Top

ದೆಹಲಿ ಮಾದರಿ ಮೋಕ್ಷಕ್ಕಾಗಿ ಕುಟುಂಬ ಆತ್ಮಹತ್ಯೆಗೆ ಮಂಗಳಮುಖಿ ಪ್ರಚೋದನೆ

ದೆಹಲಿ ಮಾದರಿ ಮೋಕ್ಷಕ್ಕಾಗಿ ಕುಟುಂಬ ಆತ್ಮಹತ್ಯೆಗೆ ಮಂಗಳಮುಖಿ ಪ್ರಚೋದನೆ
X

ಮಂಡ್ಯ: ದೆಹಲಿಯಲ್ಲಿ ಮೋಕ್ಷಾಕ್ಕೆ ದಾರಿ ಎಂದು ಒಂದೇ ಕುಟುಂಬದ 11 ಮಂದಿಯ ಆತ್ಮಹತ್ಯೆ ಪ್ರಕರಣದ ಮಾದರಿಯಲ್ಲೇ ಮಾಂತ್ರಿಕನೊಬ್ಬ ಮೋಕ್ಷದ ನೆಪದಲ್ಲಿ ಒಂದೇ ಕುಟುಂಬದ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಆಘಾತಕಾರಿ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯದ ಮೂಲದ ಕುಟುಂಬಕ್ಕೆ ಹಿಜಡಾ ಮಾಂತ್ರಿಕನೊಬ್ಬನಿಂದ ಆತ್ಮಹತ್ಯೆಗೆ ಪ್ರಚೋದನೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮಂಡ್ಯ ತಾಲೂಕಿನ ಮಾರಗೋಡನಹಳ್ಳಿಯ ಅನಿತಾಗೆ ಹಿಜಡಾ ಮಾಂತ್ರಿಕ ಆತ್ಮಹತ್ಯೆಗೆ ಪ್ರಚೋದನೆ ಮಾಡಿದ್ದನ್ನು ಸ್ವತಃ ನೊಂದ ಮಹಿಳೆ ಬಹಿರಂಗಪಡಿಸಿದ್ದಾರೆ.

ಮೈಸೂರು ತಾಲೂಕಿನ ಹುಣಸೂರಿನಲ್ಲಿ ವಾಸವಿರೋ ಅನಿತಾಗೆ ನಿನ್ನ ಸಾವಿನಿಂದ ಮಕ್ಕಳಿಗೆ ಮುಕ್ತಿ, ಮೋಕ್ಷ ಸಿಗುತ್ತದೆ ಎಂದು ನೇಣಿಗೆ ಮಂತ್ರಿಕ ಪ್ರಚೋದಿಸಿದ್ದಾನೆ. ವೃತ್ತಿಯಲ್ಲಿ ಟೈಲರ್ ಆಗಿರೋ ಅನಿತಾ ದಂಪತಿಗೆ ಆತ್ಮಹತ್ಯೆ ಪ್ರಚೋದನೆ ಮಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ಧಾರೆ.

Next Story

RELATED STORIES