Top

ಹಲ್ಲಿನ ಚಿಕಿತ್ಸೆಗೆ ಬಂದ ದಂತ ವೈದ್ಯೆಗೆ ಕಾದಿತ್ತು ಶಾಕ್‌.!!

ಹಲ್ಲಿನ ಚಿಕಿತ್ಸೆಗೆ ಬಂದ ದಂತ ವೈದ್ಯೆಗೆ ಕಾದಿತ್ತು ಶಾಕ್‌.!!
X

ಧಾರವಾಡ : ಆ ಮಹಿಳೆಯೂ ಓರ್ವ ವೈದ್ಯೆ. ತನಗೆ ತಾನೇ ಚಿಕಿತ್ಸೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಅಂತಾ ಬೇರೆ ವೈದ್ಯನ ಬಳಿ ಹೋಗಿದ್ದಾರೆ. ಆದರೆ ಆ ವೈದ್ಯನೋ ಅದೆಲ್ಲಿ ಓದಿದ್ದಾನೋ ಏನೋ? ಸರಿಯಾಗಿ ಚಿಕಿತ್ಸೆ ಕೊಡಬೇಕಾಗಿದ್ದ ಆ ವೈದ್ಯ ಮಹಾಶಯ ಯಡವಟ್ಟನ್ನು ಮಾಡಿ, ಮಹಿಳೆಗೆ ತೊಂದರೆಯಾಗುತ್ತಿದ್ದಂತೆಯೇ ಚಿಕಿತ್ಸೆ ಅರ್ಧಕ್ಕೆ ಬಿಟ್ಟು ಓಡಿ ಹೋಗಿದ್ದಾನೆ. ಇದೆಲ್ಲಾ ನಡೆದಿದ್ದು ವಿದ್ಯಾಕಾಶಿ ಧಾರವಾಡದಲ್ಲಿ.

ಧಾರವಾಡ ನಗರದ ಡಾ.ಸಾರಿಕಾ ದಂತ ವೈದ್ಯೆಯಾಗಿದ್ದಾರೆ. ಆದರೆ ತಮ್ಮ ಹಲ್ಲಿನಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ನಗರದ ಹಳಿಯಾಳ ರಸ್ತೆಯ ಕೆ.ಸಿ.ಪಾರ್ಕ್ ಬಳಿ ಇರೋ ಫ್ಯಾಮಿಲಿ ಡೆಂಟಲ್ ಕ್ಲಿನಿಕ್ ಗೆ ಚಿಕಿತ್ಸೆಗೆ ಬಂದಿದ್ದಾರೆ. ಈ ಕ್ಲಿನಿಕ್ ಡಾ. ವಿನಾಯಕ ಮಹೇಂದ್ರಕರ್ ಅನ್ನೋ ವೈದ್ಯನಿಗೆ ಸೇರಿದ್ದು. ಈ ವೈದ್ಯನ ಬಳಿ ಟ್ರೀಟ್ ಮೆಂಟ್ ಗೆ ಅಂತಾ ಬಂದ ಸಾರಿಕಾ ಅವರಿಗೆ ಶಾಕ್ ಆಗಿದ್ದು ಆತ ಟ್ರೀಟ್ ಮೆಂಟ್ ಶುರು ಮಾಡಿದ ಮೇಲೆ. ಏಕೆಂದರೆ ವಿನಾಯಕ ಚಿಕಿತ್ಸೆ ನೀಡುವಾಗ ಬಾಯಲ್ಲಿ ಇಂಜೆಕ್ಷನ್ ನೀಡುವಾಗ ಅದರ ಮುಂದಿನ ಭಾಗ ಮುರಿದು ಹೋಗಿದೆ. ಸುಮಾರು ನಾಲ್ಕೈದು ಮಿಲಿ ಮೀಟರ್ ನಷ್ಟು ಹಲ್ಲಿನ ಹಿಂಭಾಗದಲ್ಲಿ ಸಿಕ್ಕು ಹಾಕಿಕೊಂಡಿದೆ. ಯಾವಾಗ ಇದು ಸಾರಿಕಾ ಅವರಿಗೆ ಗೊತ್ತಾಯಿತೋ ಅವರು ಪ್ರಶ್ನಿಸಿದ್ದಾರೆ.

ಯಾವಾಗ ಡಾ.ಸಾರಿಕಾ ಬಾಯಲ್ಲಿ ಮುರಿದಿರೋ ಸೂಜಿ ಬಗ್ಗೆ ಕೇಳಿದ್ದಾರೋ ವಿನಾಯಕ ಹೆದರಿಕೊಂಡಿದ್ದಾನೆ. ಅದನ್ನ ಹೇಗೆ ತೆಗೆಯಬೇಕು ಅನ್ನೋದು ಗೊತ್ತಾಗದೇ ಏನೇನೋ ಸಬೂಬು ಹೇಳಿದ್ದಾನೆ. ಆದರೆ ಸ್ವತಃ ದಂತ ವೈದ್ಯೆಯಾಗಿರೋ ಸಾರಿಕಾ ಅವರು ವಿನಾಯಕ್ ಮಹೇಂದ್ರಕರ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವಾಗ ಈ ಕೇಸು ಗಂಭೀರವಾಗ್ತಾ ಇದೆ ಅಂತಾ ಗೊತ್ತಾಯ್ತೋ ವಿನಾಯಕ್ ಅಲ್ಲಿಂದ ಪರಾರಿಯಾಗಿದ್ದಾನೆ. ವಿಷಯ ಸಾರಿಕಾ ಅವರ ಕುಟುಂಬದವರಿಗೆ ಗೊತ್ತಾಗಿ ಅವರು ಸ್ಥಳಕ್ಕೆ ಬರೋ ಹೊತ್ತಿಗಾಗಲೇ ವಿನಾಯಕ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಇದರಿಂದಾಗಿ ಆಕ್ರೋಶಗೊಂಡ ಸಾರಿಕಾ ಇದೀಗ ಉಪ ನಗರ ಠಾಣೆಯಲ್ಲಿ ಯಡವಟ್ಟು ವೈದ್ಯನ ವಿರುದ್ಧ ದೂರು ನೀಡಿದ್ಧಾರೆ.

ಇದೀಗ ಡಾ.ಸಾರಿಕಾ ಬೇರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮುಂಚೆಯೂ ಮಹೇಂದ್ರಕರ್ ಮೇಲೆ ಇಂಥ ಅನೇಕ ದೂರುಗಳು ಬಂದಿದ್ದವು. ಸರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗದಿದ್ದರೆ ಕ್ಲಿನಿಕ್ ನಡೆಸೋದಾದ್ರೂ ಏಕೆ ಅನ್ನೋದು ಸಾರ್ವಜನಿಕರ ಪ್ರಶ್ನೆ. ಒಟ್ಟಿನಲ್ಲಿ ಯಡವಟ್ಟು ಮಾಡಿಕೊಂಡು ಚಿಕಿತ್ಸೆ ಅರ್ಧಕ್ಕೆ ಬಿಟ್ಟು ಓಡಿ ಹೋಗೋ ಇಂಥ ವೈದ್ಯರ ವಿರುದ್ಧ ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ವರದಿ : ದುರ್ಗೇಶ ನಾಯಿಕ, ಟಿವಿ5 ಧಾರವಾಡ

Next Story

RELATED STORIES