Top

ಉಡುಪಿಗೆ ಆಗಮಿಸಿದ ಭೂಗತ ಪಾತಕಿ ಬನ್ನಂಜೆ ರಾಜ

ಉಡುಪಿಗೆ ಆಗಮಿಸಿದ ಭೂಗತ ಪಾತಕಿ ಬನ್ನಂಜೆ ರಾಜ
X

ಉಡುಪಿ: ತಾಯಿಯ ಆರೋಗ್ಯ ವಿಚಾರಿಸಲು ಭೂಗತ ಪಾತಕಿ ಬನ್ನಂಜೆ ರಾಜ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದಾನೆ. ನಿನ್ನೆ ಹಿಂಡಲಗಾ ಜೈಲಿನಿಂದ ರಾಜನನ್ನು ಪೊಲೀಸರು ಉಡುಪಿಗೆ ಕರೆತಂದಿದ್ದಾರೆ. ಇನ್ನು ಇಂದು ಬನ್ನಂಜೆ ರಾಜ ತಾಯಿ ವಿಲಾಸಿನಿ ಶೆಟ್ಟಿ ಮನೆಗೆ ಆಗಮಿಸಲಿದ್ದು, ಉಡುಪಿಯ ಕಲ್ಮಾಡಿಯ ಮನೆಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಇನ್ನು ರಾಜನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಮಾನವೀಯ ನೆಲೆಯಲ್ಲಿ ತಾಯಿಯನ್ನು ಭೇಟಿಯಾಗಲು ನ್ಯಾಯಾಲಯ ಅವಕಾಶ ನೀಡಿದೆ. ಮೊರೆಕ್ಕೋದಲ್ಲಿ ಬನ್ನಂಜೆ ರಾಜನ ಬಂಧನವಾಗಿತ್ತು,ಹದಿನೈದು ಪ್ರಕರಣಗಳ ವಿಚಾರಣೆ ಎದುರಿಸುತ್ತಿರುವ ಭೂಗತ ಪಾತಕಿ ಸದ್ಯ ವಿಚಾರಣಾಧೀನ ಖೈದಿಯಾಗಿ ಹಿಂಡಲಗಾ ಜೈಲಿನಲ್ಲಿದ್ದಾನೆ.

Next Story

RELATED STORIES