Top

ಡಾ.ರಾಜ್ ಮೊಮ್ಮಗನ ನಿಶ್ಚಿತಾರ್ಥದಲ್ಲಿ ವಿದ್ವತ್ ಪ್ರತ್ಯಕ್ಷ..!

ಡಾ.ರಾಜ್ ಮೊಮ್ಮಗನ ನಿಶ್ಚಿತಾರ್ಥದಲ್ಲಿ ವಿದ್ವತ್ ಪ್ರತ್ಯಕ್ಷ..!
X

ಮೊಹಮ್ಮದ್ ನಲಪಾಡ್‌ನಿಂದ ಹಲ್ಲೆಗೊಳಗಾಗಿದ್ದ ವಿದ್ವತ್ ಮೈಸೂರಿನಲ್ಲಿ ಗುರುವಾರ ನಡೆದ ಡಾ.ರಾಜ್‌ಕುಮಾರ್ ಮೊಮ್ಮಗನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದಾರೆ.

ಕೆಲ ತಿಂಗಳ ಹಿಂದೆ ಬೆಂಗಳೂರಿನ ಯುಬಿಸಿಟಿಯ ಪಬ್‌ವೊಂದರಲ್ಲಿ ನಲಪಾಡ್ ಹ್ಯಾರಿಸ್ ಹಾಗೂ ಸಹಚರರಿಂದ ಹಲ್ಲೆಗೊಳಗಾಗಿದ್ದ ವಿದ್ವತ್, ಜೀವನ್ಮರಣ ನಡುವೆ ಹೋರಾಟ ನಡೆಸಿದ್ದರು.ಈ ಪ್ರಕರಣ ನ್ಯಾಯಾಲಯದ ಮಟ್ಟಿಲೇರಿದ್ದೂ ಅಲ್ಲದೇ, ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು.ನಲಪಾಡ್ ಹಾಗೂ ಸಹಚರರು ಕೆಲವು ತಿಂಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸಿ, ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ನಲಪಾಡ್ ಗ್ಯಾಂಗ್‌ನಿಂದ ಹಲ್ಲೆಗೊಳಗಾದ ನಂತರ ಆಸ್ಪತ್ರೆಯಲ್ಲಿದ್ದ ವಿದ್ವತ್ ಚೇತರಿಸಿಕೊಂಡ ನಂತರ ವಿದೇಶಕ್ಕೆ ಪ್ರಯಾಣಿಸಿದ್ದರು. ಮಾಧ್ಯಮ ಸೇರಿದಂತೆ ಯಾರ ಕೈಗೂ ಸಿಗದೇ ಪ್ರತಿಕ್ರಿಯೆ ಕೂಡ ನೀಡಿರಲಿಲ್ಲ. ಇದೀಗ ಡಾ.ರಾಜ್‌ ಮೊಮ್ಮಗನ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ಕುತೂಹಲ ಮೂಡಿಸಿದ್ದಾರೆ.

ವಿದ್ವತ್ ಡಾ.ರಾಜ್ ಮೊಮ್ಮಗ ಯುವರಾಜನ ಬಾಲ್ಯದ ಸ್ನೇಹಿತರಾಗಿದ್ದಾರೆ. ಹಲ್ಲೆಯ ವೇಳೆ ಯುವರಾಜ್ ಕೂಡ ಸ್ಥಳದಲ್ಲಿದ್ದರು ಎಂಬ ವದಂತಿ ಹರಡಿತ್ತು.ವಿದ್ವತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಹಾಗೂ ವಿನಯ್ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು.

Next Story

RELATED STORIES