Top

ಸಹೋದರರೇ ನೇಗಿಲಿಗೆ ಹೆಗಲು ಕೊಟ್ಟು ಉಳುಮೆ

ಸಹೋದರರೇ ನೇಗಿಲಿಗೆ ಹೆಗಲು ಕೊಟ್ಟು ಉಳುಮೆ
X

ಕೊಪ್ಪಳ : ದೇಶಕ್ಕೆ ಅನ್ನಕೊಡುವ ಅನ್ನದಾತನ ಗೋಳು ಇನ್ನು ಮುಗಿಯುವ ಲಕ್ಷಣ ಕಾಣ್ತೀಲ್ಲ. ಮಳೆಗಾಲದ ಸಂಧರ್ಭದಲ್ಲಿ ಅಷ್ಟೋ ಇಷ್ಟೋ ಬೆಳೆ ಬೆಳೆಯಬೇಕು ಎನ್ನುವ ಉದ್ದೇಶದಿಂದ ರೈತ ಉಳುಮೆ ಮಾಡಲು ಸಿದ್ದನಾಗುತ್ತಿದ್ದಾನೆ. ಆದ್ರೆ ಉಳುಮೆ ಮಾಡುಲು ಎತ್ತುಗಳು ಇಲ್ಲದೆ ಇಲ್ಲೊಂದು ಕುಟುಂಬದ ಸಹೋದರರು ನೇಗಿಲಿಗೆ ಹೆಗಲು ಕೊಟ್ಟು ಉಳುಮೆ ಮಾಡ್ತೀದೆ.

ಹೌದು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಲ್ಲಪ್ಪ ಲಗಳೂರು, ಹನುಮಂತ ಲಗಳೂರು ಎನ್ನುವ ಸಹೋದದರು ಉಳುಮೆ ಮಾಡ್ತಾ ಇದ್ದು, ಬೆಳಗ್ಗೆಯಿಂದ ಸಾಯಂಕಾಲದವೆರಗೂ ತಾವೇ ಹೆಗಲು ಕೊಟ್ಟು ಉಳುಮೆ ಮಾಡ್ತಾರೆ. ಇನ್ನು ಎತ್ತುಗಳನ್ನು ಕೊಂಡುಕೋಳ್ಳಬೇಕು ಎಂದ್ರೆ ಜೋಡಿ ಎತ್ತುಗಳಿಗೆ 40 ರಿಂದ 50 ಸಾವಿರ ಹಣ ಬೇಕು. ಇಲ್ಲವೇ ಒಂದು ದಿನಕ್ಕೆ ಬಾಡಿಗೆ ಒಂದು ಸಾವಿರದಿಂದ 1500 ರೂ ಬಾಡಿಗೆ ಕೊಡಬೇಕು.

ಇದ್ರಿಂದ ಕೈಯಲ್ಲಿ ಹಣವಿಲ್ಲದೆ ಈ ರೈತ ಕುಟುಂಬ ಇದೀಗ ತಾವೇ ಎತ್ತುಗಳಾಗಿ ಜಮೀನಿನಲ್ಲಿ ಉಳುಮೆ ಮಾಡ್ತೀದೆ. ಈ ಬಗ್ಗೆ ರೈತರನ್ನು ಕೇಳಿದ್ರೆ ಏನು ಮಾಡೋದು ಸರ್ ಕಷ್ಟ ಪಟ್ರೆ ತಾನೇ ಅನ್ನ ಸಿಗೋದು ಅಂತಾರೆ.

ವರದಿ : ನಾಗರಾಜ್.ವೈ, ಟಿವಿ5 ಕೊಪ್ಪಳ

Next Story

RELATED STORIES