Top

ಕನ್ನಡ ಶಾಲೆಗಳ ವಿಲೀನ: ಚಿಂತಕರ ಸಭೆಯಲ್ಲಿ ಸಾಹಿತಿಗಳ ಚಿಂತೆ

ಕನ್ನಡ ಶಾಲೆಗಳ ವಿಲೀನ: ಚಿಂತಕರ ಸಭೆಯಲ್ಲಿ ಸಾಹಿತಿಗಳ ಚಿಂತೆ
X

ಸರಕಾರಿ ಶಾಲೆಗಳಲ್ಲಿ ಆಂಗ್ಲಭಾಷೆ ಕಲಿಕೆ ಹಾಗೂ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ವಿಲೀನಗೊಳಿಸುವ ಕುರಿತು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಬಜೆಟ್​ನಲ್ಲಿ ಘೋಷಿಸಿದ ಬಗ್ಗೆ ಹಿರಿಯ ಸಾಹಿತಿಗಳು ಹಾಗೂ ಚಿಂತಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರನ್ನು ಶನಿವಾರ ಕನ್ಡಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್​.ಜಿ. ಸಿದ್ದರಾಮಯ್ಯ, ಸಾಹಿತಿ ಚಂಪಾ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಮುಖ್ಯಮಂತ್ರಿ ಚಂದ್ರು, ಸಾಹಿತಿಗಳಾದ ಚಂದ್ರಶೇಖರ್ ಕಂಬಾರ, ವಸುಂಧರ ಭೂಪತಿ, ಕೋ. ಚೆನ್ನಬಸಪ್ಪ ಮುಂತಾದ ಶಿಕ್ಷಣ ತಜ್ಞರು ಭೇಟಿ ಮಾಡಿ, ಇಂತಹ ನಿರ್ಧಾರದಿಂದ ಕನ್ನಡದ ಉಳಿವು ಅಸಾಧ್ಯ ಎಂದು ಮನವರಿಕೆ ಮಾಡಿಕೊಟ್ಟರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್​.ಜಿ. ಸಿದ್ದರಾಮಯ್ಯ, ಬಜೆಟ್​ನಲ್ಲಿ ಸಾವಿರಾರು ಕನ್ನಡ ಶಾಲೆಗಳ ವಿಲೀನ ಮತ್ತು ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಬೋಧನೆ ಬಗ್ಗೆ ಘೋಷಿಸಲಾಗಿದೆ. ಇದು ಕನ್ನಡ ವಿರೋಧಿ ನಿರ್ಧಾರ. ಈ ಸಂಬಂಧ ಇವತ್ತು ಸಾಹಿತಿಗಳು, ಶಿಕ್ಷಣ ತಜ್ಞರ ಜೊತೆ ಸಭೆ ನಡೆಸಿದೆವು ಎಂದರು.

ರಾಜ್ಯದ ಬೆಳವಣಿಗೆಗೆ ಕನ್ನಡ ಶಾಲೆಗಳ ಉಳಿವು ಮುಖ್ಯ. ಯಾವ ಕನ್ನಡ ಶಾಲೆಯೂ ಮುಚ್ಚಬಾರದು ಎಂಬುದು ನಮ್ಮೆಲ್ಲರ ನಿಲುವು. ಇವತ್ತು 20 ಸಾವಿರ ಕನ್ನಡ ಶಾಲೆಗಳ ವಿಲೀನಕ್ಕೆ ಸರಕಾರ ಮುಂದಾಗಿದೆ. ಇದು ಆತಂಕಕಾರಿ ತೀರ್ಮಾನ. ಇದು ಸರಕಾರದ ತಪ್ಪು ಹೆಜ್ಜೆ ಎಂದು ಅವರು ಹೇಳಿದರು

ಸರಕಾರದ ನಿರ್ಧಾರದಿಂದ ಆಗುವ ಅನಾಹುತಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ವಿಧಾನಸಭೆ ಅಧಿವೇಶನದಲ್ಲಿ ಈ ಗೊಂದಲಗಳಿಗೆ ಉತ್ತರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

Next Story

RELATED STORIES