ಇಂದು 2018-19ನೇ ಸಾಲಿನ ದೋಸ್ತಿ ಲೆಕ್ಕ : ಎಲ್ಲರ ಚಿತ್ತ ಸಾಲಾಮನ್ನಾದತ್ತ.!
TV5 Kannada5 July 2018 5:00 AM GMT
ಬೆಂಗಳೂರು : ರಾಜ್ಯದ ಜನತೆ ಬಹು ನಿರೀಕ್ಷೆಯಿಂದ ನೋಡುತ್ತಿರುವ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಇಂದು ವಿಧಾನಸಭೆಯಲ್ಲಿ ಮಂಡನೆಯಾಗಲಿದೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದೊಂದಿಗೆ ಮುಖ್ಯಮಂತ್ರಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರ ಮುಂದೆ ರಾಜ್ಯದ ರೈತರ ಸಾಲಾಮನ್ನ ವಿಚಾರವ ವಿದೆ. ಈ ಬಗ್ಗೆ ಇಂದು ಸ್ಪಷ್ಟ ನಿರ್ಧಾರ ಪ್ರಕಟಿಸಬಹುದು ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ಜೆಡಿಎಸ್ ಚುನಾವಣಾ ಪೂರ್ವ ಪ್ರಣಾಳಿಕೆಯ ಭರವಸೆ ಹಾಗೂ ಕಾಂಗ್ರೆಸ್ನ ಭರವಸೆಗಳನ್ನು ಇಂದು ಮಂಡಿಸಲಾಗುತ್ತಿರುವ ಬಜೆಟ್ನಲ್ಲಿ ಈಡೇರಿಸಲಾಗುತ್ತಾ ಎಂಬ ಪ್ರಶ್ನೆಯೂ ಕಾಡುತ್ತಿದೆ.
ಬಜೆಟ್ಗೂ ಮುನ್ನಾ ಮುಖ್ಯಮಂತ್ರಿ ವಿಜಯನಗರದ ಆದಿಚುಂಚನಗಿರಿ ಮಠಕ್ಕೆ ತೆರಳಿ, ಶ್ರೀಗಳ ಆಶೀರ್ವಾದ ಪಡೆದಿರುವ ಕುಮಾರಸ್ವಾಮಿ, ಇಂದು ಬೆಳಿಗ್ಗೆ 11 ಗಂಟೆಗೆ 2018-19ನೇ ಸಾಲಿನ ಅಯವ್ಯಯ ಮಂಡಿಸಲಿದ್ದಾರೆ. ಇದರಲ್ಲಿ ಸಾಲಾಮನ್ನಾದಂತ ಮಹತ್ವದ ಯೋಜನೆಗಳನ್ನು ಘೋಷಿಸುತ್ತಾರಾ ಎಂಬುದನ್ನು ದೋಸ್ತಿ ಲೆಕ್ಕದ ಮಂಡನೆಯವರೆಗೆ ಕಾದು ನೋಡಬೇಕಿದೆ.
Next Story