Top

ಮದುವೆ ದಿನವೇ ವಧು-ವರ ಕುಟುಂಬದ ಮಾರಾಮಾರಿ

ಮದುವೆ ದಿನವೇ ವಧು-ವರ ಕುಟುಂಬದ ಮಾರಾಮಾರಿ
X

ಸಂಭ್ರಮ ಸಡಗರದಿಂದ ಕೂಡಿರಬೇಕಾದ ಮದುವೆ ಸಂಭ್ರಮ ನೋಡನಡುತ್ತಿದ್ದಂತೆ ರಣರಂಗವಾಯಿತು. ನಮ್ಮ ಹುಡುಗನ ಮದ್ವೆ ವಿಷಯ ಗೊತ್ತಿಲ್ಲ ಎಂದು ವರನ ಕಡೆಯವರು ಅತ್ತ ಮದ್ವೆ ರಿಜಿಸ್ಟರ್ ಮ್ಯಾರೇಜ್ ಮಾಡಿಸಿ ಗ್ರ್ಯಾಂಡ್ ಆಗಿ ರಿಸಪ್ಷನ್ ಗೆ ರೆಡಿಯಾಗಿದ್ದ ವಧುವಿನ ಕಡೆಯವರ ಮಧ್ಯೆ ಇದ್ದಕ್ಕಿದ್ದಂತೆ ನೂರಾರು ಮಂದಿ ನೆಂಟರಿಷ್ಟರು ಸೇರಿದ್ದ ಕಲ್ಯಾಣ ಮಂಟಪದಲ್ಲಿ ಮಾರಾಮಾರಿ ನಡೆದಿದೆ.

ಸಾವಿರ ಸುಳ್ಳಿ ಹೇಳಿ ಮದ್ವೆ ಮಾಡಿಸು ಅನ್ನೋ ಗಾದೆ ಮಾತಿದೆ. ಆದರೆ ಈ ಮದ್ವೆ ವಿಷಯದಲ್ಲಿ ಹಾಗಾಗಿಲ್ಲ.. ಬದಲಾಗಿ ಹುಡುಗನ ಮದ್ವೆ ವಿಷಯ ಸ್ವತಃ ವರನ ತಂದೆ-ತಾಯಿ ಸೇರಿದಂತೆ ಸಂಬಂಧಿಕರಿಗೆ ತಿಳಿದಿಲ್ಲ.. ಹೌದು ಹೀಗೆ ವರನ ಕಡೆಯವರಿಗೆ ಗೊತ್ತಿಲ್ಲದೆ ನಡೆಯುತ್ತಿದ್ದ ಮದುವೆ ಮುರಿದು ಬಿದ್ದು ಕಲ್ಯಾಣ ಮಂಟಪ ಮಾರಾಮಾರಿಗೆ ವೇಧಿಕೆಯಾಗಿದ್ದು ಬೆಂಗಳೂರು ಹೊರವಲಯ ನೆಲಮಂಗಲ ತಾಲ್ಲೂಕಿನ ಬೇಗೂರಿನಲ್ಲಿರುವ

ವಿರಾಟ ಭವನ ಚೌಟ್ರಿ. ಕಳೆದ‌ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದ ಪರಪ್ಪನ ಅಗ್ರಹಾರದ ನಿವಾಸಿಗಳಾದ ವರ ಕೃಷ್ಣಮೂರ್ತಿ ಹಾಗೂ ವಧು ಸಂಧ್ಯಾ ಕಳೆದ‌ ವಾರ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಇಂದು ಅಧಿಕೃತವಾಗಿ ಆರಕ್ಷತೆ ಸಮಾರಂಭ ಏರ್ಪಡಿಸಿದ್ದಾರೆ. ಆದರೆ ಈ ವಿಷಯ ಸ್ವತಃ ಹುಡುಗನ ತಂದೆ-ತಾಯಿ ಸೇರಿದಂತೆ ಸಂಬಂಧಿಕರಿಗೆ ತಿಳಿದಿಲ್ಲ.. ಎಸ್ ಎಸ್ ಎಲ್ ಸಿ ಅಂಕಪಟ್ಟಿ ಹಾಗೂ ಟಿಸಿಯನ್ನು ನಕಲು ಮಾಡಿ ರಿಜಿಸ್ಟರ್ ಮ್ಯಾರೇಜ್ ಮಾಡಿ ಇದೀಗ ನಮ್ಮ ಹುಡುಗನಿಗೆ ಮೋಸ ಮಾಡಲು ಹೋರಟಿದ್ದಾರೆ ಎಂದು ಆರೋಪಿಸಿ ಕಲ್ಯಾಣ ಮಂಟಪದಲ್ಲೇ ಮಾರಾಮಾರಿಗೆ ಇಳಿದಿದ್ದಾರೆ.

ಇನ್ನೂ ಹುಡುಗ ಲಿಂಗಾಯತ ಹುಡುಗಿ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆಂಬ ಮಾಹಿತಿ ತಿಳಿದ್ದಿದ್ದು. ಇನ್ನೂ ವಧು ಕಡೆಯವರು ಕಾನೂನು ರೀತಿಯಲ್ಲಿ ಆನೇಕಲ್ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ವಿವಾಹವಾಗಿ ನಂತರ ಸಂಪ್ರದಾಯದಂತೆ ಮದುವೆಯಾಗುತ್ತಿದ್ದರು. ಅಲ್ಲದೆ ವರ ಕೃಷ್ಣಮೂರ್ತಿ ನನ್ನ ಮದುವೆಗೆ ನನ್ನ ಮನೆಯವರು ವಿರೋಧ ವ್ಯಕ್ತಪಡಿಸಿದರು. ಆದರೆ ನಾನು ಎರಡು ವರ್ಷದಿಂದ ಪ್ರೀತಿ ಮಾಡಿದ್ದು ಯಾವುದೇ ಕಾರಣಕ್ಕೂ ಸಂಧ್ಯಾ ಳನ್ನ ಬಿಡುವುದಿಲ್ಲ, ತಂದೆ ತಾಯಿ ಸಂಬಂಧಿಗಳನ್ನ ಬಿಡುವುದಾಗಿ, ಕೈಯಿಡಿದ ಪ್ರೀತಿಯ ಹೆಂಡತಿ ಜೊತೆ ಸಂಸಾರ ನಡೆಸುವುದಾಗಿ ತಿಳಿಸಿದ್ದಾರೆ.

ಇನ್ನೂ ಇಷ್ಟೆಲ್ಲಾ ಗಲಾಟೆಯ ನಂತರ ಸಂತೋಷದಿಂದ ವಧು-ವರ ಇಬ್ಬರೂ ಏನೂ ನಡೆದ ಇಲ್ಲ ಎಂಬಂತೆ ಮದ್ವೆ ಮನೆಯಲ್ಲಿ ಊಟ ಮಾಡಿದ್ದಾರೆ. ಇಷ್ಟೇಲ್ಲದರ ಮಧ್ಯೆ ಹುಡುಗನ ಕಡೆಯವರು ಮದುವೆ ನಿಲ್ಲಿಸದೆ ಇದ್ದರೆ ವಿಷ ಕುಡಿಯ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಇನ್ನೂ ಮಾರಾಮಾರಿ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಿಗುವಿನ ವಾತಾವರಣವನ್ನು ಶಾಂತಗೊಳಿಸಿದ್ದಾರೆ.

Next Story

RELATED STORIES