Top

ಇದು ಪೋಲಿ ಪ್ರೊಫೆಸರ್ ಕಾಮಪುರಣಾದ ಕತೆ

ಇದು ಪೋಲಿ ಪ್ರೊಫೆಸರ್ ಕಾಮಪುರಣಾದ ಕತೆ
X

ಮಂಗಳೂರು : ಇದು ಈ ರಾಜ್ಯದ ನಂಬರ್ ಒನ್ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ಕರ್ಮಕಾಂಡದ ಕಥೆ. ಈ ವಿವಿಯ ಪೋಲಿ ಪ್ರೊಫೆಸರ್ ಒಬ್ಬರ ಕಾಮಪುರಾಣದ ಕಥೆ. ಅದ್ರಲ್ಲೂ ಈ ವಿದ್ಯಾದೇಗುಲದಲ್ಲಿ ಹೆಣ್ಮಕ್ಕಳಿಗೆ ರಕ್ಷಣೆಯೇ ಇಲ್ವಾ ಅನ್ನೋ ಪ್ರಶ್ನೆ ಎದ್ದಿದೆ.

ಹೌದು... ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯ ಎನಿಸಿಕೊಂಡಿರೋ ಮಂಗಳೂರು ವಿವಿಯ ಸಹಾಯಕ ಪ್ರಾಧ್ಯಾಪಕರೊಬ್ಬರ ಪೋಲಿ ಪುರಾಣ ಬೀದಿಗೆ ಬಿದ್ದಿದೆ. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಉಮೇಶ್ ನಾಯ್ಕ ಎಂಬವರು ಪಾಠದ ಹೆಸರಿನಲ್ಲಿ ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿಬಿದ್ದಿದ್ದಾರೆ.

ಅದ್ರಲ್ಲೂ ಈ ವಿಭಾಗದ ವಿದ್ಯಾರ್ಥಿನಿಯರು ಬಟ್ಟೆ ಬದಲಿಸೋದನ್ನ ರಹಸ್ಯ ಕ್ಯಾಮಾರ ಇಟ್ಟು ಚಿತ್ರೀಕರಿಸಿರೋದಾಗಿ ಸ್ವತಃ ಉಮೇಶ್ ನಾಯ್ಕ ಬ್ಲ್ಯಾಕ್ ಮೇಲ್ ಮಾಡಿರೋದು ಕೂಡ ಜಗಜ್ಜಾಹೀರಾಗಿದೆ. ಉಮೇಶ್ ನಾಯ್ಕರ ಲೈಂಗಿಕ ಕಿರುಕುಳದ ಬಗ್ಗೆ ವಿದ್ಯಾರ್ಥಿನಿಯರು ನೀಡಿರೋ ದೂರಿನ ಪ್ರತಿ ಮತ್ತು ವಿವಿಯ ಮಹಿಳಾ ರಕ್ಷಣಾ ಸಮಿತಿ ತನಿಖೆ ನಡೆಸಿ ಕೊಟ್ಟಿರೋ ವರದಿ ಲಭ್ಯವಾಗಿದೆ.

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರು ಉಮೇಶ್ ನಾಯ್ಕ ಲೈಂಗಿಕ ಕಿರುಕುಳದ ಬಗ್ಗೆ ವಿವಿ ಆಡಳಿತ ಮತ್ತು ಸ್ಪರ್ಶ್ ಅನ್ನೋ ಆಂತರಿಕ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ದೂರಿನಲ್ಲಿ ಉಮೇಶ್ ನಾಯ್ಕ, ಮೈ ಕೈ ಮುಟ್ಟಿ ಪಾಠ ಮಾಡ್ತಾರೆ. ಲೈಂಗಿಕ ಕಿರುಕುಳದ ಜೊತೆಗೆ ಮಾನಸಿಕ ಕಿರುಕಳ ಕೊಡ್ತಾರೆ ಅಂತ ದೂರಿದ್ದರು. ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ತರಗತಿ ಕೊಠಡಿಯಲ್ಲಿ ವಿದ್ಯಾರ್ಥಿನಿಯರು ಬಟ್ಟೆ ಬದಲಿಸಿದ್ದನ್ನ ರಹಸ್ಯ ಕ್ಯಾಮರಾ ಇಟ್ಟು ಚಿತ್ರೀಕರಿಸಿದ್ದಾಗಿ ಬ್ಲ್ಯಾಕ್ ಮೇಲ್ ಮಾಡಿರೋ ಬಗ್ಗೆಯೂ ದೂರಿದ್ದರು.

ಈ ನಡುವೆ ಹೆಣ್ಮಕ್ಕಳಿಗೆ ಕಾಲ್ ಮಾಡಿ ಕಿರುಕುಳ ನೀಡಿದ ಬಗ್ಗೆಯೂ ಸಿಡಿ ದಾಖಲೆ ಸಹಿತ ದೂರು ಕೊಟ್ಟಿದ್ದರು. ಹೀಗಾಗಿ ದೂರಿನ ತನಿಖೆ ನಡೆಸಿದ ಸ್ಪರ್ಶ್ ‌ಮಹಿಳಾ ಸಮಿತಿ ಉಮೇಶ್ ನಾಯ್ಕ್ ತಪ್ಪಿತಸ್ಥ ಅನ್ನೋ ವರದಿ ಕೊಟ್ಡಿದೆ. ಈ ವರದಿಯ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಆದ್ರೆ ಕಳೆದ ಎಪ್ರಿಲ್ ನಲ್ಲಿ ಸಮಿತಿ ವರದಿ ಕೊಟ್ಡಿದ್ದರೂ ವಿವಿ ಆಡಳಿತ ಉಮೇಶ್ ನಾಯ್ಕ್ ಮೇಲೆ ಕ್ರಮ ಕೈಗೊಳ್ಳದೇ ಜಾಣ ಮೌನ ತಾಳಿದೆ.

ಹಾಗಾದರೇ ಪೋಲಿ ಪ್ರೊಫೇಸರ್‌ ಮೇಲೆ ಕ್ರಮ ಕೈಗೊಳ್ಳುವವರು ಯಾರು..? ಇಷ್ಟೆಲ್ಲಾ ದಾಖಲೆಗಳನ್ನು ವಿವಿಯ ಗಮನಕ್ಕೆ ದೂರಿನ ಮೂಲಕ ವಿದ್ಯಾರ್ಥಿನಿಯರು ತಂದರೂ, ಸ್ಪರ್ಶ್‌ ಮಹಿಳಾ ಸಮಿತಿ ಉಮೇಶ್‌ ನಾಯ್ಕ್‌ ತಪ್ಪಿತಸ್ಥ ಎಂದು ವರದಿ ನೀಡಿದರೂ ಕ್ರಮ ಕೈಗೊಳ್ಳದ್ದರ ಹಿಂದಿನ ಮರ್ಮವಾದರೂ ಏನು.? ಈ ಮೊದಲಾದ ಪ್ರಶ್ನೆಯನ್ನು ವಿದ್ಯಾರ್ಥಿಗಳು ಎತ್ತಿದ್ದಾರೆ. ಅಲ್ಲದೇ ಈ ಬಗ್ಗೆ ಕೂಡಲೇ ಪ್ರೋಫೆಸ್‌ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ವರದಿ : ಪ್ರಜ್ವಲ್ ಅಮಿನ್, Tv5 ಮಂಗಳೂರು

Next Story

RELATED STORIES