Top

ಕನ್ನಡಕ್ಕೆ ರಿಮೇಕ್ ಆಗ್ತಿದೆ ಬ್ಲಾಕ್‌ಬಸ್ಟರ್ ಸರೈನೋಡು

ಕನ್ನಡಕ್ಕೆ ರಿಮೇಕ್ ಆಗ್ತಿದೆ ಬ್ಲಾಕ್‌ಬಸ್ಟರ್ ಸರೈನೋಡು
X

ಸರೈನೋಡು. ಎರಡು ವರ್ಷದ ಹಿಂದೆ ಪಕ್ಕದ ಟಾಲಿವುಡ್​ ಅಂಗಳದಲ್ಲಿ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ ಔಟ್ ಅಂಡ್ ಔಟ್ ಮಾಸ್ ವೆಂಚರ್. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮುಖ್ಯಭೂಮಿಕೆಯಲ್ಲಿದ್ದ ಸರೈನೋಡು, ಪ್ರೇಕ್ಷಕರ ಮತ್ತು ವಿಮರ್ಷಕರ ಹುಬ್ಬೇರಿಸಿದ್ದಂತಹ ಆ್ಯಕ್ಷನ್ ಎಂಟ್ರಟೈನರ್.

ಬೋಯಪಾಟಿ ಶ್ರೀನು ನಿರ್ದೇಶನದಲ್ಲಿ ತಯಾರಾದ ಈ ಸಿನಿಮಾನ ಅಲ್ಲು ಅರವಿಂದ್, ತಮ್ಮ ಹೋಮ್ ಬ್ಯಾನರ್ ಗೀತಾ ಆರ್ಟ್ಸ್​ನಡಿ ನಿರ್ಮಾಣ ಮಾಡಿದ್ರು. 50 ಕೋಟಿ ಬಜೆಟ್​ನಲ್ಲಿ ತಯಾರಾಗಿದ್ದ ಸರೈನೋಡು ಬಾಕ್ಸ್ ಅಫೀಸ್​ನಲ್ಲಿ ಬರೋಬ್ಬರಿ 150ಕ್ಕೂ ಅಧಿಕ ಕೋಟಿ ಲೂಟಿ ಮಾಡಿತ್ತು. ಅಷ್ಟರ ಮಟ್ಟಿಗೆ ಈ ಸಿನಿಮಾದ ಒಂದೊಂದು ದೃಶ್ಯ ಕೂಡ ನೋಡುಗರನ್ನ ಕಾಡಿತ್ತು.

ಇದೀಗ ಇದೇ ಸರೈನೋಡು ಸಿನಿಮಾ ನಮ್ಮ ಸ್ಯಾಂಡಲ್​ವುಡ್​ಗೆ ಬರ್ತಿದೆ. ಕನ್ನಡದಲ್ಲಿ ಈ ಸಿನಿಮಾನ ರಿಮೇಕ್ ಮಾಡೋಕೆ ಸಕಲ ಸಿದ್ದತೆ ನಡೆಯುತ್ತಿದೆ. ಕನ್ನಡದ ಹೆಸರಾಂತ ನಿರ್ಮಾಪಕರೊಬ್ಬರು ಈ ಚಿತ್ರದ ಕನ್ನಡ ರಿಮೇಕ್ ರೈಟ್ಸ್ ಖರೀದಿಸಿದ್ದಾರೆ. ಹಾಗಾಗಿ ಸರೈನೋಡು ಈಗ ಗಾಂಧಿನಗರದ ಟಾಕ್ ಆಫ್ ದ ಟೌನ್ ಆಗಿದೆ.

ಸುದೀಪ್​ರ ಬಚ್ಚನ್, ಅಜಯ್ ರಾವ್​ರ ಕೃಷ್ಣನ್ ಲವ್ ಸ್ಟೋರಿ, ನೀನಾಸಂ ಸತೀಶ್​ರ ಲವ್ ಇನ್ ಮಂಡ್ಯ, ಕೃಷ್ಣ ರುಕ್ಕು ಹೀಗೆ ನೆನಪಿನಲ್ಲಿ ಉಳಿಯುವಂತಹ ಸಿನಿಮಾಗಳನ್ನ ನಿರ್ಮಿಸಿದ್ದ ನಿರ್ಮಾಪಕ ಉದಯ್ ಕೆ ಮೆಹ್ತಾ ಸರೈನೋಡು ಹಕ್ಕುಗಳನ್ನ ಖರೀದಿಸಿದ್ದಾರಂತೆ. ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಲ್ಲಿ ನಿರೀಕ್ಷೆಗೂ ಮೀರಿದಂತಹ ರೆಸ್ಪಾನ್ಸ್ ಪಡೆದು, ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಆಗಿ ಕಮಾಲ್ ಮಾಡಿದ ಧ್ರುವ ಸರ್ಜಾ ಹೆಸರು ಈ ಸಿನಿಮಾಗೆ ಕೇಳಿ ಬರ್ತಿದೆ.

ಸದ್ಯ ನಂದಕಿಶೋರ್ ನಿರ್ದೇಶನದ ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾ ಬ್ಯುಸಿ ಇದ್ದಾರೆ. ಆದ್ರೆ ಅದಾದ ಬಳಿಕ ಉದಯ್ ಕೆ ಮೆಹ್ತಾ ನಿರ್ಮಾಣದ ಸಿನಿಮಾಗೆ ಧ್ರುವ ಡೇಟ್ಸ್ ಕೊಟ್ಟಿದ್ರು. ಆದ್ರೀಗ ಉದಯ್ ಕೆ ಮೆಹ್ತಾ ಸರೈನೋಡು ರೈಟ್ಸ್ ತಂದಿರೋದು ಧ್ರುವಗಾಗಿಯೇ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಪಕ್ಕಾ ಆಗಿದೆ.

ಉದಯ್ ಮೆಹ್ತಾ

ಧ್ರುವ ಸರ್ಜಾ ಅಭಿನಯದ ಅದ್ದೂರಿ, ಬಹದ್ದೂರ್ ಮತ್ತು ಭರ್ಜರಿ ಸಿನಿಮಾಗಳನ್ನ ನೋಡಿದ್ರೆ, ಸರೈನೋಡು ಸಬ್ಜೆಕ್ಟ್​ಗೆ ಇವರೇ ಸೂಟಬಲ್ ಸ್ಟಾರ್ ಅನಿಸೋದ್ರಲ್ಲಿ ಎರಡು ಮಾತಿಲ್ಲ. ಮಾಸ್ ವೆಂಚರ್​ಗಳಿಗೆ ಹೇಳಿ ಮಾಡಿಸಿದ ಪ್ರತಿಭೆ ಧ್ರುವ.

ಬೆಂಕಿ ಚೆಂಡಿನಂತೆ ಡ್ಯಾನ್ಸ್, ಫೈಟ್, ಡೈಲಾಗ್ ಡೆಲಿವರಿ ಹೀಗೆ ಎಲ್ಲಾ ಆ್ಯಂಗಲ್​ನಲ್ಲಿ ಅಲ್ಲು ಅರ್ಜುನ್​ನ ಮೀರಿಸೋ ಅಂತಹ ಕಲಾವಿದ ಧ್ರುವ. ಹಾಗಾಗಿ ಈ ಸಿನಿಮಾ ಕನ್ನಡದಲ್ಲಿ ಆ್ಯಕ್ಷನ್ ಪ್ರಿನ್ಸ್​ಗೆ ಹೊರತಾಗಿ ಬೇರಾರಿಗೂ ಸೂಟ್ ಆಗಲ್ಲ. ಅದೇನೇ ಇರಲಿ, ಸದ್ಯ ರಿಮೇಕ್ ಹಕ್ಕುಗಳನ್ನ ಖರೀದಿಸಿರೋ ನಿರ್ಮಾಪಕರು ಮಾತ್ರ ಈ ವಿಚಾರವನ್ನ ಗೌಪ್ಯವಾಗಿಯೇ ಇಟ್ಟಿದ್ದಾರೆ. ಇನ್ನು ನಿರ್ದೇಶಕರು ಯಾರು..? ಟೈಟಲ್ ಏನು..? ಧ್ರುವ ಸರ್ಜಾಗೇ ಮಾಡ್ತಾರಾ ಅಥ್ವಾ ಬೇರೆ ಯಾರಿಗೆ ಮಾಡ್ತಾರೆ ಅನ್ನೋದನ್ನ ಅಫಿಶಿಯಲ್ ಆಗಿ ಅನೌನ್ಸ್ ಮಾಡೋವರೆಗೂ ಕಾದುನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5

Next Story

RELATED STORIES