Top

ಗೃಹಪ್ರವೇಶ ಮುಗಿಸಿ ಬರುವಾಗ ಭೀಕರ ದುರಂತ, ಐವರ ದುರ್ಮರಣ

ಗೃಹಪ್ರವೇಶ ಮುಗಿಸಿ ಬರುವಾಗ ಭೀಕರ ದುರಂತ, ಐವರ ದುರ್ಮರಣ
X

ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿದಂತೆ 5 ಮಂದಿ ಸಾವನ್ನಪಿರುವ ಘಟನೆ ನಡದಿದೆ. ಮೃತಪಟ್ಟವರನ್ನ ಮಂಗಳೂರಿನ ಕೆ.ಸಿ.ರೋಡ್ ನಿವಾಸಿಗಳಾದ ಬೀಫಾತಿಮ್ಮ (65) ಅಸ್ಮಾ(30) ನಸೀಮಾ(38) ಮುಸ್ತಾಕ್(41) ಹಾಗೂ ಇಮ್ತಿಯಾಜ್ (35) ಎಂದು ಗುರುತಿಸಲಾಗಿದೆ.

ಬೀಫಾತಿಮ್ಮ ಕುಟುಂಬದವರು ಪಾಲಕ್ಕಾಡ್‌ನಲ್ಲಿ ನಡೆದ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿ ವಾಪಾಸ್ ಆಗುತಿದ್ದ ವೇಳೆ ಉಪ್ಪಳದಲ್ಲಿ ತೂಫಾನ್ ಜೀಪ್ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಈ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ತೂಫಾನ್ ಜೀಪ್ ನಜ್ಜು ಗುಜ್ಜಾಗಿದೆ. ಜೀಪ್ ನಲ್ಲಿ ಮಕ್ಕಳು ಸೇರಿದಂತೆ 18 ಮಂದಿ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಗಾಯಗೊಂಡವರನ್ನ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Next Story

RELATED STORIES