Top

ಭಾರೀ ಮಳೆಯಲ್ಲೂ ಹುಡುಗರ ಸ್ವಿಮ್ಮಿಂಗ್: ವಿಡಿಯೋ ಎಲ್ಲೆಡೆ ವೈರಲ್

ಭಾರೀ ಮಳೆಯಲ್ಲೂ ಹುಡುಗರ ಸ್ವಿಮ್ಮಿಂಗ್: ವಿಡಿಯೋ ಎಲ್ಲೆಡೆ ವೈರಲ್
X

ಮಂಗಳೂರು: ಕರಾವಳಿಯಲ್ಲಿ ಧಾರಾಕಾರ ಮಳೆ ಸುರಿದಿರುವ ಪರಿಣಾಮ ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರು ಮನೆಯಿಂದ ಹೊರಬರುವುದಕ್ಕೆ, ಕೆಲಸಕ್ಕೆ ಹೋಗುವುದಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂಥದ್ರಲ್ಲಿ ಇಲ್ಲಿನ ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರಿನಲ್ಲಿರುವ ಹಳೇ ಸೇತುವೆ ಮೇಲಿಂದ ಹಾರಿ ಕೆಲ ಯುವಕರು ಸ್ವಿಮ್ಮಿಂಗ್ ಮಾಡಿದ್ದಾರೆ. ಸೇತುವೆಯಿಂದ ಈಜಾಡಿದ ಯುವಕರು, ಭಾರೀ ಮಳೆಯಲ್ಲೂ ಸ್ವಿಮ್ಮಿಂಗ್ ಮಾಡಿದ್ದಾರೆ.ಇನ್ನು ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಸಖತ್ ವೈರಲ್ ಆಗಿದೆ.

Next Story

RELATED STORIES