ದಮ್ಮಿದ್ರೆ ರಾಮಮಂದಿರ ಕಟ್ಟಲಿ: ಪ್ರಧಾನಿ ಮೋದಿಗೆ ಸವಾಲ್

X
TV5 Kannada8 July 2018 11:46 AM GMT
ಬಾಗಲಕೋಟೆ : ಬಿಜೆಪಿ ನಕಲಿ ಹಿಂದುತ್ವ ಪಕ್ಷವೆಂದು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ವಿವಾದಿತ ಹೇಳಿಕೆ ನೀಡಿದ್ದಾರೆ. ಬಿಜೆಪಿಯವರು ರಾಮಮಂದಿರ ಹೆಸರು ಹೇಳಿ ವೋಟ್ ಪಡೆದುಕೊಂಡ್ರು. ದಮ್ಮಿದ್ರೆ ಪ್ರಧಾನಿ ಸೇರಿ ಬಿಜೆಪಿಯವರು ರಾಮಮಂದಿರ ಕಟ್ಟಲಿ ಎಂದು ಎಸ್ ಕೆ ಬೆಳ್ಳುಬ್ಬಿ ಸವಾಲ್ ಹಾಕಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಇನ್ನೂ ಒಂದು ವರ್ಷ ಆಡಳಿತದಲ್ಲಿರುತ್ತೆ. ಬಿಜೆಪಿಯವರು ರಾಮಮಂದಿರ ಕಟ್ಟಲಿ. ಬಿಜೆಪಿಯವರು ಧರ್ಮದ ಹೆಸ್ರಲ್ಲಿ ಯುವಕರಿಗೆ ಪ್ರಚೋದನಕಾರಿ ಭಾಷಣ ಮಾಡ್ತಾರೆ. ಇದ್ರಿಂದ ಗಲಭೆಯಾಗಿ ಎಷ್ಟೋ ಯುವಕರು ಜೈಲಿ ಹೋಗುವ ಹಾಗೆ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ಜಗಳ ಹಚ್ಚುವ ಕೆಲಸ ಮಾಡ್ತಾರೆ. ಮುಂದಿನ ಲೋಕಸಭಾ ಚುನಾವಣೆ ಗೆ ರಾಮಮಂದಿರ ವಿಷಯ ಬದಿಗಿಟ್ಟು ಬರಲಿ ನೋಡೋಣ. ನಾವು ಮಾತ್ರ ಜಾತ್ಯಾತೀತವಾಗಿ ಚುನಾವಣೆ ಎದುರಿಸುತ್ತೇವೆ ಎಂದು ಬಿಜೆಪಿಗೆ ಬೆಳ್ಳುಬ್ಬಿ ಸವಾಲ್ ಎಸೆದಿದ್ದಾರೆ.
Next Story