Top

ಬೆಂಗಳೂರು ವಿದ್ಯಾರ್ಥಿಗೆ 1.2 ಕೋಟಿ ವೇತನದ ಉದ್ಯೋಗ: ಗೂಗಲ್​ ಕೊಡುಗೆ!

ಬೆಂಗಳೂರು ವಿದ್ಯಾರ್ಥಿಗೆ 1.2 ಕೋಟಿ ವೇತನದ ಉದ್ಯೋಗ: ಗೂಗಲ್​ ಕೊಡುಗೆ!
X

ಬೆಂಗಳೂರಿನ ಇಂಟರ್ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಇನ್ಫರ್ಮೆಷನ್ ಟೆಕ್ನಾಲಜಿಯ 22 ವರ್ಷದ ವಿದ್ಯಾರ್ಥಿ ವಾರ್ಷಿಕ 1.2 ಕೋಟಿ ರೂ. ವೇತನವನ್ನು ಗೂಗಲ್ ನಿಂದ ಪಡೆದುಕೊಂಡಿದ್ದಾನೆ.

ಮುಂಬೈ ಮೂಲದ ಆದಿತ್ಯ ಪಲ್ಲಿವಾಲ್ ಇದೀಗ ಗೂಗಲ್ ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ಕೆಲಸ ಮಾಡಲಿದ್ದು, ಜುಲೈ 16ರಂದು ನ್ಯೂಯಾರ್ಕ್ ಗೆ ತೆರಳಲಿದ್ದು, ಅಲ್ಲಿಯೇ ಕಾರ್ಯ ನಿರ್ವಹಿಸಲಿದ್ದಾರೆ. ಭಾನುವಾರ ಕಾಲೇಜಿನ ಘಟಿಕೋತ್ಸವದಲ್ಲಿ ಪ್ರಮಾಣಪತ್ರ ಸ್ವೀಕರಿಸಿದ ನಂತರ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಇತ್ತೀಚೆಗೆ ಜಗತ್ತಿನಾದ್ಯಂತ ಗೂಗಲ್ 6000 ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಕುರಿತು ಪರೀಕ್ಷೆ ನಡೆಸಿದ್ದರು. ಇದರಲ್ಲಿ 50 ಮಂದಿ ಮಾತ್ರ ಆಯ್ಕೆಯಾಗಿದ್ದು, ಇದರಲ್ಲಿ ಆದಿತ್ಯ ಪಲ್ಲಿವಾಲ್ ಸೇರಿದ್ದಾನೆ.

ಆದಿತ್ಯ ಕಳೆದ 5 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದು, ಕಳೆದ ಮಾರ್ಚ್ ನಲ್ಲಿ ನನಗೆ ಕರೆ ಬಂದಿತ್ತು. ಗೂಗಲ್ ನಲ್ಲಿ ಕೆಲಸ ಮಾಡುವ ನನ್ನ ಕನಸು ನನಸಾಗಿದೆ ಎಂದು ಪ್ರತಿಕ್ರಿಯಿಸಿದ್ದಾನೆ.

Next Story

RELATED STORIES