Top

ನಟ ಮಿಥುನ್ ಚಕ್ರವರ್ತಿ ಮಗನ ಮದುವೆ ರದ್ದು: ಯಾಕೆ ಗೊತ್ತಾ?

ನಟ ಮಿಥುನ್ ಚಕ್ರವರ್ತಿ ಮಗನ ಮದುವೆ ರದ್ದು: ಯಾಕೆ ಗೊತ್ತಾ?
X

ಅತ್ಯಾಚಾರ ಮತ್ತು ವಂಚನೆ ಮಾಡಿರುವುದಾಗಿ ಮಹಿಳೆಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಹಿರಿಯ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪುತ್ರನ ಮದುವೆ ರದ್ದಾಗಿದೆ.

ಊಟಿಯಲ್ಲಿದ್ದ ಮಿಥುನ್ ಚಕ್ರವರ್ತಿ ಅವರ ಐಷಾರಾಮಿ ಹೋಟೆಲ್​ನಲ್ಲಿ ಮದುವೆಗೆ ಸಿದ್ದತೆ ನಡೆದಿತ್ತು. ಮಹಿಳೆ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೋಲೀಸರು ಮದುವೆಯನ್ನು ನಿಲ್ಲಿಸಿದ್ದಾರೆ. ಮದುವೆ ರದ್ದಾಗಿದ್ದರಿಂದ ಬೇಸರಗೊಂಡ ವಧುವಿನ ಕುಟುಂಬಸ್ಥರು ಮರಳಿದ್ದಾರೆ.

ಮಿಥುನ್ ಪತ್ನಿ ಯೋಗಿತಾ ಬಾಲಿ ಹಾಗೂ ಪುತ್ರ ಮಹಾ ಅಕ್ಷಯ್ ನಿರೀಕ್ಷಣಾ ಜಾಮೀನು ಪಡೆದಿರುವ ಹಿನ್ನೆಲೆಯಲ್ಲಿ ಬಂಧನದಿಂದ ಪಾರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿಡಿದೆ.

ಮಹಾಅಕ್ಷಯ್ ತನ್ನನ್ನು ವಿವಾಹವಾಗುವುದಾಗಿ ನಂಬಿಸಿ ಕಳೆದ ನಾಲ್ಕು ವರ್ಷಗಳಿಂದ ನನ್ನ ಜತೆ ಲೈಂಗಿಕ ಸಂಬಂಧ ಹೊಂದಿದ್ದರು. ಇದೀಗ ಬೇರೆ ಯುವತಿ ಜೊತೆ ವಿವಾಹವಾಗಲು ಸಿದ್ಧತೆ ನಡೆಸಿದ್ದಾರೆ. ನಾನು ಗರ್ಭಿಣಿ ಎಂದು ತಿಳಿದಾಗ ಮಹಾಅಕ್ಷಯ್ ಕೆಲ ಮಾತ್ರೆಗಳನ್ನು ಕೊಟ್ಟು ನನಗೆ ಗರ್ಭಪಾತವಾಗುವಂತೆ ಮಾಡಿದ್ದರು. ಇದಾದ ಬಳಿಕ ಸಂಬಂಧ ಮುಂದುವರಿಸುವುದು ಬೇಡ ವೆಂದು ಆತ ಹಾಗೂ ಅವನ ತಾಯಿ ಯೋಗಿತಾ ನನಗೆ ಹೇಳಿದುದಲ್ಲದೆ ಈ ಸಂಬಂಧ ಯಾರೊಡನೆ ವಿವರ ಹಂಚಿಕೊಂಡಲ್ಲಿ ಮುಂದೆ ಅಪಾಯ ಕಾದಿರುವುದಾಗಿ ಬೆದರಿಕೆ ಹಾಕಿದ್ದರು. ಅವರ ಬೆದರಿಕೆಯಿಂದಾಗಿ ಮುಂಬೈ ನಿಂದ ನಾನು ನವದೆಹಲಿಗೆ ವಾಸ್ತವ್ಯ ಬದಲಾಯಿಸಿದ್ದೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

Next Story

RELATED STORIES