Top

TV5 EXCLUSIVE: ದೊಡ್ಮನೆಯ ಋಣ ತೀರಿಸುತ್ತಿದ್ದಾರಾ ನಟ ದರ್ಶನ್?

TV5 EXCLUSIVE: ದೊಡ್ಮನೆಯ ಋಣ ತೀರಿಸುತ್ತಿದ್ದಾರಾ ನಟ ದರ್ಶನ್?
X

ಸ್ಯಾಂಡಲ್​ವುಡ್ ಅಂಗಳದಲ್ಲಿ ಸ್ಟಾರ್ ವಾರ್ ಮತ್ತು ಸ್ಟಾರ್ ಫ್ಯಾನ್ ವಾರ್ ನಡೀತಿರೋದು ಇದೇ ಮೊದಲಲ್ಲ. ಅದ್ರಲ್ಲೂ ಚಿತ್ರರಂಗದ ದೊಡ್ಮನೆ ರಾಜ್ ಕುಟುಂಬಕ್ಕೂ ತೂಗುದೀಪ ಶ್ರೀನಿವಾಸ್ ಕುಟುಂಬಕ್ಕೂ ಅಷ್ಟಕ್ಕಷ್ಟೆ ಅನ್ನೋದು ಕೂಡ ಓಪನ್ ಟಾಕ್. ಆದ್ರೆ ಈ ಎರಡೂ ಕುಟುಂಬದ ಮಧ್ಯೆ ಇದ್ದ ಒಡನಾಟ, ಪ್ರೀತಿ ಆಪ್ಯಾಯತೆ ಯಾರಿಗೂ ಗೊತ್ತಿಲ್ಲ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆ ದೊಡ್ಮನೆಯ ಋಣ ತೀರಿಸೋದ್ರಲ್ಲಿ ಬ್ಯುಸಿ ಆಗಿದ್ದಾರೆ.

ಅಖಿಲ್. ಇತ್ತೀಚೆಗೆ ಸ್ಕ್ರಿಪ್ಟ್ ಪೂಜೆ ಮೂಲಕ ಪ್ರೀ ಪ್ರೊಡಕ್ಷನ್ ಕೆಲಸಕ್ಕೆ ಚಾಲನೆ ಕೊಟ್ಟ ಹೊಚ್ಚ ಹೊಸ ಸಿನಿಮಾ. ಅನೂಪ್ ಆಂಟನಿ ನಿರ್ದೇಶನದಲ್ಲಿ ತಯಾರಾಗಲಿರೋ ಯೂತ್​ಫುಲ್ ಎಂಟ್ರಟೈನರ್. ಆಷಾಡ ಮಾಸ ಶುರು ಆಗ್ತಿದ್ದ ಹಿನ್ನೆಲೆಯಲ್ಲಿ ಸರಳವಾಗಿ ಪೂಜೆ ಮಾಡೋ ಮೂಲಕ ಸಿನಿಮಾಗೆ ಚಾಲನೆ ಕೊಟ್ಟಿದೆ ಚಿತ್ರತಂಡ.

ಅಂದಹಾಗೆ ಈ ಸಿನಿಮಾಗೆ ಚಾಲನೆ ಕೊಟ್ಟಿದ್ದು ಚಿತ್ರತಂಡ್ಕಕಿಂತ ಹೆಚ್ಚಾಗಿ, ದರ್ಶನ್ ಅಂದ್ರೆ ತಪ್ಪಾಗಲ್ಲ. ಈ ಚಿತ್ರದ ನಾಯಕನಟ ಸೂರಜ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಡಿಯಲ್ಲಿ ಪಳಗಿದ ಅಪ್ಪಟ ಕನ್ನಡ ಪ್ರತಿಭೆ. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರರಂಗದ ದೊಡ್ಮನೆ ಶಕ್ತಿ ಆಗಿದ್ದ ಪಾರ್ವತಮ್ಮ ರಾಜ್​ಕುಮಾರ್​ರ ಸಹೋದರ ಎಸ್ ಎ ಶ್ರೀನಿವಾಸ್ ಪುತ್ರ. ಅಂದ್ರೆ ಪಾರ್ವತಮ್ಮರ ಸೋದರಳಿಯ.

ನೋಡೋಕೆ ಒಳ್ಳೆ ಹೈಟು, ವೈಟು, ಕಲರ್ ಮತ್ತು ನಾಯಕನಟನಾಗೋಕೆ ಬೇಕಾಗೋ ಖದರ್ ಇರೋ ಸೂರಜ್, ಇತ್ತೀಚೆಗಷ್ಟೇ ಮೈಸೂರಿನಲ್ಲಿ ಪದವಿ ಮುಗಿಸಿದ್ದಾರೆ. ಚೆನ್ನೈನಲ್ಲಿ ಡ್ಯಾನ್ಸ್ ಮತ್ತು ಫೈಟ್ ಕಲಿತಿದ್ದಾರೆ. ನೀನಾಸಂನಲ್ಲಿ ನಟನೆಯನ್ನ ಕರಗತ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ದರ್ಶನ್ ಜೊತೆಗಿದ್ದುಕೊಂಡೇ ಅವ್ರ ಮಾರ್ಗದರ್ಶನದಲ್ಲಿ ಸಿನಿಮಾಗೆ ಬೇಕಾಗೋ ಸಕಲ ತಯಾರಿ ಮಾಡಿಕೊಂಡಿದ್ದಾರೆ.

ದರ್ಶನ್​ರ ಐರಾವತ ಮತ್ತು ತಾರಕ್ ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರೋ ಸೂರಜ್, ಸಿನಿಮಾಗಾಗಿ ಬ್ಯೂಟಿಫುಲ್ ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ವೆರೈಟಿ ವೆರೈಟಿ ಕಾಸ್ಟ್ಯೂಮ್ಸ್​ನಲ್ಲಿ ಸೂರಜ್ ಮಿಂಚ್ತಿದ್ದು, ಎಲ್ಲಾ ಆ್ಯಂಗಲ್​ನಿಂದ ಸ್ಯಾಂಡಲ್​ವುಡ್​ನ ಭವಿಷ್ಯದ ಸ್ಟಾರ್ ಆಗೋ ಲಕ್ಷಣಗಳನ್ನ ತೋರಿದ್ದಾರೆ.

ಎಲ್ಲಾ ಓಕೆ ಸೂರಜ್​ರನ್ನ ದರ್ಶನ್ ಇಂಟ್ರಡ್ಯೂಸ್ ಮಾಡಿಸ್ತಿರೋದ್ಯಾಕೆ ಅನ್ನೋ ಹತ್ತು ಹಲವು ಪ್ರಶ್ನೆಗಳು ಎಲ್ಲರನ್ನ ಕಾಡುವುದರಲ್ಲಿ ಸಂದೇಹವಿಲ್ಲ. ಇದಕ್ಕೊಂದು ಬಲವಾದ ಕಾರಣವಿದೆ. ಸದ್ಯ ಮೈಸೂರಿನಲ್ಲಿರೋ ತೂಗುದೀಪ ಶ್ರೀನಿವಾಸ್ ಮನೆಯ ಮೇಲೆ ರಾಜ್​ಕುಮಾರ್-ಪಾರ್ವತಮ್ಮ ರಾಜ್​ಕುಮಾರ್ ಋಣ ಇದೆ. ಆ ಋಣವನ್ನ ಇದೀಗ ದರ್ಶನ್ ತೀರಿಸೋಕೆ ಹೊರಟಿದ್ದಾರೆ ಎನ್ನಲಾಗ್ತಿದೆ.

ಸದ್ಯ ಮೀನಾ ತೂಗುದೀಪ್ ಇರೋ ಮನೆಯ ಹೆಸರು ಮುಪಾ ಕೃಪಾ. ಅಂದ್ರೆ ಮುತ್ತುರಾಜ್ ಪಾರ್ವತಮ್ಮ ಕೃಪಾ ಎಂದರ್ಥ. ಅಂದ್ರೆ ದಶಕಗಳ ಹಿಂದೆ ಮೈಸೂರಿನ ಈ ಮನೆಯನ್ನ ಕಟ್ಟುವಾಗ ಹಣಕಾಸಿನ ತೊಂದರೆಯಲ್ಲಿದ್ದ ತೂಗುದೀಪ ಶ್ರೀನಿವಾಸ್​ಗೆ ಡಾ ರಾಜ್ ದಂಪತಿ ಸಹಾಯ ಮಾಡಿದ್ದರಂತೆ. ಅದೇ ಕಾರಣಕ್ಕೇನೇ ತೂಗುದೀಪ ದಂಪತಿ ಆ ಮನೆಗೆ ಮುಪಾ ಕೃಪಾ ಅಂತ ಹೆಸರಿಟ್ಟಿದ್ದಾರೆ. ಹಾಗಾಗಿ ಇದೀಗ ಅದೇ ತೂಗುದೀಪ ಕುಟುಂಬದ ಕುಡಿ ದರ್ಶನ್, ದೊಡ್ಮನೆಯ ಆ ಋಣವನ್ನ ಈ ರೂಪದಲ್ಲಿ ತೀರಿಸುತ್ತಿದ್ದಾರೆ ಎನ್ನಲಾಗ್ತಿದೆ.

ದರ್ಶನ್ ಸೂಚನೆಯಂತೆ ಹರಿಕೃಷ್ಣ ಸಂಗೀತ, ಅಭಿ ಕ್ಯಾಮೆರಾ ಸಿನಿಮಾಗಿರಲಿದ್ದು, ನಾಯಕಿಯ ತಲಾಶ್​ನಲ್ಲಿ ಚಿತ್ರತಂಡ ಬ್ಯುಸಿ ಆಗಿದೆ. ಇನ್ನು ಆಷಾಡ ಮಾಸ ಮುಗಿಯುತ್ತಿದ್ದಂತೆ ಚಿತ್ರೀಕರಣ ಶುರುವಾಗಲಿದ್ದು, ಟಾಕೀ ಪೋರ್ಷನ್ ಬೆಂಗಳೂರು ಮತ್ತು ಹಾಡುಗಳ ಚಿತ್ರೀಕರಣ ವಿದೇಶಿ ತಾಣಗಳಲ್ಲಿ ನಡೆಯಲಿದೆ. ಇನ್ನು ದರ್ಶನ್ ಈ ಸಿನಿಮಾದಲ್ಲಿ ಗೆಸ್ಟ್ ಅಪ್ಪಿಯರೆನ್ಸ್ ಕೊಟ್ರೂ ಅಚ್ಚರಿಯಿಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES