ಪೆನಾಲ್ಟಿಯಲ್ಲಿ ಗೆದ್ದ ಕ್ರೋವೇಷಿಯಾ ಸೆಮಿಗೆ ಲಗ್ಗೆ

ಸೊಚಿ: ಇವಾನ್ ರಾಕಿಟಿಕ್ ಪೆನಾಲ್ಟಿಯಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಕ್ರೋವೇಶಿಯಾ ತಂಡ ಫಿಫಾ ವಿಶ್ವಕಪ್ನಲ್ಲಿ ಆತಿಥೇಯ ರಷ್ಯಾ ತಂಡವನ್ನ ರೋಚಕವಾಗಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ.
ನಿರ್ಣಾಯಕ ಪೆನಾಲ್ಟಿಯಲ್ಲಿ ಕ್ರೋವೇಶಿಯಾ ರಷ್ಯಾ ವಿರುದ್ಧ 4-3 ಗೋಲುಗಳಿಂದ ಗೆದ್ದು ಉಪಾಂತ್ಯ ಪ್ರೇಶಿಸಿತು. ಇದಕ್ಕೂ ಮುನ್ನ 120 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಎರಡೂ ತಂಡಗಳು 2-2 ಗೋಲು ಬಾರಿಸಿ ಡ್ರಾ ಮಾಡಿಕೊಂಡಿದ್ದವು.
ಸುಮಾರು 120 ನಿಮಿಷಗಳ ಕಾಲ ನಡೆದ ಭಾರೀ ಹಣಾಹಣಿಯ ಮೊದಲಾರ್ಧದಲ್ಲಿ 31ನೇ ನಿಮಿಷದಲ್ಲಿ ರಷ್ಯಾದ ಚೆರಿಶೆವ್ ಗೋಲು ಬಾರಿಸಿದರು. ಇದಾದ ಎಂಟೇ ನಿಮಿಷದಲ್ಲಿ ಕ್ರೋವೇಶಿಯಾ ತಂಡದ ಕ್ರಾಮಾರಿಕ್ 39ನೇ ನಿಮಿಷದಲ್ಲಿ ಗೋಲು ಬಾರಿಸಿ ತಿರುಗೇಟು ನೀಡಿದ್ರು. ನಂತರ ನಿರ್ಣಾಯಕ ದ್ವೀತಿಯಾರ್ಧದಲ್ಲಿ ಉಭಯ ತಂಡಗಳು ಭಾರೀ ಪೈಪೋಟಿ ನೀಡಿದ್ದರಿಂದ ಯಾವುದೇ ಗೋಲುಗಳು ದಾಖಲಾಗಲ್ಲಿಲ್ಲ. ಆದ್ರೆ ಹೆಚ್ಚುವರಿ ನಿಮಿಷ ನೀಡಲಾಯಿತು. 100ನೇ ನಿಮಿಷದಲ್ಲಿ ವಿದಾ ಗೋಲು ಬಾರಿಸಿ ತಂಡಕ್ಕೆ ಮತ್ತೆ ಗೆಲುವಿನ ಆಸೆಯನ್ನ ಚಿಗುರೊಡೆಸಿದ್ರು. ಕೊನೆಯಲ್ಲಿ ರಷ್ಯದ ಫೆರ್ನಾಂಡಿಸ್ 115ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡವನ್ನ ಸೋಲಿನಿಂದ ಕಾಪಾಡಿದ್ರು.ಇದರೊಂದಿಗೆ ಮತ್ತೆ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.