Top

ಚಿರತೆಯ ವೇಷ ಧರಿಸಿ ಬಂದ ಮಾರ್ಜಾಲ

ಚಿರತೆಯ ವೇಷ ಧರಿಸಿ ಬಂದ ಮಾರ್ಜಾಲ
X

ಕೊಡಗು: ಚಿರತೆ ಮರಿಯನ್ನೇ ಹೋಲುವ ಅಪರೂಪದ ವನ್ಯಜೀವಿ ಪೆರ್ಪಣ(ಲಿಪರ್ಡ್ ಕ್ಯಾಟ್) ಅನ್ನು ಕಂಡು ಚಿರತೆ ಎಂದು ಭಾವಿಸಿ ಗ್ರಾಮಸ್ಥರು ಬೆಸ್ತುಬಿದ್ದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಚೆರಿಯಪರಂಬು ಗ್ರಾಮದ ಪರವಂಡ ಶಂಶು ಮನೆಯ ಹಿತ್ತಲ ತೋಟದಲ್ಲಿ 2 ಲಿಪರ್ಡ್ ಕ್ಯಾಟ್ ಮರಿಗಳು ಗೋಚರಿಸಿದ್ದವು.

ಚಿರತೆ ಮರಿಯಂತೆಯೇ ಇರೋ ಲಿಪರ್ಡ್ ಕ್ಯಾಟ್ ನೋಡಿ ಚಿರತೆಯೇ ಎಂದು ಭಾವಿಸಿದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ರು. ಅಲ್ಲದೇ ಅವುಗಳ ವೀಡಿಯೋ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೀಡಿದ್ದರು. ವಿಡಿಯೋ ಪರಿಶೀಲಿಸಿದ ಅರಣ್ಯ ಇಲಾಖೆ ಅವರು ಲಿಪರ್ಡ್ ಕ್ಯಾಟ್ ಗಳು ಎಂದು ದೃಢಪಡಿಸಿದ್ರು. ಇದರಿಂದ ಕೊಂಚ ನಿಟ್ಟುಸಿರು ಬಿಟ್ಟಿದ್ದ ಗ್ರಾಮಸ್ಥರಿಗೆ ಇಂದೂ ಕೂಡ ಲಿಪರ್ಡ್ ಕ್ಯಾಟ್ ಕಂಡುಬಂದ ಹಿನ್ನೆಲೆ ಗ್ರಾಮಸ್ಥರೆಲ್ಲಾ ಸೇರಿ ಆ 2 ಲಿಪರ್ಡ್ ಕ್ಯಾಟ್ ಗಳನ್ನು ಸೆರೆಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಸದ್ಯ ಅರಣ್ಯ ಇಲಾಖೆ ಅವುಗಳನ್ನು ಸಮೀಪದ ರಕ್ಷಿತಾರಣ್ಯಕ್ಕೆ ಬಿಟ್ಟಿದೆ. ಈ ಮೂಲಕ ಚಿರತೆ ಮರಿಗಳು ಕಂಡುಬಂದಿವೆ ಎಂಬ ಆತಂಕ ದೂರಾದಂತಾಗಿದೆ.

Next Story

RELATED STORIES