Top

ದೇವರ ಮೊರೆ ಹೋದ ಹಂದಿ: ಕೊಪ್ಪಳದಲ್ಲೊಂದು ಅಚ್ಚರಿಯ ಘಟನೆ

ದೇವರ ಮೊರೆ ಹೋದ ಹಂದಿ: ಕೊಪ್ಪಳದಲ್ಲೊಂದು ಅಚ್ಚರಿಯ ಘಟನೆ
X

ಕೊಪ್ಪಳ: ಕೊಪ್ಪಳದ ದೇವಸ್ಥಾನವೊಂದರಲ್ಲಿ ಹಂದಿಯೊಂದು ಪ್ರದಕ್ಷಿಣೆ ಹಾಕಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕೊಪ್ಪಳದ ಭಾಗ್ಯ ನಗರದಲ್ಲಿ ಹಂದಿಯೊಂದು ಊರಮ್ಮ ದೇವಿ ದೇವಸ್ಥಾನ, ಮಸೀದಿಯನ್ನು ಪ್ರದಕ್ಷಿಣೆ ಹಾಕುತ್ತಿದ್ದು, ಹಲವು ದಿನಗಳಿಂದ ಹೀಗೆ ದೇವರ ಮೊರೆ ಹೋಗಿದೆಯಂತೆ.

ಇನ್ನು ಪ್ರದಕ್ಷಿಣೆ ಹಾಕುವ ವೇಳೆ ಆಹಾರ ಕೊಟ್ರು ಕೂಡ ಏನೂ ತಿನ್ನದೇ, ಹಂದಿ ಭಕ್ತಿಯ ಪರಾಕಷ್ಠೆ ತೋರುತ್ತಿದೆ. ಇನ್ನು ಈ ಹಂದಿಯ ಪ್ರದಕ್ಷಿಣೆ ನೋಡಲು ಜನ ದೇವಸ್ಥಾನಕ್ಕೆ ಬರುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಕೆ.ಆರ್.ಪುರಂನ ದೇವಸ್ಥಾನವೊಂದರಲ್ಲಿ ನಾಯಿಯೊಂದು ಹೀಗೆ ಸತತವಾಗಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುವ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿತ್ತು.

Next Story

RELATED STORIES