Top

ರಾಜರೂರಿನ ಅಳಿಯನಾದ ಡಾ.ರಾಜ್ ಮೊಮ್ಮಗ ಯುವರಾಜ

ರಾಜರೂರಿನ ಅಳಿಯನಾದ ಡಾ.ರಾಜ್ ಮೊಮ್ಮಗ ಯುವರಾಜ
X

ಮೈಸೂರು: ಕನ್ನಡ ಚಿತ್ರರಂಗದ ದೊಡ್ಮನೆಯಾದ ಡಾ.ರಾಜ್‌ಕುಮಾರ್ ಕುಟುಂಬ ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿತ್ತು. ರಾಘವೇಂದ್ರ ರಾಜ್‌ಕುಮಾರ್‌ ಅವ್ರ ಎರಡನೇ ಪುತ್ರ ಯುವರಾಜ್‌ಕುಮಾರ್ ಹಾಗೂ ಮೈಸೂರಿನ ಯುವತಿ ಶ್ರೀದೇವಿ ಭೈರಪ್ಪರವರ ಅದ್ದೂರಿ ನಿಶ್ಚಿತಾರ್ಥ ಕಾರ್ಯಕ್ರಮ ಖಾಸಗಿ ಹೊಟೇಲ್‌ವೊಂದರಲ್ಲಿ ಸಂಭ್ರಮದಿಂದ ಜರುಗಿತು. ದೊಡ್ಮನೆಯ ಈ ಸಡಗರದಲ್ಲಿ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿ ನವಜೋಡಿಗೆ ಶುಭಕೋರಿದ್ರು. ಆಗಿದ್ರೆ, ದೊಡ್ಮನೆಯ ಆ ಸಂಭ್ರಮ ಹೇಗಿತ್ತು.? ಎಂಬುದರ ಬಗ್ಗೆ ಇಲ್ಲಿದೆ ಓದಿ..

ಕಡುನೀಲಿ ಬಣ್ಣದ ಸೂಟ್‌ನಲ್ಲಿ ಕಂಗೊಳಿಸುತ್ತಿರುವ ಯುವರಾಜ್‌ಕುಮಾರ್. ಹಸಿರು ರೇಷ್ಮೆ ಸೀರೆಯಲ್ಲಿ ಸಿಂಗಾರಗೊಂಡ ಶ್ರೀದೇವಿ. ಹೌದು ಕನ್ನಡ ಚಿತ್ರರಂಗದ ದೊಡ್ಮನೆ ಅಂತಾನೆ ಕರೆಸಿಕೊಳ್ಳುವ ಡಾ.ರಾಜ್‌ಕುಮಾರ್ ಅವರ ಇಡೀ ಕುಟುಂಬ ಇಂದು ಮೈಸೂರಿನಲ್ಲಿ ಹಾಜರಿದ್ದರು. ಕಾರಣ ರಾಜ್ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಅವರ ದ್ವಿತೀಯ ಪುತ್ರ ಯುವರಾಜ್‌ಕುಮಾರ್ ನಿಶ್ಚಿತಾರ್ಥದ ಅಂಗವಾಗಿ.

ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ಮೈಸೂರು ಮೂಲದ ಯುವತಿ ಶ್ರೀದೇವಿ ಜೊತೆ ಹಲವು ದಿನಗಳಿಂದ ಸ್ನೇಹ, ಪ್ರೀತಿಯಲ್ಲಿದ್ದ ಯುವರಾಜ್‌ಕುಮಾರ್ ಇದೀಗ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಎರಡು ಕುಟುಂಬದ ಒಪ್ಪಿಗೆಯೊಂದಿಗೆ ಇಂದು ನಿಶ್ಚಿತಾರ್ಥ ಮಾಡಿಕೊಂಡ ಈ ಜೊಡಿ, ಹಿರಿಯರ ಆರ್ಶಿವಾದ ಪಡೆಯಿತು‌. ರಾಘವೇಂದ್ರ ರಾಜ್‌ಕುಮಾರ್ ಪುತ್ರನ ನಿಶ್ಚಿತಾರ್ಥ ಸಂದರ್ಭದಲ್ಲಿ ರಾಜ್ ಪುತ್ರರಾದ ಶಿವರಾಜ್‌ಕುಮಾರ್, ಪುನಿತ್ ರಾಜ್‌ಕುಮಾರ್ ಹಾಜರಿದ್ದು ಶಾಸ್ತ್ರ ಸಂಪ್ರದಾಯದೊಂದಿಗೆ ನಿಶ್ಚಿತಾರ್ಥ ನೆರವೇರಿಸಿದರು.

ಇನ್ನೂ ರಾಜ್ ಕುಟುಂಬದ ಕಾರ್ಯಕ್ರಮವವಾಗಿದ್ದರಿಂದ ಸಹಜವಾಗಿಯೇ ಅದ್ದೂರಿತನ ಕೂಡಿತ್ತು. ಖಾಸಗಿ ಹೊಟೇಲ್‌ನಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಮಂಟಪದಲ್ಲಿ ಉಂಗುರ ಬದಲಾಯಿಸಿಕೊಂಡ ಯುವರಾಜ್‌ಕುಮಾರ್ ಶ್ರೀದೇವಿ ಹೊಸ ಜೀವನಕ್ಕೆ ಕಾಲಿಟ್ಟರು. ಈ ವೇಳೆ ನಟ ಪುನಿತ್, ಶಿವಣ್ಣ, ಶ್ರೀಮುರುಳಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಅಂಬರೀಶ್ ಸುಮಲತ, ಸೇರಿದಂತೆ ಹತ್ತಾರು ಗಣ್ಯರು ನವಜೊಡಿಗೆ ಹಾರೈಸಿದರು.

ನಂತರ ಆಗಮಿಸಿದ್ದ ಗಣ್ಯರೇಲ್ಲರಿಗು ಭೂರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಇಂದು ಯಾವುದೇ ವಿಶೇಷ ಕಾರ್ಯಕ್ರಮ ಇಲ್ಲ ಜಸ್ಟ್ ಇಬ್ಬರು ಉಂಗುರ ಬದಲಾಯಿಸಿಕೊಂಡಿದ್ದು, ಎಲ್ಲವು ಸಂಪ್ರದಾಯದಂತೆ ನಡೆದಿದೆ. ಮೈಸೂರಿನ ಮಗಳು‌ ನಮ್ಮ‌ಮನೆ ಸೇರಿಕೊಳ್ಳುತ್ತಿರುವುದು ನಮಗೆ ಸಂತಸ ತಂದಿದೆ ಅಂತ ನಟ ಪುನಿತ್‌ರಾಜ್‌ಕುಮಾರ್ ಸಂತಸ ಹಂಚಿಕೊಂಡರು.

ಒಟ್ಟಾರೆ, ಯುವರಾಜ್‌ಕುಮಾರ್ ಸಾಂಸ್ಕೃತಿಕ ನಗರಿಯ ಅಳಿಯನಾಗುವ ಮೂಲಕ, ಡಾ.ರಾಜ್ ಕುಟುಂಬಕ್ಕೂ ಮೈಸೂರಿಗೂ ಇದ್ದ ಸಿನಿಮಾ ನಂಟು, ನೆಂಟಸ್ಥಿಕೆಯಾಗಿ ಬದಲಾಗಿದೆ. ಅದೇನೆ ಇದ್ದರೂ ಈಗಷ್ಟೆ ಎಂಗೆಂಜ್ ಆಗಿರೋ ಯುವ ಜೊಡಿಗೆ ನಮ್ಮ ಕಡೆಯಿಂದಲೂ ಶುಭ ಹಾರೈಸೋಣ.

ವರದಿ : ಸುರೇಶ್, Tv5 ಮೈಸೂರು

Next Story

RELATED STORIES