Top

ಎಕೆ-47 ಇದ್ದರೂ ರೈಫಲ್​ನಲ್ಲೇ ತರಬೇತಿ.. ಇದು ಪೊಲೀಸರ ಫಜೀತಿ!

ಎಕೆ-47 ಇದ್ದರೂ ರೈಫಲ್​ನಲ್ಲೇ ತರಬೇತಿ.. ಇದು ಪೊಲೀಸರ ಫಜೀತಿ!
X

ಪವನ್ ಕುಮಾರ್, ಟಿವಿ5

ಭಯೋತ್ಪಾದಕರಿಗೆ, ನಕ್ಸಲರಿಗೆ ಕರ್ನಾಟಕ ಸುಲಭ ಗುರಿ ಆಗಿಬಿಟ್ಟಿದೆ. ಆದರೆ ಅದನ್ನು ಎದುರಿಸಲು ರಾಜ್ಯ ಹೇಗೆ ಸಜ್ಜಾಗಿದೆ ಅಂತ ಕೇಳಿದರೆ ಬೆಚ್ಚಿಬೀಳುತ್ತೀರಿ. ರಾಜ್ಯ ಮಹಾಲೇಖಪಾಲಖರ ವರದಿಯಲ್ಲಿ ಸ್ಫೋಟಕ ಅಂಶಗಳು ಇಲ್ಲಿವೆ ನೋಡಿ.

ಪೊಲೀಸರಿಗೆ ಅಪರಾಧ ಪ್ರಕರಣಗಳನ್ನು ಮಟ್ಟ ಹಾಕಲು ಆಳುವ ಸರ್ಕಾರಗಳಿಂದ ಸರಿಯಾದ ಸಹಕಾರ ಸಿಗುತ್ತಿಲ್ಲ. ರಾಜ್ಯ ಪೊಲೀಸ್‌ ಪಡೆ ಅಧುನಿಕ ಶಸ್ತ್ರಾಸ್ತ್ರ ಹೊಂದುವಲ್ಲಿ ಹಿನ್ನೆಡೆ ಅನುಭವಿಸಿದೆ. ಪೊಲೀಸ್‌ ಇಲಾಖೆಯನ್ನ ತಾಂತ್ರಿಕವಾಗಿ ಸಜ್ಜುಗೊಳಿಸಲು ರೂಪಿಸಿದ್ದ ಯೋಜನೆಗಳು ವಿಫಲವಾಗಿವೆ. ಪೊಲೀಸರಿಗೆ‌ ಅಪರಾಧಿಗಳನ್ನ ಮಟ್ಟಹಾಕಲು ಶಸ್ತ್ರಾಸ್ತ್ರ ಕೊರತೆ ಇದೆ.

18 ಪೊಲೀಸ್ ಠಾಣೆಗಳಲ್ಲಿ ಮದ್ದುಗುಂಡುಗಳೇ ಇಲ್ಲ!

ರಾಜ್ಯದ ಬಹಳಷ್ಟು ಪೊಲೀಸ್‌ ಠಾಣೆಗಳಲ್ಲಿ ಅತಿಅಗತ್ಯದ ಶಸ್ತ್ರಾಸ್ತ್ರಗಳ ಕೊರತೆ ಇದೆ.ಶಸ್ತ್ರಾಸ್ತ್ ದಾಸ್ತಾನು ಕೊಠಡಿಗಳಿಗೂ ಬರ ಇದೆ. ಇರುವ ಶಸ್ತ್ರಾಸ್ತ್ರಗಳು ಅವಧಿ ಮೀರಿದ ಶಸ್ತ್ರಾಸ್ತ್ರಗಳು.ರಾಜ್ಯದ 18 ಪೊಲೀಸ್ ಠಾಣೆಗಳಲ್ಲಿ ಮದ್ದುಗುಂಡುಗಳೇ ಇಲ್ಲ ಅಂದರೆ ನೀವು ನಂಬಲೇ ಬೇಕು. ಗೃಹಇಲಾಖೆಯ ನಿರ್ಲಕ್ಷ್ಯದಿಂದ ಈ ಪರಿಸ್ಥಿತಿ ಇದುರಾಗಿದೆ. ಈ ಬಗ್ಗೆ ಸಿ.ಎಜಿ ರಿಪೋರ್ಟ್ ಬಹಳ ಸ್ಪಷ್ಟವಾಗಿ ಹೇಳಿದೆ.

ನಕ್ಸಲ್‌ ನಿಗ್ರಹ ಪಡೆ ಸೇರಿದಂತೆ ವಿಶೇಷ ತಂಡಗಳ ಕಾರ್ಯವಿಧಾನದ ಬಗ್ಗೆ ಸಿಎಜಿ ರಿಪೋರ್ಟ್ ನಲ್ಲಿ ಮಾಹಿತಿ ಬಹಿರಂಗವಾಗಿದೆ.ರಾಜ್ಯದ 60 ಪೊಲೀಸ್‌ ಠಾಣೆಗಳಲ್ಲಿ ಬ್ಯಾರಕ್ಕುಗಳೇ ಇಲ್ಲ. ಶೌಚಾಲಯಗಳು, ಸಾಕ್ಷಿ ವಿಚಾರಣೆ ರೂಂಗಳು, ಶಸ್ತ್ರಾಸ್ತ್ರ ಇಡಲು ಸುಭದ್ರವಾದ ಕಟ್ಟಡಗಳು ಸೂಕ್ತವಾಗಿಲ್ಲ. ಶಸ್ತ್ರಾಸ್ತ್ರಗಳು ಮತ್ತು ಸಂಪರ್ಕ ಉಪಕರಣಗಳ ಖರೀದಿಯಲ್ಲಿನ ಕೊರತೆ ಹಾಗೂ ಪೊಲೀಸ್‌ ಪಡೆಗಳ ತರಬೇತಿಯಲ್ಲಿನ ಕೊರತೆಯಿಂದ ಪೊಲೀಸ್‌ ಪಡೆಯ ಅಧುನೀಕರಣದ ಉದ್ದೇಶಿತ ಗುರಿಯನ್ನು ಪೂರ್ಣವಾಗಿ ಸಾಧಿಸಲಾಗಲಿಲ್ಲ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ.

ಅಗತ್ಯಕ್ಕೆ ತಕ್ಕಂತೆ ಶಸ್ತ್ರಾಸ್ತ್ರಗಳ ಖರೀದಿ ಆಗಿಲ್ಲ.ಪ್ರತಿ ಪೊಲೀಸ್‌ ಠಾಣೆಗೂ ಅತ್ಯಂತ ಅಗತ್ಯವಿದ್ದ 0.303 ಟ್ರಂಕೇಟೆಡ್‌ ರೈಫಲ್‌ಗಳ ಗರಿಷ್ಠ ಪ್ರಮಾಣದಲ್ಲಿ ಕೊರತೆ ಇದೆ.ಎಕೆ 46 ಅಸಾಲ್ಟ್‌ ರೈಫಲ್‌ಗಳ ಖರೀದಿಗೆ 7.30 ಕೋಟಿ ರೂ.ಗಳನ್ನು ಸಿಆರ್‌ಪಿಎಫ್‌ಗೆ 2015ರಲ್ಲೇ ಪಾವತಿ ಮಾಡಲಾಗಿದೆ.ಆದರೂ ಇಲಾಖೆಗೆ ರೈಫಲ್‌ಗಳು ಇನ್ನೂ ಸರಬರಾಜು ಆಗಿಲ್ಲ.ಅಸಾಲ್ಟ್‌ ರೈಫಲ್‌ಗಳು ಬೇಕಿದ್ದಿದ್ದು 400, ಆದರೆ 1200 ರೈಫಲ್‌ಗಳನ್ನು ಅಧಿಕವಾಗಿ ಖರೀದಿಸಿರುವುದಕ್ಕೆ ಸಿಎಜಿ ವರದಿ ಅಕ್ಷೇಪ ವ್ಯಕ್ತಪಡಿಸಿದೆ. ಸಿ.ಎ.ಜಿ ವರದಿ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಕುಮಾರಸ್ವಾಮಿ, ಇದು ಈಗಿನ ಸರ್ಕಾರದಿಂದಾಗಿದ್ದಲ್ಲ. ಆಗಿರುವ ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಇತರ ವರ್ಗಗಳ ಶಸ್ತ್ರಾಸ್ತ್ರಗಳು, ಬಿಡಿಭಾಗಗಳು ಅದರಲ್ಲೂ ವಿಶೇಷವಾಗಿ ಲೇಸರ್‌ ಸೈಟ್‌ ಡಿವೈಸ್‌, ಕಾರ್ನರ್‌ ಶಾರ್ಟ್‌ ವಿಶನ್‌ ಸೈಟ್‌ ಅಂಡ್‌ ಜಂಪ್‌ ಗ್ರೇನೇಡ್‌ಗಳನ್ನು ಇಲಾಖೆ ಖರೀದಿಸಿಯೇ ಇಲ್ಲ. ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗಳಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಲು ತರಬೇತಿಯನ್ನೇ ನೀಡಿಲ್ಲ. ಎಕೆ-47 ರೈಫಲ್‌ಗಳು ಲಭ್ಯವಿದ್ದರೂ ಎಸ್‌ಎಲ್‌ಆರ್‌ ಪಿಸ್ತೂಲುಗಳಿಂದಲೇ ಪೊಲೀಸರು ಫೈರಿಂಗ್‌ ಅಭ್ಯಾಸ ಮಾಡುತ್ತಿದ್ದಾರೆ. ಇದರಿಂದಾಗಿ ಆಧುನಿಕ ಶಸ್ತ್ರಾಸ್ತ್ರಗಳನ್ನು ನಿಭಾಯಿಸಲು ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ಗಳಿಗೆ ಅವಕಾಶವೇ ಇಲ್ಲದಂತಾಗಿದೆ. ಬೆಳಗಾವಿ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಫೈರಿಂಗ್‌ ಅಭ್ಯಾಸ ನಡೆಸಲು ತಮ್ಮದೇ ಆದ ಫೈರಿಂಗ್‌ ವಲಯವೇ ಇಲ್ಲ.

ನಕ್ಸಲ್‌ ನಿಗ್ರಹ ಪಡೆ, ವಿಶೇ‍ಷ ಶಸ್ತ್ರಾಸ್ತ್ರ ಕಾರ್ಯತಂತ್ರ ಪಡೆಗಳ ಕಾರ್ಯನಿರ್ವಹಣೆ ಕುರಿತು ಸಿ.ಎ.ಜಿ ವರದಿಯಲ್ಲಿ ವಿವರವಿದೆ. ರಾಜ್ಯದಲ್ಲಿ 14 ನಕ್ಸಲ್‌ ನಿಗ್ರಹ ಪಡೆಗಳಿದ್ದರೂ ಶೇ.50ರಷ್ಟು ಸಿಬ್ಬಂದಿಗೆ ವಿಶೇಷ ತರಬೇತಿಯನ್ನೇ ನೀಡಿಲ್ಲ. ಕಾರ್ಕಳದಲ್ಲಿ 2.02 ಕೋಟಿ ರೂ. ವೆಚ್ಚದಲ್ಲಿ ಜಂಗಲ್‌ ಕ್ಯಾಂಪ್‌ ಅನ್ನು ನಿಗದಿತ ಅವಧಿಯೊಳಗೆ ಸ್ಥಾಪನೆ ಮಾಡುವಲ್ಲಿಯೂ ಸರ್ಕಾರದ ವೈಫಲ್ಯ ಎದ್ದು ಕಂಡಿದೆ. ಈಗ ಬಂದಿರುವ ಹೊಸ ಮೈತ್ರಿ ಸರ್ಕಾರ ಈ ಬಗ್ಗೆ ಗಮನಹರೆಸಬೇಕಿದೆ.

Next Story

RELATED STORIES