Top

ಶಿವಲಿಂಗದ ಹಿಂಭಾಗ ಕಂಡುಬಂದ ಜಡೆ: ಬೆಳಗಾವಿಯಲ್ಲೊಂದು ಅಚ್ಚರಿಯ ಘಟನೆ

ಶಿವಲಿಂಗದ ಹಿಂಭಾಗ ಕಂಡುಬಂದ ಜಡೆ: ಬೆಳಗಾವಿಯಲ್ಲೊಂದು ಅಚ್ಚರಿಯ ಘಟನೆ
X

ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿನ ದೇವಸ್ಥಾನದಲ್ಲಿ ಶಿವಲಿಂಗದ ಹಿಂಭಾಗದಲ್ಲಿ ಜಡೆ ಮೂಡಿ ಅಚ್ಚರಿ ಸೃಷ್ಟಿಸಿದೆ. ಪಟ್ಟಣದ ಹೊರವಲಯದ 78 ಅಡಿ ಎತ್ತರದ ಬೃಹತ್ ಶಿವನಮೂರ್ತಿ ಕೆಳಭಾಗದಲ್ಲಿರೋ ಶಿವಲಿಂಗದ ಹಿಂಭಾಗದಲ್ಲಿ ಜಡೇಶ್ವರ ಮೂರ್ತಿಯ ಆಕಾರ ಮೂಡಿದೆ.

ಇನ್ನು ಕೇವಲ ನಾಲ್ಕು ತಿಂಗಳ ಹಿಂದೆ ಈ ಶಿವಲಿಂಗವನ್ನು ರಾಮೇಶ್ವರದಿಂದ ತಂದು ಪ್ರತಿಷ್ಠಾಪಿಸಲಾಗಿದೆ.ಈ ಅಚ್ಚರಿಯನ್ನ ಅಷ್ಟಾಗಿ ಗಮನಿಸದ ದೇವಸ್ಥಾನದ ಅರ್ಚಕರು, ಮಹಾರಾಷ್ಟ್ರದ ಸ್ವಾಮೀಜಿಯೊಬ್ಬರು ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ತಿಳಿಸಿದಾಗ ಈ ವಿಸ್ಮಯವನ್ನ ಗಮನಿಸಿದ್ದಾರೆ. ಈ ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ಭಕ್ತಾದಿಗಳು ಆಗಮಿಸುತ್ತಿದ್ದು, ತಮ್ಮ ಮೊಬೈಲ್‌ಗಳಲ್ಲಿ ಈ ದೃಶ್ಯವನ್ನ ಸೆರೆಹಿಡಿಯುತ್ತಿದ್ದಾರೆ. ಅಲ್ಲದೇ ಜಡೇಶ್ವರನಿಗೆ ವಿಶೇಷ ಪೂಜೆ ಮಾಡಲಾಗಿದೆ.

Next Story

RELATED STORIES