Top

ಪರಿಹಾರ ಹಣ ಬಾಕಿ ಹಿನ್ನಲೆ : ಕೆಎಸ್‌ಆರ್‌ಟಿಸಿ ಬಸ್‌ ಸೀಝ್‌

ಪರಿಹಾರ ಹಣ ಬಾಕಿ ಹಿನ್ನಲೆ : ಕೆಎಸ್‌ಆರ್‌ಟಿಸಿ ಬಸ್‌ ಸೀಝ್‌
X

ಚಿತ್ರದುರ್ಗ : KSRTC ಬಸ್ ಅಪಘಾತದ ಪರಿಹಾರ ಹಣ ಬಾಕಿ ಉಳಿದ ಹಿನ್ನೆಲೆಯಲ್ಲಿ ಚಿತ್ರದುರ್ಗ ನ್ಯಾಯಲಯದ ಆದೇಶದ ಮೇಲೆ ಚಿತ್ರದುರ್ಗ ನಗರಸಾರಿಗೆ ಬಸ್ ನ್ನು ವಶಪಡಿಸಿಕೊಳ್ಳಲಾಗಿದೆ.

ಗದಗ KSRTC ಡಿಪೊ ಬಸ್ 2016 ರಲ್ಕಿ ಚಿತ್ರದುರ್ಗ ತಾಲೂಕಿನ ಕೊಳಹಾಳ್ ಗ್ರಾಮದ ಬಳಿ ಅಪಘಾತವಾಗಿದ್ದು, 12 ವರ್ಷದ ಬಾಲಕ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಭರಮಸಾಗರ ಪೊಲೀಸರು ಪ್ರಕರಣ ದಾಖಲಿಸಿ ಚಿತ್ರದುರ್ಗ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಕೊಳಹಾಳ್ ಗ್ರಾಮ ಸರೊಜಮ್ಮನ ಪುತ್ರ ಅಭಿಷೇಕ ಮೃತಪಟ್ಟಿದ್ದು, ಮೂರು ಲಕ್ಷ ಹಣ ಕೊಟ್ಟು ಇನ್ನೂಳಿದ ವಿಳಂಬದ ಹಿನ್ನೆಲೆಚಿತ್ರದುರ್ಗ ವಿಭಾಗದ KA 42 F 1899 ನೋಂದಣಿಯ ನಗರ ಸಾರಿಗೆ ಬಸ್ ಕನ್ನಡ ಖ್ಯಾತಿಯ ನಗರಸಾರಿಗೆ ಬಸ್ ನ್ನು ಸಿಜ್ ಮಾಡಲಾಗಿದೆ‌.

ಚಿತ್ರದುರ್ಗ ಒಂದನೇ ಹೆಚ್ಚುವರಿ ಹಿರಿಯ ವಿಭಾಗ ನ್ಯಾಯಲಯ ಅಪಘಾತ ಪರಿಹಾರ ಹಣ ನೀಡಿದ ನಂತರ ಬಸ್ ಬಿಡುಗಡೆ ಮಾಡಲು ಆದೇಶ ಮಾಡಲಾಗಿದೆ. ಇದೀಗ ನಗರಸಾರಿಗೆ ಸಿಜ್ ಮಾಡಿದ ಹಿನ್ನೆಲೆಯಲ್ಲಿ ಒಂದು ದಿನದ ಆದಾಯ ಚಿತ್ರದುರ್ಗ ವಿಭಾಗಕ್ಕೆ ನಷ್ಟವಾಗಿದೆ‌

ವರದಿ : ವೀರೇಶ್ ವಿ ಚಳ್ಳಕೆರೆ, ಟಿವಿ5 ಚಿತ್ರದುರ್ಗ

Next Story

RELATED STORIES