Top

ನಾನು ಅನ್ನದಾತನ ಸಿಎಂ: ಕುಮಾರಸ್ವಾಮಿ ಸ್ಪಷ್ಟನೆ

ಬೆಂಗಳೂರು: ನಾನು ಒಂದು ಜಾತಿಗೆ ಸೀಮಿತ ಸಿಎಂ ಅಲ್ಲ. ಅನ್ನದಾತನ ಸಿಎಂ ಅಂತ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಬಜೆಟ್​ ಕುರಿತು ಬಿಜೆಪಿ ಮಾಡಿದ ಟೀಕೆಗೆ ಗೃಹ ಕಚೇರಿ ಕೃಷ್ಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಜೆಟ್ ಬಗ್ಗೆ ಟೀಕೆಗಳು ಬರುತ್ತಿವೆ. ಬಿಜೆಪಿಯವರಿಗೆ ಕೆಲಸ ಇಲ್ಲ, ಅವರು ಬಜೆಟ್ ನ್ನು ಅರ್ಥವೇ ಮಾಡಿಕೊಂಡಿಲ್ಲ. ಬಿಜೆಪಿಯವರಿಗೆ ಮಾತಾಡುವುದಕ್ಕೆ ನಾಲಗೆ ಮೇಲೆ ಹಿಡಿತ ಬೇಡವಾ? ಎಂದು ಪ್ರಶ್ನಿಸಿದರು.

ನಾನು ವೈಯಕ್ತಿಕ ಆಸೆ ಆಕಾಂಕ್ಷೆ ಇಟ್ಕೊಂಡು ಯೋಜನೆ ರೂಪಿಸುತ್ತಿಲ್ಲ. ರೈತರ ಸಾಲಮನ್ನಾದಿಂದ ಒಕ್ಕಲಿಗರಿಗೆ ಹೆಚ್ಚು ಲಾಭ ಆಗಿದೆ ಎಂಬ ಮಾಧ್ಯಮ ವರದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಒಕ್ಕಲಿಗರಿಗೆ ಹೆಚ್ಚು ಅನುಕೂಲವಾಗಿದೆ ಎಂದು ಯಾರು ಹೇಳಿದ್ದು?. ಈ ಬಗ್ಗೆ ಯಾರು ಅಂಕಿ ಅಂಶ ಕೊಟ್ಟಿದ್ದು? ಈ ಬಗ್ಗೆ ತನಿಖೆಯಾಗಬೇಕಾದರೆ, ಮಾಧ್ಯಮಗಳ ಮೇಲೇನೇ ದೂರು ಕೊಡಬೇಕು. ಒಂದು ವೇಳೆ ಹಾಗೆ ಮಾಡಿದರೆ, ಮಾಧ್ಯಮಗಳನ್ನು ಕಟ್ಟಿ ಹಾಕುತ್ತಿದ್ದಾರೆ ಎಂಬ ಕೂಗು ಕೇಳಿ ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ಇಂಧನ ದರ ಏರಿಕೆ ಆಕ್ಷೇಪ ವ್ಯಕ್ತಪಡಿಸಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಯಾರೂ ನನ್ನ ಮುಂದೆ ಮಾತನಾಡಿಲ್ಲ. ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿಯೇ ದರ ಏರಿಕೆ ಮಾಡಿರೋದು.10 ಪೈಸೆ ಜನರಿಗೆ ಕೊಡೋದು ಕಷ್ಟವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

Next Story

RELATED STORIES