ, ಅವರನ್ನು ಹುಡುಕಿಕೊಂಡು ೨೦೧೪ರಲ್ಲಿ ಈತ ಮನೆಯಿಂದ ಹೊರಟಿದ್ದ. ರೈಲಿನ ಮೂಲಕ ಮುಂಬೈಗೆ ಹೊರಟ ಈತ ತಪ್ಪಿ ಮಥುರಾಕ್ಕೆ ಪ್ರಯಾಣ ಬೆಳೆಸಿದ್ದ. ಈ ವೇಳೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಈತನನ್ನು ಗಮನಿಸಿದ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಫಿರೋಜಾಬಾದ್ ನ ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ.

ಇದೇ ಸಮಯದಲ್ಲಿ, ಯುವಕನನ್ನು ಅಪಹರಣ ಮಾಡಿರುವುದಾಗಿ ಯಲ್ಲಾಪುರ ಠಾಣೆಯಲ್ಲಿ ಬಾಲಕನ ತಾಯಿ ಶೀಲಾ ಸಿದ್ದಿ ದೂರು ದಾಖಲಿಸಿದ್ದರು. ಆದರೆ, ೨೦೧೭ರ ವರೆಗೆ ಈತನ ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಜಿಲ್ಲಾ ಅಪರಾಧ ದಳ (ಡಿಸಿಬಿ)ಕ್ಕೆ ವರ್ಗಾಯಿಸಲಾಗಿತ್ತು. ಅದರಂತೆ ತನಿಖೆ ಕೈಗೊಂಡಿದ್ದ ಪೊಲೀಸ್ ಇನ್ಸ್ಪೆಕ್ಟರ್ ಶರಣಗೌಡ ವಿ.ಎಚ್ ನೇತೃತ್ವದ ತಂಡಕ್ಕೆ ಫಿರೋಜಾಬಾದ್ ನಲ್ಲಿ ಈತ ಇರುವುದನ್ನು ಪತ್ತೆ ಹಚ್ಚಿದೆ. ಬಳಿಕ ಅಲ್ಲಿನ ಪೊಲೀಸರನ್ನು ಸಂಪರ್ಕಿಸಿದ್ದು, ಅವರೇ ಈ ಯುವಕನನ್ನು ಕಾರವಾರದ ಡಿಸಿಬಿ ಕಚೇರಿಗೆ ತಂದು ಬಿಟ್ಟಿದ್ದಾರೆ.

ಇದೀಗ ಯಲ್ಲಾಪುರದ ನಿವಾಸಕ್ಕೆ ಈತನನ್ನು ಕರೆದುಕೊಂಡು ಬಂದಿದ್ದಕ್ಕೆ ಬಹಳ ಖುಷಿಯಾಗುತ್ತಿದೆ ಎಂದು ಸುಬ್ರಹ್ಮಣ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

Next Story

RELATED STORIES