Top

ಸ್ವೀಡನ್ ಬಗ್ಗು ಬಡಿದು ಸೆಮಿ ತಲುಪಿದ ಇಂಗ್ಲೆಂಡ್

ಸ್ವೀಡನ್ ಬಗ್ಗು ಬಡಿದು ಸೆಮಿ ತಲುಪಿದ ಇಂಗ್ಲೆಂಡ್
X

ಸಾಮಾರ: ಹೆಡ್ಡರ್‌ಗಳಾದ ಹ್ಯಾರಿ ಮಾಗುರಿ ಮತ್ತು ಡೆಲೆ ಅಲಿ ಅವರ ಗೋಲುಗಳ ನೆರವಿನಿಂದ ಇಂಗ್ಲೆಂಡ್ ತಂಡ ಬಲಿಷ್ಠ ಸ್ವೀಡನ್ ವಿರುದ್ದ 2-0 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿ ಫಿಫಾ ವಿಶ್ವಕಪ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ. ಇದರೊಂದಿಗೆ ಸುದೀರ್ಘ 28 ವರ್ಷಗಳ ಬಳಿಕ ಆಂಗ್ಲರು ಉಪಾಂತ್ಯ ತಲುಪಿ ಸಾಧನೆ ಮಾಡಿದ್ದಾರೆ.

ಸಾಮಾರಾ ಅರೆನಾದಲ್ಲಿ ನಡೆದ ರೋಚಕ ಕದನದಲ್ಲಿ ಇಂಗ್ಲೆಂಡ್ ಪರ ಮಾಗುರಿ 30ನೇ ನಿಮಿಷದಲ್ಲಿ ಮೊದಲ ಗೋಲು ಬರಿಸಿದ್ರು. ನಂತರ ದ್ವಿತೀಯಾರ್ಧದಲ್ಲಿ ಡೀಲೆ ಅಲಿ 58ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಸಂತಸವನ್ನ ಇನ್ನಷ್ಟು ಹೆಚ್ಚಿಸಿದ್ರು. ಪಂದ್ಯದ ಕೊನೆಯವರೆಗೂ ರಕ್ಷಣಾತ್ಮಕ ಆಟವಾಡಿ ಸ್ವೀಡನ್ ಲೆಕ್ಕಾಚಾರಗಳನ್ನೆಲ್ಲ ಉಲ್ಟಾ ಮಾಡಿದ್ರು.

ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಬಾರಿಸಿರುವ ಹ್ಯಾರಿ ಕೇನ್ ಅವರ ಯಾವ ಆಟವೂ ನಡೆಯಲಿಲ್ಲ.ಆದರೆ ಇಂಗ್ಲೆಂಡ್ ತಂಡಕ್ಕೆ ಒಬ್ಬ ಹೀರೋ ಸಿಕ್ಕಿದ್ದಾನೆ.ಜೋಡಾನ್ ಪಿಕ್‍ಫೋರ್ಡ್ ಪಂದ್ಯ ಮುಗಿಯಲು ಕೊನೆಯ ನಿಮಿಷಗಳಿರುವಾಗ ಮೂರು ಗೋಲುಗಳನ್ನ ತಡೆದು ಹೀರೋ ಎನಿಸಿದ್ದಾರೆ.

Next Story

RELATED STORIES