Top

ಚಿಕ್ಕಬಳ್ಳಾಪುರದಲ್ಲಿ ಗುಬ್ಬಚ್ಚಿಗಳ ನೀನಾದ..!!

ಚಿಕ್ಕಬಳ್ಳಾಪುರದಲ್ಲಿ ಗುಬ್ಬಚ್ಚಿಗಳ ನೀನಾದ..!!
X

ಚಿಕ್ಕಬಳ್ಳಾಪುರ : ಚಿವ್..ಚಿವ್.. ಎನ್ನೋ ಗುಬ್ಬಚ್ಚಿಗಳ ಚಿಲಿಪಿಲಿ ನೀನಾದ ಕೇಳಿ ಎಷ್ಟೋ ದಿನ ಆಯ್ತು, ಮೊದಲು ಮನೆಗಳ ಬಳಿ ಇರುತ್ತಿದ್ದವು ಗುಬ್ಬಚ್ಚಿಗಳು, ನಾಡಿನಿಂದ ಕಾಣೆಯಾಗಿರುವ ಗುಬ್ಬಚ್ಚಿಗಳನ್ನು ನೋಡಬೇಕಂದ್ರೆ ಕಾಡುಮೇಡುಗಳಿಗೆ ಹೋಗಬೇಕು.. ಮೊಬೈಲ್ ಗಳು ಬಂದಮೇಲಂತೂ... ಗುಬ್ಬಚ್ಚಿಗಳು ಇಲ್ಲದಂತಾಗಿದೆ ಅನ್ನೋ ಕೊರಗು ನಿಮ್ಮನ್ನ ಕಾಡುತ್ತಿದ್ಯಾ.., ಹಾಗಾದ್ರೆ ಚಿಂತೆ ಬಿಡಿ ಅಲ್ಲಿರುವ ಖಾಸಗಿ ಹೋಟೆಲ್ ಒಂದರ ಬಳಿ ಹೋಗಿ.. ಸಾವಿರಾರು ಗುಬ್ಬಚ್ಚಿಗಳು ನಿಮ್ಮನ್ನು ನೋಡಲು ಅಲ್ಲಿಗೆ ಬರುತ್ವೆ.. ಹಾಗಾದ್ರೆ ಆ ಹೋಟೆಲ್ ಇರೋದಾದ್ರೂ ಎಲ್ಲಿ..? ಆ ಗುಬ್ಬಚ್ಚಿಗಳು ಅಲ್ಲಿಗೆ ಬರೋದಾದ್ರೂ ಯಾಕೆ ಅಂತೀರಾ ಈ ಸುದ್ದಿ ಓದಿ..

ಹಸಿರುಮಯ ವಾತಾವರಣಕ್ಕೂ ಗುಬ್ಬಚ್ಚಿಗಳ ಗೂಡಿಗೂ ಅದೇನೋ ಒಂಥರಾ ನಂಟು.. ಹೌದು ಹಸಿರು ಅನ್ನೋದು ಕೇವಲ ಮನುಷ್ಯರಿಗಷ್ಟೇ ಅಲ್ಲ.. ಪಕ್ಷಿಗಳಿಗೂ ಮುದ ನೀಡುತ್ತೆ.. ಹೋಟೆಲ್ ಒಂದರ ಬಳಿ ಅಲಂಕಾರಿಕವಾಗಿ ನೆಟ್ಟ ಹಸಿರು ಮರಗಳೇ ಈಗ ಗುಬ್ಬಚ್ಚಿಗಳ ತಾಣವಾಗಿ ಸದಾ ಚಿವ್... ಚೀವ್... ಚಿಲಿಪಿಲಿ ನೀನಾದ ಕೇಳಿ ಬರುವಂತಾಗಿದೆ.

ಅಂದಹಾಗೇ ಈ ನಿನಾದ ಕೇಳಿಬರೋದು ಬೆಂಗಳೂರು- ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ 7ರ ಚಿಕ್ಕಬಳ್ಳಾಪುರ ತಾಲ್ಲೂಕು ಸೇಟ್ ದಿನ್ನೆ ಬಳಿ. ಇಲ್ಲಿ ನಿರ್ಮಿಸಲಾಗಿರುವ ಪ್ರಯಾಣಿಕರ ಪ್ರವಾಸಿ ಹೋಟೆಲ್ ಮುಂದೆ ಪ್ರಯಾಣಿಕರ ಆಕರ್ಷಣೆಗೆಂದು ಅಲಂಕಾರಿಕ ಹಸಿರು ಗಿಡಗಳನ್ನ ಬೆಳೆಸಲಾಗಿದೆ. ಇಲ್ಲಿರುವ ತಂಪಾದ ಹಸಿರಿಗೆ ಮನಸೋತ ಸಾವಿರಾರು ಗುಬ್ಬಚ್ಚಿಗಳು ತಮ್ಮ ಆಶ್ರಯ ತಾಣವಾಗಿ ಮಾಡಿಕೊಂಡು ಪ್ರಯಾಣಿಕರ ಮನ ತಣಿಸುತ್ತಿವೆ..

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರನ್ನು ಸೆಳೆಯಲು ನಿರ್ಮಿಸಿದ ಅಲಂಕಾರಿಕ ಗಿಡಗಳು, ಅದೆಷ್ಟು ಜನ ಹೊಟೆಲ್ ಗ್ರಾಹಕರನ್ನ ಸೆಳೆಯಿತೋ ಗೊತ್ತಿಲ್ಲ.. ಆಗ ಹೋಟೆಲ್ ಬಳಿ ಸುಳಿಯದ ಪ್ರಯಾಣಿಕರು ಈಗ ಗುಬ್ಬಚ್ಚಿಗಳನ್ನ ನೋಡೋ ನೆಪದಲ್ಲಿ ಹೋಟೆಲ್ ನತ್ತ ಹೆಜ್ಜೆ ಹಾಕುತ್ತಿದ್ದಾರೆ. ಇದ್ರಿಂದ ಗುಬ್ಬಿಗಳಿಗೆ ಆಶ್ರಯ ತಾಣವಾಗಿರುವ ಹೋಟೆಲ್ ಆವರಣ ಗುಬ್ಬಿಗಳ ಪಕ್ಷಿದಾಮದಂತಾಗಿದ್ದು, ಹೋಟೆಲ್ ಗೂ ಭರ್ಜರಿ ಬ್ಯುಜಿನೆಸ್ ನಡೆಯುತ್ತಿದೆ. ಇದ್ರಿಂದ ಉತ್ತೇಜನರಾಗಿರುವ ಹೋಟೆಲ್ ಹಾಗೂ ಅಂಗಡಿ ಸಿಬ್ಬಂದಿ ಗುಬ್ಬಿಗಳಿಗೆ ಕಾಳು-ಕಡಿ ಆಹಾರ ತಂದು ಗುಬ್ಬಿಗಳಿಗೆ ಹಾಕುತ್ತಿದ್ದಾರೆ..

ಮಕ್ಕಳಿಗೆ ಗುಬ್ಬಚ್ಚಿಗಳನ್ನು ತೋರಿಸ್ಬೇಕು, ಅವುಗಳ ಚಿಲಿಪಿಲಿ ನೀನಾದ ಕೇಳಿಸಬೇಕು, ಗುಬ್ಬಚ್ಚಿಗಳ ಚೆಲ್ಲಾಟ ನೋಡಿ ಕಣ್ಮನತುಂಬಿಕೋಬೇಕಂದ್ರೆ.. ಯಾವುದಕ್ಕೂ ನೀವೊಂದು ಸಲ ಚಿಕ್ಕಬಳ್ಳಾಪುರದ ಸೇಟ್ ದಿನ್ನೆಗೆ ಬೇಟಿ ಕೊಡಿ..

ವರದಿ : ಮುರಳಿಧರ್, ಟಿವಿ5 ಚಿಕ್ಕಬಳ್ಳಾಪುರ

Next Story

RELATED STORIES