Top

ಮಿಸ್ಟರ್ ಕೂಲ್ ಧೋನಿ ನಾಯಕನಾಗಿದ್ದು ಹೇಗೆ ಗೊತ್ತಾ ?

ಮಿಸ್ಟರ್ ಕೂಲ್ ಧೋನಿ ನಾಯಕನಾಗಿದ್ದು ಹೇಗೆ ಗೊತ್ತಾ ?
X

ಬ್ರಿಸ್ಟಾಲ್​ : ಸದ್ಯ ಟೀಂ ಇಂಡಿಯಾದ ಮಿಸ್ಟರ್ ಕೂಲ್ ಧೋನಿ ಒಳ್ಳೆಯ ಫಾರ್ಮ್‍ನಲ್ಲಿರುವ ಕ್ರಿಕೆಟಿಗ. ನಿನ್ನೆಯಷ್ಟೆ ಆಂಗ್ಲರ ನಾಡಲ್ಲಿ ತಂಡದ ಆಟಗಾರರೊಂದಿಗೆ 37ನೇ ಹುಟ್ಟು ಹಬ್ಬ ಆಚರಿಸಿ ಸಂಭ್ರಮಿಸಿರುವ ಮಾಹಿ ಅಭಿಮಾನಿಗಳಿಗೆ ವಿಚಾರ ಒಂದನ್ನ ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಅದು 2007ರ ಚೊಚ್ಚಲ ಟಿ20 ವಿಶ್ವಕಪ್‍ಗೆ ನಾಯಕನಾಗಿ ಆಯ್ಕೆಯಾದ ಕುರಿತು ಧೋನಿ ಮನಬಿಚ್ಚಿ ಮಾತನಾಡಿದ್ದಾರೆ. 2007ರ ವಿಶ್ವಕಪ್‍ನಲ್ಲಿ ಭಾರತ ಹೀನಾಯವಾಗಿ ಸೋಲು ಕಂಡಿತ್ತು. ಅಂದು ನಾಯಕನಾಗಿದ್ದ ರಾಹುಲ್ ದ್ರಾವಿಡ್ ತಮ್ಮ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೆಲವೇ ತಿಂಗಳಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಆರಂಭಕ್ಕೆ ಕೆಲವೇ ತಿಂಗಳು ಬಾಕಿ ಇತ್ತು. ಆಯ್ಕೆ ಮಂಡಳಿ ಹೊಸ ನಾಯಕನ ಹುಡುಕಾಟದಲ್ಲಿತ್ತು. ಅಂದು ತಂಡದಲ್ಲಿ ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಸೀನಿಯರ್ಸ್‍ಗಳಿದ್ರು. ಇವರೆಲ್ಲರನ್ನೂ ಬಿಟ್ಟು ಆಯ್ಕೆ ಮಂಡಳಿ ಧೋನಿಗೆ ಮಣೆ ಹಾಕಿತ್ತು. ಇದರ ಬಗ್ಗೆ ಧೋನಿ ಈಗ ಹೇಳಿದ್ದಾರೆ.

ನನ್ನ ಪ್ರಮಾಣಿಕತೆ ನನ್ನನ್ನ ನಾಯನಾಗುವಂತೆ ಮಾಡಿತು

ನನ್ನಲ್ಲಿದ್ದ ಪ್ರಮಾಣಿಕತೆ ಮತ್ತು ಪಂದ್ಯವನ್ನ ಗ್ರಹಿಸುವ ರೀತಿ, ಇದೆಲ್ಲಕ್ಕಿಂತ ಹೆಚ್ಚಾಗಿ ಅಂದು ತಂಡದಲ್ಲಿ ನಾನೇ ಕಿರಿಯ ಆಟಗಾರನಾಗಿದ್ದೆ. ಹಿರಿಯ ಆಟಗಾರ ಅಭಿಪ್ರಾಯ ಕೇಳಿದಾಗ ನಾನು ಅಭಿಪ್ರಾಯ ಹೇಳಲು ಹೆದರುತ್ತಿರಲಿಲ್ಲ ಅಥವಾ ನಾಚಿಕೊಳ್ಳುತ್ತಿರಲ್ಲಿಲ್ಲ ಎಂದು ಧೋನಿ ಹೇಳಿದ್ದಾರೆ. ಆಯ್ಕೆ ಮಂಡಳಿ ಅದ್ಯಾವ ಘಳಿಗೆಯಲ್ಲಿ ಧೋನಿಯನ್ನ ನಾಯಕನಾಗುವಂತೆ ಮಾಡಿತೋ ಗೊತ್ತಿಲ್ಲ. ಧೋನಿ ವಿಶ್ವ ಕ್ರಿಕೆಟ್‍ನಲ್ಲಿ ಮಾಸ್ಟರ್ ಕ್ಲಾಸ್ ಲೀಡರ್ ಎಂದು ಗುರುತಿಸಿಕೊಂಡಿದ್ದಾರೆ.

Next Story

RELATED STORIES