Top

ಸಾಲಮನ್ನ ನಂತರವೂ ಮುಂದುವರಿದ ರೈತರ ಸರಣಿ ಆತ್ಮಹತ್ಯೆ

ಸಾಲಮನ್ನ ನಂತರವೂ ಮುಂದುವರಿದ ರೈತರ ಸರಣಿ ಆತ್ಮಹತ್ಯೆ
X

ಬೀದರ್​: ಮೃತ್ರಿ ಸರ್ಕಾರದ ಮೊದಲ ಬಜೆಟ್ ನಲ್ಲಿ ಮುಖ್ಯ ಮಂತ್ರಿ‌ ಹೆಚ್.ಡಿ ಕುಮಾರಸ್ವಾಮಿ ರೈತರ ಸಾಲ ಮನ್ನ ಘೋಷಣೆ ಬಳಿಕವು ರೈತರ ಆತ್ಮಹತ್ಯೆ ಮುಂದುವರೆದಿದೆ. ಗಡಿನಾಡು ಬೀದರ್ ಜಿಲ್ಲೆಯಲ್ಲಿ ಪ್ರತ್ಯೆಕ ಎರಡು ಕಡೆ ಇಂದು ಇಬ್ಬರು ರೈತರು ಆತ್ಮಹತ್ಯೆ‌ಮಾಡಿಕೊಂಡಿದ್ದಾರೆ.

ಬೀದರ್ ತಾಲೂಕಿನ ಮಲ್ಲಿಕ್ ಮಿರ್ಜಾಪುರ ಗ್ರಾಮದಲ್ಲಿ ರಾಜ್ ರೆಡ್ಡಿ (30) ಮನೆಯಲ್ಲಿ ಯಾರೂ ಇಲ್ಲದಾಗ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ರಾಜರೇಡ್ಡಿ,ಬೀದರ್ ನ ವಿವಿಧ ಬ್ಯಾಂಕ್ ನಲ್ಲಿ ಎರಡೂ ಲಕ್ಷಕ್ಕೂ ಅಧಿಕ ಸಾಲ ಮಾಡು ಕೊಂಡಿದ್ದ,ಸಾಲ ತೀರಿಸುವಂತೆ ಬ್ಯಾಂಕ್ ನೋಟಿಸ್ ಕಳಿಸಲಿದೆ ಎಂದು ಹೆದರಿ ಮನೆಯಲ್ಲಿ ಯಾರು ಇಲ್ಲದಿದ್ದಾಗ ನೇಣಿಗೆ ಶರಣಾಗಿದ್ದಾನೆ.

ಈ ಕುರಿತು ಬಗದಲ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ (ಎಂ) ಗ್ರಾಮದಲ್ಲಿ ಪಂಡಿತ್ ಮಲ್ಲಪ್ಪ ಎಂಬ ರೈತ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಪಂಡಿತ್ ವಿವಿಧ ಬ್ಯಾಂಕ್ ಗಳಲ್ಲಿ 3 ಲಕ್ಷ ಸಾಲ ಮಾಡಿಕೊಂಡಿದ್ದ, ಅಷ್ಟೇ ಅಲ್ಲಾ ಕಳೆದ ತಿಂಗಳಲ್ಲಿ ಮತ್ತೆ ಸಾಲ ಮಾಡಿಕೊಂಡು ಮಗಳ ಮದುವೆ ಮಾಡಿದ್ದ. ಸಾಲದ ಹೊರೆ ಹೆಚ್ಚಾಗಿದ್ದು, ಸಾಲ ತಿರಿಸಲಾಗದೆ ಇಂದು ಪಂಡಿತ್ ತನ್ನ ಜಮೀನಿನಲ್ಲೆ ಇರುವ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಈ ಸಂಬಂದ ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES