Top

ಯುವಕರ ಗುಂಪಿನಿಂದ ಖಾಸಗಿ ಬಸ್ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ

ಯುವಕರ ಗುಂಪಿನಿಂದ ಖಾಸಗಿ ಬಸ್ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ
X

ಹುಬ್ಬಳ್ಳಿ : ಕಳೆದ ರಾತ್ರಿ ನಗರದ ಗ್ಲಾಸ್‌ ಹೌಸ್‌ ಬಳಿ, ಖಾಸಗಿ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದಿದ್ದಕ್ಕೆ, ಬಸ್‌ ಚಾಲಕನಿಗೆ ಹಿಗ್ಗಾಮುಗ್ಗ ಯುವಕರ ಗುಂಪೊಂದು ಥಳಿಸಿದ ಘಟನೆ ನಡೆದಿದೆ.

ಹುಬ್ಬಳ್ಳಿಯ ಗ್ಲಾಸ್‌ ಹೌಸ್ ಬಳಿ, ಖಾಸಗಿ ಬಸ್‌ವೊಂದು ರಾತ್ರಿ ಸಂಚಾರಿಸುತ್ತಿತ್ತು. ಈ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಚಾಲಕನ ಕಾಲಿಗೆ ಗಾಯವಾಗಿದೆ. ಕೂಡಲೇ ಅಪಘಾತ ಘಟನಾ ಸ್ಥಳಕ್ಕೆ ಹತ್ತಿರದಲ್ಲೇ ಇದ್ದ ಯುವಕರ ಗುಂಪೊಂದು ಧಾವಿಸಿ, ಖಾಸಗಿ ಬಸ್‌ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಯುವಕರ ಗುಂಪು ಅಪಘಾತ ಮಾಡಿದ್ದಕ್ಕಾಗಿ ಬಸ್ ಚಾಲಕನನ್ನು ಕಾಲಿನಿಂದ ಒದೆಯುತ್ತಿದ್ದರೂ, ಸ್ಥಳದಲ್ಲಿಯೇ ಇದ್ದ ಪೊಲೀಸರು ಮಾತ್ರ ಮೂಕ ಪ್ರೇಕ್ಷಕರಾಗಿದ್ದಾರೆ. ಅಲ್ಲದೇ ಇದನ್ನು ಕಂಡರೂ ಕಾಣದಂತೆ ವರ್ತಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಪಘಾತ ಸಂಭವಿಸಿದ್ದಕ್ಕೆ ಚಾಲಕನ ಮೇಲೆ ಹಲ್ಲೆ ಮಾಡೋದು ಸರಿಯಲ್ಲ. ಹೀಗೆ ಹಲ್ಲೆ ಮಾಡುವುದು ಕಾನೂನಿನ ವಿರುದ್ಧವಾದದ್ದು. ಏನೇ ಇದ್ದರೂ ದೈಹಿಕವಾಗಿ ಹಲ್ಲೆ ಮಾಡುವ ಬಾರದು. ಕಾನೂನಿನ ಅಡಿಯಲ್ಲಿಯೇ ಹೋರಾಟ ಮಾಡಬೇಕಿತ್ತು. ಆದ್ರೇ ಯುವಕರ ಗುಂಪು ಖಾಸಗೀ ಚಾಲಕನನ್ನು ಥಳಿಸಿದ್ದು ಮಾತ್ರ ದುರಂತವೇ ಸರಿ. ಇದನ್ನು ಕಂಡರೂ ಕಾಣದಂತಿದ್ದ ಪೊಲೀಸರ ನಡೆ ಖೇದಕರ.

ಈ ಎಲ್ಲಾ ಘಟನೆಯನ್ನು ಸಾರ್ವಜನಿಕರೊಬ್ಬ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ. ಅಲ್ಲದೇ ಖಾಸಗೀ ಚಾಲಕನ ಮೇಲೆ ಹಲ್ಲೆ ಮಾಡಿದ ಯುವಕರ ಮೇಲೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES