Top

ರಾಮ ಬಂದರೂ ಅತ್ಯಾಚಾರ ತಡೆಯೋಕೆ ಆಗಲ್ಲ: ಉತ್ತರ ಪ್ರದೇಶ ಬಿಜೆಪಿ ಶಾಸಕ

ರಾಮ ಬಂದರೂ ಅತ್ಯಾಚಾರ ತಡೆಯೋಕೆ ಆಗಲ್ಲ: ಉತ್ತರ ಪ್ರದೇಶ ಬಿಜೆಪಿ ಶಾಸಕ
X

ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತಿರುವುದಕ್ಕೆ ಹೆತ್ತವರು ಮತ್ತು ಮೊಬೈಲ್​ಗಳೇ ಕಾರಣ ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್​, ಇದೀಗ ದೇಶದಲ್ಲಿನ ಅತ್ಯಾಚಾರ ಪ್ರಕರಣಗಳನ್ನು ತಡೆಯಲು ರಾಮನಿಂದಲೂ ಸಾಧ್ಯವಿಲ್ಲ ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ಬಲ್ಲಿಯಾ ಎಂಬಲ್ಲಿ ಶನಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಸುರೇಂದ್ರ ಸಿಂಗ್, ಅತ್ಯಾಚಾರದಂತಹ ಘಟನೆಗಳನ್ನು ರಾಮ ಬಂದರೂ ತಡೆಗಟ್ಟಲು ಸಾಧ್ಯವಿಲ್ಲ ಎಂಬುದನ್ನು ನಾನು ವಿಶ್ವಾಸದಿಂದ ಹೇಳಬಲ್ಲೆ ಎಂದಿದ್ದಾರೆ.

ಇದು ಸಾಮಾನ್ಯ ಕಾಯಿಲೆ. ಇದು ಯಾರನ್ನೂ ಬಿಡುವುದಿಲ್ಲ. ಎಲ್ಲರೂ ನಮ್ಮ ಕುಟುಂಬದವರೇ ಅಥವಾ ನನ್ನ ಸೋದರಿ ಎಂದು ಭಾವಿಸಬೇಕು. ಜೀವನ ಮೌಲ್ಯಗಳ ಮೂಲಕವಷ್ಟೇ ಇಂತಹ ಕೃತ್ಯಗಳನ್ನು ತಡೆಗಟ್ಟಬಹುದೇ ಹೊರತು ಸಂವಿಧಾನದಿಂದ ಅಲ್ಲ ಎಂದು ಶಾಸಕ ಹೇಳಿದ್ದಾರೆ.

Next Story

RELATED STORIES